ಮೆಟ್ರೋಗೆ 3 ಸಾವಿರ ಕೋಟಿ ಸಾಲದ ಭರವಸೆ
Team Udayavani, Jun 7, 2019, 10:20 AM IST
ಬೆಂಗಳೂರು: ‘ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಗೆ ಆರ್ಥಿಕ ನೆರವು ನೀಡಲು ಏಷಿಯನ್ ಇನ್‌ಫ್ರಾಸ್ಟ್ರಕ್ಚರ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಎಐಐಬಿ) ಮುಂದೆಬಂದಿದ್ದು, ಈ ಸಂಬಂಧ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಜತೆ ಒಪ್ಪಂದಕ್ಕೆ ಸಹಿ ಹಾಕಿತು.
ಎರಡನೇ ಹಂತದಲ್ಲಿ ಬರುವ ರೀಚ್-6 (ಗೊಟ್ಟಿಗೆರೆ-ನಾಗವಾರ) ಒಂದು ಭಾಗದ ಯೋಜನೆಗೆ ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) ಸಹಯೋಗದಲ್ಲಿ ಎಐಐಬಿ 335 ಮಿಲಿಯನ್ ಯೂರೊ ಅಂದರೆ ಅಂದಾಜು ಮೂರು ಸಾವಿರ ಕೋಟಿ ರೂ. ಸಾಲ ನೀಡಲು ಮುಂದೆಬಂದಿದೆ. ಇದರೊಂದಿಗೆ ಉದ್ದೇಶಿತ ಸುರಂಗ ಮಾರ್ಗಕ್ಕೆ ವಿದೇಶಿ ಬ್ಯಾಂಕುಗಳಿಂದ ಬಿಎಂಆರ್‌ಸಿಗೆ ಒಟ್ಟಾರೆ 7,300 ಕೋಟಿ ರೂ. ಸಾಲದ ಭರವಸೆ ದೊರಕಿದೆ.
ಸಾಲದ ಯೋಜನಾ ಒಪ್ಪಂದಕ್ಕೆ ಈಚೆಗೆ ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇs್ ಹಾಗೂ ಎಐಐಬಿ ಮಹಾನಿರ್ದೇಶಕ ಸುಪಿ ತೆರವಣಿನ್‌ಥಾರ್ನ್ ಪರಸ್ಪರ ಸಹಿ ಹಾಕಿದರು.
ಗೊಟ್ಟಿಗೆರೆ-ನಾಗವಾರ ಮೆಟ್ರೋ ಸುರಂಗ ಮಾರ್ಗಕ್ಕೆ ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ (ಇಐಬಿ) 500 ಮಿಲಿಯನ್ ಯೂರೊ ಸಾಲ ನೀಡಲು ಮುಂದೆಬಂದಿದ್ದು, 2017ರ ಅಕ್ಟೋಬರ್ ಹಾಗೂ 2018ರ ಸೆಪ್ಟೆಂಬರ್‌ನಲ್ಲೇ ಈ ಸಂಬಂಧ ಒಡಂಬಡಿಕೆ ಕೂಡ ಆಗಿದೆ. ಅದರಂತೆ ಮೊದಲ ಹಂತದಲ್ಲಿ 300 ಮಿಲಿಯನ್ ಹಾಗೂ ಎರಡನೇ ಹಂತದಲ್ಲಿ 200 ಮಿಲಿಯನ್ ಯೂರೊ ಈ ಬ್ಯಾಂಕ್‌ನಿಂದ ಬರಲಿದೆ.
ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆ 26,405 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಲ್ಲಿ 12,141 ಕೋಟಿ ರೂ. ಸಾಲದ ರೂಪದಲ್ಲಿ ಬಿಎಂಆರ್‌ಸಿ ಕ್ರೋಡೀಕರಿಸಬೇಕಿದ್ದು, ಉಳಿದದ್ದು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬರಲಿದೆ. ಈಗ 7,300 ಕೋಟಿ ರೂ. ಸಾಲದ ಭರವಸೆ ಸಿಕ್ಕಿದೆ. ಉಳಿದ ಹಣವನ್ನು ಮುಂದಿನ ದಿನಗಳಲ್ಲಿ ಹೊಂದಿಸಲಾಗುವುದು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.