ಅಂಪಾಯರ್ ಸಾಹೇಬ್ರೆ… ಎನ್ ಮಾಡ್ತಾ ಇದ್ದೀರಾ?

ವಿಶ್ವಕಪ್ ಪಂದ್ಯದಲ್ಲಿ ಅಂಪಾಯರ್ ಮಾಡಿದ್ರು ಎಡವಟ್ಟು

Team Udayavani, Jun 7, 2019, 11:35 AM IST

gayl

ಲಂಡನ್: ಪ್ರತಿಷ್ಟಿತ ಏಕದಿನ ವಿಶ್ವಕಪ್ ಪಂದ್ಯಾವಳಿಯ ಗುರುವಾರದ ಪಂದ್ಯ ಹಲವರ ಕಣ್ಣು ಕೆಂಪಗಾಗುವಂತೆ ಮಾಡಿದೆ. ಪಂದ್ಯದಲ್ಲಿನ ಸರಿ ತಪ್ಪುಗಳನ್ನು ನಿರ್ಣಯ ಮಾಡುವ ಅಂಪಾಯರ್ಸ್ ಹಲವಾರು ತಪ್ಪುಗಳನ್ನು ಮಾಡಿ ಈಗ ಟೀಕೆಗೆ ಗುರಿಯಾಗಿದ್ದಾರೆ.

ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ನಾಟಿಂಗ್ ಹ್ಯಾಮ್  ಪಂದ್ಯದಲ್ಲಿ ಈ ಎಡವಟ್ಟು ನಡೆದಿದೆ. ವಿಂಡೀಸ್ ಬ್ಯಾಟಿಂಗ್ ದೈತ್ಯ  ಕ್ರಿಸ್ ಗೇಲ್ ಬ್ಯಾಟಿಂಗ್ ನಡೆಸುತ್ತಿದ್ದರು. ಈ ವೇಳೆ ಅಂಪಾಯರ್ ಎರಡೆರಡು ಸಲ ಕೆಟ್ಟ ತೀರ್ಪು ನೀಡಿದರು. ಎರಡೂ ಸಲ ಗೇಲ್ ಡಿಆರ್ ಎಸ್ ಅಪೀಲ್ ಮಾಡಿದರು. ಎರಡೂ ಸಲವು ಥರ್ಡ್ ಅಂಪಾಯರ್,  ಆನ್ ಫೀಲ್ಡ್ ಅಂಪಾಯರ್ ತೀರ್ಪಿಗೆ ವಿರುದ್ಧವಾಗಿಯೇ ತೀರ್ಪು ನೀಡಿದರು.

ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಎಸೆದ 5ನೇ ಓವರ್ ನ ಐದನೇ ಎಸೆತಕ್ಕೆ ಮತ್ತೆ ಲೆಗ್ ಬಿಫೋರ್ ವಿಕೆಟ್ ಗೆ ಮನವಿ ಮಾಡಲಾಯಿತು. ಮತ್ತದೇ ಕಥೆ. ಅಂಪಾಯರ್ ಯಥಾವತ್ತಾಗಿ ಔಟೆಂದು ಕೈ ಮೇಲಕ್ಕೆತ್ತಿದರು. ಗೇಲ್ ಮತ್ತೆ ಡಿಆರ್ ಎಸ್ ಮನವಿ ಮಾಡಿದರು. ಆದರೆ ಈ ಬಾರಿ ‘ಅಂಪಾಯರ್ಸ್ ಕಾಲ್’ ಎಂಬ ತೀರ್ಪು ಬಂದ ಕಾರಣ ಗೇಲ್ ಔಟಾಗಬೇಕಾಯಿತು.

ಆದರೆ ನಂತರ ಗೊತ್ತಾದ ವಿಷಯವೇನೆಂದರೆ ಗೇಲ್ ಔಟಾದ ಎಸೆತದ ಹಿಂದಿನ ಎಸೆತ ಅಂದರೆ ನಾಲ್ಕನೇ ಎಸೆತ ನೋಬಾಲ್ ಆಗಿತ್ತು. ಸ್ಟಾರ್ಕ್ ಬಾಲ್ ಹಾಕುವಾಗ ಬೌಲಿಂಗ್ ಕ್ರೀಸ್ ದಾಟಿ ಎದುರು ಕಾಲು ಇಟ್ಟಿದ್ದರು. ಆದರೆ ಇದನ್ನು ಅಂಪಾಯರ್ ಗಮನಿಸಲೇ ಇಲ್ಲ. ಈ ಬಾಲ್ ನೋ ಬಾಲ್ ಆಗಿದ್ದರೆ ಅದರ ಮುಂದಿನ ಎಸೆತ ಫ್ರೀ ಹಿಟ್ ಆಗುತ್ತಿತ್ತು. ಆಗ ಬಹುಶಃ ಗೇಲ್ ಔಟಾಗುತ್ತಿರಲಿಲ್ಲ.

ಏನೇ ಆಗಲಿ, ಇಷ್ಟು ದೊಡ್ಡ ನೋ ಬಾಲ್ ಆದು ಹೇಗೆ ಅಂಪಾಯರ್ ಗೆ ಕಾಣಿಸಲಿಲ್ಲವೋ ! ಇನ್ನಾದರೂ ವಿಶ್ವ ಕಪ್ ನಂತಹ ದೊಡ್ಡ ಕೂಟದಲ್ಲಿ ಅಂಪಾಯರಿಂಗ್ ಗುಣಮಟ್ಟದ ಬಗ್ಗೆ ಐಸಿಸಿ ಗಮನ ಹರಿಸಬೇಕು ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಾಪ್ ನ್ಯೂಸ್

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

CM-ibrahim

HDK ವಿರುದ್ಧ ಜಮೀರ್‌ ಹೇಳಿಕೆ ತಪ್ಪು: ಸಿ.ಎಂ. ಇಬ್ರಾಹಿಂ

Sidda Speach

B.Z. Zameer Ahmed Khan ‘ಕರಿಯ’ ಎನ್ನಬಾರದಿತ್ತು: ಸಿಎಂ ಸಿದ್ದರಾಮಯ್ಯ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Pro Kabaddi Match: ತಲೈವಾಸ್‌ಗೆ ಸೋಲುಣಿಸಿದ ಹರಿಯಾಣ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.