ತೀವ್ರ ಅನಾರೋಗ್ಯಕ್ಕೀಡಾದ ಬಾಲಕನನ್ನು 8 ಕಿ.ಮೀ ಹೊತ್ತೊಯ್ದ CRPF ಪಡೆ!
Team Udayavani, Jun 7, 2019, 3:10 PM IST
ಸುಕ್ಮಾ : ನಕ್ಸಲ್ ಪೀಡಿತ ಗುಮೊದಿ ಪ್ರದೇಶದಲ್ಲಿ ಸಿಆರ್‌ಪಿಎಫ್ ಪಡೆಗಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 13 ವರ್ಷದ ಬಾಲಕನೊಬ್ಬನನ್ನು 8 ಕಿ.ಮೀ ದೂರ ಹೊತ್ತೊಯ್ದು ಚಿಕಿತ್ಸೆ ನೀಡಿ ಕರ್ತವ್ಯದ ಒತ್ತಡದ ನಡುವೆಯೂ ಮಾನವೀಯತೆ ಮೆರೆದಿದ್ದಾರೆ.
231 ನೇ ಬೆಟಾಲಿಯನ್‌ನ ಯೋಧರು ಕಾವಲು ಕಾಯುತ್ತಿದ್ದ ವೇಳೆ ಕಾಮಾಲೆ ಕಾಯಿಲೆಯಿಂದ ಬಳಲಿದ್ದ ಬಾಲಕನನ್ನು ಕಂಡಿದ್ದಾರೆ. ಕೂಡಲೇ ಆತನನ್ನು ಕಾಟ್ ಮೂಲಕ 8 ಕಿ.ಮೀ ಯಷ್ಟು ದೂರ ಹೊತ್ತೊಯ್ದು ಕೊಂಡಸಾವಲಿ ಎಂಬಲ್ಲಿನ ಕ್ಯಾಂಪ್‌ನಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕ ಈಗ ಚೇತರಿಸಿಕೊಂಡಿದ್ದಾನೆ.
ಯೋಧರ ವಾಹನಗಳು ಸಂಚರಿಸಲು ರಸ್ತೆಗಳನ್ನುತಪಾಸಣೆ ಮಾಡಬೇಕಾಗಿರುವಷ್ಟರ ಮಟ್ಟಿಗೆ ನಕ್ಸಲ ಪ್ರಭಾವ ಸುಕ್ಮಾದಲ್ಲಿ ನಿರ್ಮಾಣವಾಗಿದೆ.ನಕ್ಸಲರು ಭದ್ರತಾ ಪಡೆಗಳನ್ನು ಗುರಿಯಾಗಿರಿಸಿ ನೆಲಬಾಂಬ್‌ಗಳನ್ನು ಹುಗಿದಿಟ್ಟುದಾಳಿ ನಡೆಸುತ್ತಾರೆ.
ವಿಡಿಯೋ ನೋಡಿ
Chhattisgarh: While patrolling on June 6, troops of 231 battalion CRPF found a severely ill 13-year-old boy in Gumodi village.The troops carried the boy on a cot for 8 km & got him treated in their camp Kondasavli in Sukma.He was found to be suffering from jaundice; is stable now pic.twitter.com/MiFKBss5EY
— ANI (@ANI) June 7, 2019
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.