ಪರಿಸರ ಉಳಿಸಿ-ಬೆಳೆಸದಿದ್ದರೆ ಅಪಾಯ ಖಚಿತ
ಅರಣ್ಯ ನಾಶದಿಂದ ಪ್ರಕೃತಿ ವಿಕೋಪ ಸಂಭವ: ಬಿರಾದಾರ•ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
Team Udayavani, Jun 7, 2019, 2:58 PM IST
ವಿಜಯಪುರ: ನಗರದ ಲಯನ್ಸ್ ಹಿರಿಯ ನಾಗರಿಕ ವೇದಿಕೆ ಮಾಸಿಕ ಸಭೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಬಸವರಾಜ ಬಿರಾದಾರ ಚಾಲನೆ ನೀಡಿದರು.
ವಿಜಯಪುರ: ಪ್ರಸಕ್ತ ಸಂದರ್ಭದಲ್ಲಿ ನಮ್ಮ ಪರಿಸರದಲ್ಲಿದ್ದ ಅರಣ್ಯವೆಲ್ಲ ನಾಶವಾಗಿರುವ ಪರಿಣಾಮ ನಾವೀಗ ಅದರ ದುಸ್ಪರಿಣಾಮ ಎದುರಿಸುತ್ತಿದ್ದೇವೆ. ಮತ್ತೂಂದೆಡೆ ನಮ್ಮ ಜೀವನಕ್ಕೆ ಜೀವಸೆಲೆ ಒದಗಿಸುವ ಕೆರೆ, ಡ್ಯಾಂಗಳು ಹೂಳಿನಿಂದ ತುಂಬಿಕೊಂಡು, ನೀರಿನ ಸಂಗ್ರಹ ಕಡಿಮೆಯಾಗಿ ಪರದಾಡುವ ದುಸ್ಥಿತಿ ನಿರ್ಮಾಣವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಗಂಭೀರ ಅಪಾಯ ಎದುರಿಸುವುದು ಖಂಡಿತ ಎಂದು ಕೃಷಿ ಅಧಿಕಾರಿ ಬಸವರಾಜ ಬಿರಾದಾರ ಎಚ್ಚರಿಸಿದರು.
ನಗರದಲ್ಲಿ ಲಯನ್ಸ್ ಹಿರಿಯ ನಾಗರಿಕ ವೇದಿಕೆ ಲಯನ್ಸ್ ಬ್ಲಿಡ್ ಬ್ಯಾಂಕ್ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ಮಾಸಿಕ ಸಭೆಯಲ್ಲಿ ಪರಿಸರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಕ್ಷಣ ಪರಿಸರ ಸಂರಕ್ಷಣೆಗೆ ಅದ್ಯತೆ ನೀಡದಿದ್ದಲ್ಲಿ ಭವಿಷ್ಯದಲ್ಲಿ ನಾವು ಹಾಗೂ ನಮ್ಮ ಪೀಳಿಗೆ ಗಂಭೀರ ಸ್ವರೂಪದ ಜಲಕ್ಷಾಮ ಎದುರಿಸಬೇಕಾದ ದುಸ್ಥಿತಿಯ ಕಾಲ ದೂರವಿಲ್ಲ. ಹೀಗಾಗಿ ಪ್ರತಿಯೊಬ್ಬರು ತಮ್ಮ ಮನೆ ಆವರಣದಲ್ಲಿ, ಹೊಲ-ತೋಟಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು ಮರಗಳನ್ನಾಗಿ ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಭರತೇಶ ಕಲಗೊಂಡ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ದೇಶಕ್ಕೆ 308ನೇ ಸ್ಥಾನ ಹಾಗೂ ರಾಜ್ಯಕ್ಕೆ 8ನೇ ಸ್ಥಾನ ಪಡೆದ ಪ್ರತಿಭಾವಂತ ಹಾಗೂ ರೈತನ ಮಗ ಗಿರೀಶ ಧರ್ಮರಾಜ ಕಲಗೊಂಡ ಅವರನ್ನು ಸನ್ಮಾನಿಸಲಾಯಿತು.
ಡಾ| ಎನ್.ಬಿ. ದೇಸಾಯಿ, ಆರ್.ಎ. ಗುಡಿ, ಡಾ| ಎಸ್.ಬಿ.ಬೀಳೂರ, ಎ.ಎಸ್. ಕೋರಿ, ಎಸ್.ಎಸ್. ಸಜ್ಜನ, ಉಮೇಶ ಕಲಗೊಂಡ, ವಿಶ್ವನಾಥ ಕಲಗೊಂಡ, ಎನ್.ಎಸ್.ರೆಡ್ಡಿ, ವಿ.ಎನ್.ಕಪಾಳೆ, ಎಸ್.ಎಸ್.ಮಗದುವಲೆ, ಎಸ್.ವೈ. ವಾಲಿಕಾರ, ಎಸ್.ಸಿ. ಕಮತಗಿ, ಆರ್.ಎಸ್. ಹಂದಿಗೋಳ, ಬಿ.ಎಸ್. ಹೊನಬರಟ್ಟಿ, ಈರಮ್ಮ ಕೊಳ್ಳಿ ಇತರರು ಉಪಸ್ಥಿತರಿದ್ದರು.
ವಿ.ಆರ್. ಕುಲಕರ್ಣಿ ಸ್ವಾಗತಿಸಿದರು. ಎಸ್.ಎಸ್. ಬಣಜಿಗೇರ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.