ಆಧಾರ್ ಕಾರ್ಡ್‌ಗೆ ನಿತ್ಯ ಪರದಾಟ
•ಕೆವಿಜಿ ಬ್ಯಾಂಕ್‌ನಲ್ಲಿ ಮಾತ್ರ ಆಧಾರ್ ಕೇಂದ್ರ•ಬೆಳಗಿನ ಜಾವ ನಾಲ್ಕು ಗಂಟೆರಿಂದಲೇ ಸರದಿ ಸಾಲು
Team Udayavani, Jun 7, 2019, 2:19 PM IST
ಮುಂಡರಗಿ: ಕೆವಿಜಿ ಬ್ಯಾಂಕ್ ಎದುರು ಆಧಾರ್ ಕಾರ್ಡು ಮಾಡಿಸಲು ಬಂದಿರುವ ಜನರು.
ಮುಂಡರಗಿ: ತಾಲೂಕಿನ ಜನರು ಆಧಾರ ಕಾರ್ಡ್‌ಗಾಗಿ ಹಗಲು-ರಾತ್ರಿಯೆನ್ನದೇ ಸರದಿ ಸಾಲಿನಲ್ಲಿ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತಾಲೂಕಿನ ಲಕ್ಷಾಂತರ ಜನರಿಗೆ ಪಟ್ಟಣದ ಕೆವಿಜಿ ಬ್ಯಾಂಕಿನಲ್ಲಿರುವ ಆಧಾರ್ ಕೇಂದ್ರ ಒಂದೇ ಆಸರೆಯಾಗಿದೆ.
ವಾರಗಟ್ಟಲೇ ಸರದಿಗಾಗಿ ಜನರು ಕಾಯ್ದು ಹೈರಾಣ ಆಗುವಂತಹ ಸ್ಥಿತಿ ಬಂದಿದೆ. ದಿನವೊಂದಕ್ಕೆ ಬರೀ ಇಪ್ಪತ್ತೈದು ಜನರ ಆಧಾರ್ ಕಾರ್ಡ್‌ಗಳು ಮಾತ್ರ ಕಂಪ್ಯೂಟರ್‌ನಲ್ಲಿ ಅಪಲೋಡ್ ಆಗುತ್ತಿವೆ. ಇದರಿಂದ ಜನರು ಮತ್ತೆ ಮರಳಿ ಮನೆಗೆ ಹೋಗುತ್ತಿದ್ದಾರೆ. ಪ್ರತಿ ದಿನ ಹಳ್ಳಿಗಳಿಂದ ಬರುವ ಜನರು ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು ಬಂದು ಸರದಿ ಸಾಲಿನಲ್ಲಿ ನಿಂತರೂ ಆಧಾರ ಕಾರ್ಡ್ ಆಗುತ್ತಿಲ್ಲ. ಏಕೆಂದರೆ ಒಂದೇ ಒಂದು ಆಧಾರ್ ಕಾರ್ಡ್ ಅಪಲೋಡ್ ಮಾಡಲು ತಾಸುಗಟ್ಟಲೇ ಸಮಯ ವ್ಯಯವಾಗುತ್ತದೆ. ಜತೆಗೆ ನೆಟ್ವರ್ಕ ಇಲ್ಲವೇ ಕಂಪ್ಯೂಟರ್‌ನ ಸರ್ವರ್ ಡೌನ್ ಆದರೆ ಮತ್ತೆ ಮರುದಿನವೇ ಸರದಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗುತ್ತದೆ.
ತಾಲೂಕಿನಲ್ಲಿ ಪ್ರತಿ ಗ್ರಾಪಂ ಕಚೇರಿಯಲ್ಲಿ, ತಾಪಂ ಆವರಣದಲ್ಲಿ ಹಾಗೂ ತಹಶೀಲ್ದಾರ್ ಕಚೇರಿ, ಅಂಚೆ ಇಲಾಖೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನವೀಕರಣ ಇಲ್ಲವೇ ಹೊಸದಾಗಿ ಮಾಡುವ ಕೇಂದ್ರಗಳನ್ನು ತೆರೆಯಬೇಕಾಗಿತ್ತು. ಆದರೆ ಪಟ್ಟಣದ ಕೆವಿಜಿ ಬ್ಯಾಂಕ್‌ನಲ್ಲಿ ಮಾತ್ರ ಆಧಾರ್ ಕಾರ್ಡ್ ಮಾಡುವ ಕೇಂದ್ರವೊಂದೇ ಇದ್ದು, ಜನರು ಆಧಾರ್ ಕಾರ್ಡ್‌ಗಾಗಿ ಪರದಾಡುವಂತಾಗಿದೆ. ಪಟ್ಟಣದ ಎಸ್‌ಬಿಐನಲ್ಲಿ ಇದ್ದ ಕೇಂದ್ರ ಕಳೆದ ಮೂರು ತಿಂಗಳಿಂದ ತಾಂತ್ರಿಕ ಕಾರಣಗಳಿಗಾಗಿ ಬಂದಾಗಿದೆ. ಇದರಿಂದ ಪಟ್ಟಣದ ಕೆವಿಜಿ ಬ್ಯಾಂಕ್‌ನಲ್ಲಿರುವ ಆಧಾರ ಕೇಂದ್ರದ ಮೇಲೆ ಕೆಲಸದ ಒತ್ತಡ ಸಹ ಜಾಸ್ತಿಯಾಗಿದೆ.
•ಹು.ಬಾ. ವಡ್ಡಟ್ಟಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.