ಮಹಾರಾಷ್ಟ್ರ: ಅನಾಥರಿಗಾಗಿ ಮೊಬೈಲ್ ಆ್ಯಪ್ ಲೋಕಾರ್ಪಣೆ
Team Udayavani, Jun 7, 2019, 1:19 PM IST
ಮುಂಬಯಿ: ಅನಾಥರಿಗೆ ಪುನರ್ವಸತಿ ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಕಾರ್ಯ ಮಾಡುತ್ತಿರುವ ಸ್ವನಾಥ ಫೌಂಡೇಶನ್ ಅನಾಥರ ಕನಸನ್ನು ನನಸು ಮಾಡಲು ಅವರಿಗೆ ಬೆಂಬಲ ನೀಡಲು ಹೊಸ ಆ್ಯಪ್ ಮೂಲಕ ಉತ್ತಮ ಕಾರ್ಯ ಪದ್ಧತಿಯನ್ನು ಕೈಗೊಂಡಿದೆ. ಅನಾಥರಿಂದ ಸ್ವನಾಥರನ್ನಾಗಿಸಲು ಹಾಗೂ ಸೂಕ್ಷ್ಮ ಮನಸ್ಸಿನ ಜನರನ್ನು ಜೋಡಿಸುವ ಆವಶ್ಯಕತೆಯಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಸೀಡಿಂಗ್ ಐಸ್ ಆ್ಯಂಡ್ ಹೆಲ್ಪಿಂಗ್ ಹ್ಯಾಂಡ್ಸ್ ಫೌಂಡೇಶನ್ ಮತ್ತು ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಯಿತು. ಈ ವೇಳೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು, ಸ್ವನಾಥ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದರು.
ರಾಜ್ಯ ಸರಕಾರ ಅನಾಥರಿಗೆ ಮೀಸಲಾತಿ ಜಾರಿಗೊಳಿಸಿದ ಅನಂತರ, ಇವರನ್ನು ಎಲ್ಲಾ ಮಟ್ಟದಲ್ಲಿ ಸ್ವಾಗತ ಮಾಡಲಾಯಿತು. ಹಾಗೆಯೇ ಅನಾಥರಿಗೆ ಸಹಾಯ ಮಾಡಲು ಸಾರ್ವಜನಿಕರು ಹಾಗೂ ಸರಕಾರ ಒಟ್ಟುಗೂಡಿ ಕೆಲಸ ಮಾಡಬೇಕಾಗಿದೆ. ಅನಾಥರಿಂದ ಸ್ವನಾಥರನ್ನಾಗಿಸಲು ಸಂವೇದನಾಶೀಲತೆ ಇರುವ ಮೂಲಕ ಮಾಧ್ಯಮ ಮುಖೇನ ಹೊಸ ಶಕ್ತಿ ನಿರ್ಮಾಣಗೊಳ್ಳಬೇಕಾಗಿದೆ.
ಸ್ವನಾಥ ಫೌಂಢೇಶನ್ ಮಾಧ್ಯಮದ ಮೂಲಕ ಒಂದು ಹೊಸ ಪ್ರಯತ್ನ ನಡೆಸಿದೆ.
ಇನ್ನುಮುಂದೆ, ಈ ಕಾರ್ಯವು ದೊಡ್ಡ ಮಟ್ಟದಲ್ಲಿ ನಡೆಯಲಿದೆ, ಸರಕಾರದ ವತಿಯಿಂದ ಹೊಸ ಕಾರ್ಯ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.
ಈ ವೇಳೆ ವಿಶ್ವ ಹಿಂದು ಪರಿಷತ್‌ನ ವಿದೇಶ ವಿಭಾಗದ ಕಾರ್ಯದರ್ಶಿ ಪ್ರಶಾಂತ್ ಹರ್ತಾಳಕರ್, ಸ್ವನಾಥ ಸಂಸ್ಥೆಯ ಕಾರ್ಯದರ್ಶಿ ಶ್ರೇಯಾ ಭಾರತೀಯ, ಕೋಂಕಣ ವಿಭಾಗದ ನಿರ್ದೇಶಕ ಸತೀಶ್ ಮೊಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.