ನಕ್ಸಲ್ ಬಾಧಿತ ಅಮಾಸೆಬೈಲಿನಲ್ಲಿ “ಸೌರ ವಿದ್ಯುತ್ ಕ್ರಾಂತಿ’
Team Udayavani, Jun 8, 2019, 3:00 AM IST
ಕುಂದಾಪುರ: ಸೋಲಾರ್ ಬೆಳಕಿನ ಅಳವಡಿಕೆ ಮೂಲಕ ದೇಶದ ಗಮನ ಸೆಳೆದಿರುವ ಕುಂದಾಪುರ ತಾಲೂಕಿನ ಅಮಾಸೆಬೈಲು ಗ್ರಾಮದಲ್ಲಿ ವಿದ್ಯುತ್ ಸೌಕರ್ಯವಿಲ್ಲದ 1,643 ಮನೆಗಳಿಗೆ ವಿಕೇಂದ್ರೀಕೃತ ಬೆಳಕಿನ ವ್ಯವಸ್ಥೆ ಮತ್ತು 27 ಸೋಲಾರ್ ದಾರಿ ದೀಪಗಳನ್ನು ಅಳವಡಿಸಲಾಗಿದೆ. ಇದರ ಉದ್ಘಾಟನೆ ಜೂ.9ರಂದು ಅಮಾಸೆಬೈಲು ಪ್ರೌಢಶಾಲಾ ಆವರಣದಲ್ಲಿ ನಡೆಯಲಿದೆ.
ಅಮಾಸೆಬೈಲಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಸೋಲಾರ್ ಬೆಳಕಿನ ವ್ಯವಸ್ಥೆ ಅಳವಡಿಕೆ ಕಾರ್ಯ ಈಗಾಗಲೇ ಸಾಕಾರಗೊಂಡಿದ್ದು, ಒಟ್ಟು 2.13 ಕೋ.ರೂ.ವ್ಯಯಿಸಲಾಗಿದೆ.
ಜೂ. 9ರಂದು ಬೆಳಗ್ಗೆ 10.30ಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದಿನ ಉಡುಪಿ ಜಿಲ್ಲಾಧಿಕಾರಿ ನಕ್ಸಲ್ ಪ್ರದೇಶಾಭಿವೃದ್ಧಿಯಡಿ 25 ಲಕ್ಷ ರೂ. ಅನುದಾನ ನೀಡಿದ್ದರು. ಫಲಾನುಭವಿಗಳು 3 ಸಾವಿರ ರೂ.ಗಳಂತೆ ಭರಿಸಿದ್ದರು. ಶಾಸಕರಾಗಿದ್ದ ಗೋಪಾಲ ಪೂಜಾರಿ, ವಿ.ಪ. ಸದಸ್ಯರಾದ ಕ್ಯಾ| ಗಣೇಶ್ ಕಾರ್ಣಿಕ್, ಪ್ರತಾಪಚಂದ್ರ ಶೆಟ್ಟಿ, ಕೋಟ ಶ್ರೀನಿವಾಸ ಪೂಜಾರಿ ತಲಾ 5 ಲಕ್ಷ ರೂ., ಸಂಸದೆ ಶೋಭಾ ಕರಂದ್ಲಾಜೆ 2 ಲಕ್ಷ ರೂ. ಅನುದಾನ ನೀಡಿದ್ದರು.
ಸೆಲ್ಕೋ ಕಂಪೆನಿಯು 497 ಮನೆಗಳಿಗೆ 2 ದೀಪಗಳ ಸಂಪರ್ಕ, 1 ಸಾವಿರ ಮನೆಗಳಿಗೆ 4 ದೀಪಗಳ ಸಂಪರ್ಕ, 20 ಬೀದಿ ದೀಪಗಳನ್ನು ಅಳವಡಿಸಿತು. ಅಮಾಸೆಬೈಲು ಟ್ರಸ್ಟ್ ಮೂಲಕ 51 ಮನೆಗಳಿಗೆ, ಪೇಜಾವರ ಮಠದ ಸಹಯೋಗದಲ್ಲಿ 1 ಚರ್ಚ್, 32 ದೇವಸ್ಥಾನಗಳಿಗೆ ಉಚಿತವಾಗಿ ನೀಡಲಾಯಿತು. 750 ಮನೆಗಳಿಗೆ ಧರ್ಮಸ್ಥಳ ಯೋಜನೆ ಮೂಲಕ ಬೆಳಕು ಹರಿಸಲು ಆರ್ಥಿಕ ನೆರವು ದೊರೆಯಿತು.
ಎ.ಜಿ. ಕೊಡ್ಗಿ ನೇತೃತ್ವದ ಅಮಾಸೆಬೈಲು ಚಾರಿಟೆಬಲ್ ಟ್ರಸ್ಟ್ ಗ್ರಾಮವನ್ನು ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸಲು ಶ್ರಮಿಸಿದೆ. 2012ರಲ್ಲಿ ವಿದ್ಯುತ್ಛಕ್ತಿ ಕೊರತೆಯ ಗ್ರಾಮೀಣ ಪ್ರದೇಶಗಳಿಗೆ ಕೇಂದ್ರದಿಂದ ಎಂಎನ್ ಆರ್ಇ ಸಬ್ಸಿಡಿ ಮೂಲಕ ಸೋಲಾರ್ ದೀಪ ಹಾಕುವ ಯೋಜನೆ ಬಂತು. ಇದರ ಸದ್ಬಳಕೆಗೆ ಟ್ರಸ್ಟ್ ಮುಂದಾಯಿತು.
ಕೊಡ್ಗಿಯವರು 2.13 ಕೋ.ರೂ.ಗಳ ಯೋಜನಾ ರೂಪುರೇಷೆ ತಯಾರಿಸಿ ಕ್ರೆಡೆಲ್ ಮೂಲಕ ಪ್ರಸ್ತಾವನೆ ಕಳುಹಿಸಿದರು. 2014ರಲ್ಲಿ ಕೇಂದ್ರದಿಂದ ಶೇ.30 ಮತ್ತು ರಾಜ್ಯದಿಂದ ಶೇ. 20- ಹೀಗೆ ಒಟ್ಟು ಶೇ.50 ನೆರವಿಗೆ ಅನುಮೋದನೆ ದೊರೆಯಿತು. 2016ರಲ್ಲಿ ಅನುಷ್ಠಾನಕ್ಕೆ ಸಿದ್ಧವಾಗಿ 2017ರಲ್ಲಿ ಪೂರ್ಣಗೊಂಡು ಉದ್ಘಾ ಟನೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
Bengaluru: ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ: ಕಿಡಿಗೇಡಿ ವಿರುದ್ಧ ದೂರು
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.