ನಿವೇಶನ ಮಂಜೂರಾದರೂ ಕಟ್ಟಡವಿಲ್ಲ!
ಸಿಟಿಒ ಗುಡ್ಡೆಯ ಸ್ತ್ರೀಶಕ್ತಿ ಭವನದಲ್ಲಿ ಕಾರ್ಯನಿರ್ವಹಿಸುತ್ತಿದೆ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ
Team Udayavani, Jun 8, 2019, 5:50 AM IST
ನಗರ: ಹಲವು ವರ್ಷಗಳಿಂದ ಬಾಡಿಗೆ ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಗೆ ಸ್ವಂತ ಕಟ್ಟಡವಿಲ್ಲ. ಸರಕಾರ ಇಲಾಖೆಗೆ 8.5 ಸೆಂಟ್ಸ್ ನಿವೇಶನ ಮುಂಜೂರು ಮಾಡಿದೆ. ಆದರೆ ಕಟ್ಟಡ ನಿರ್ಮಾಣಕ್ಕಾಗಿ ಅನುದಾನ ಮಂಜೂರು ಆಗಬೇಕಷ್ಟೇ.
ತಾಲೂಕಿನಲ್ಲಿ 370 ಅಂಗನವಾಡಿ ಕೇಂದ್ರಗಳಿವೆ. ಅವುಗಳ ನಿರ್ವಹಣೆ ಜವಾಬ್ದಾರಿಯ ಜತೆಗೆ ಮಹಿಳೆಯರ ಮತ್ತು ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಯ ಹೊಣೆ ಹೊತ್ತಿರುವ ಇಲಾಖೆಯ ಅಧಿಕಾರಿಗಳು ಹಾಗೂ ಸಿಬಂದಿ ಹಲವು ವರ್ಷಗಳಿಂದ ಬಾಡಿಕೆ ಕಟ್ಟಡವನ್ನೇ ಆಶ್ರಯಿಸಿದ್ದಾರೆ.
ಆರಂಭದಿಂದಲೂ ಬಾಡಿಗೆ
ಇಲಾಖೆ ಮಾಹಿತಿಯ ಪ್ರಕಾರ 1983ರಲ್ಲಿ ಪುತ್ತೂರಿನಲ್ಲಿ ಸಿಡಿಪಿಒ ಕಚೇರಿ ಕಾರ್ಯಾರಂಭ ಮಾಡಿತ್ತು. ತಾ.ಪಂ.ನ ಹಳೆಯ ಕಟ್ಟಡವೊಂದರಲ್ಲಿ ಬಾಡಿಗೆ ನೆಲೆಯಲ್ಲಿ 2015ರ ತನಕ ಕೆಲಸ ಮಾಡಿತು. ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದರೂ ಅಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ ನೌಕರರು, ಸ್ವಂತ ಕಟ್ಟಡಕ್ಕಾಗಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಇತ್ತೀಚೆಗೆ ಈ ಬೇಡಿಕೆಗೆ ಸ್ಪಂದನೆ ಸಿಕ್ಕಿ, ನಗರದ ಹೊರವಲಯದಲ್ಲಿರುವ ಸಿಟಿಒ ಗುಡ್ಡೆಯಲ್ಲಿರುವ ಕೊರಗ ಸಮುದಾಯ ಭವನದ ಸಮೀಪ 8.5 ಸೆಂಟ್ಸ್ ನಿವೇಶನ ಮಂಜೂರಾಗಿದೆ. ಪಹಣಿ ಪತ್ರವೂ ಇಲಾಖೆಯ ಹೆಸರಿನಲ್ಲಿ ಆಗಿದೆ. ಅದರ ಬೆನ್ನಲ್ಲೇ ಕಟ್ಟಡಕ್ಕೆ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಟ್ಟಡವಾಗುವ ತನಕ ಬಾಡಿಗೆ ಕಚೇರಿಯೇ ಗತಿ ಎನ್ನುವಂತಾಗಿದೆ.
ಈಗ ಸಿಟಿಒ ಗುಡ್ಡೆಯಲ್ಲಿರುವ ಸ್ತ್ರೀಶಕ್ತಿ ಭವನದಲ್ಲಿ ಕಚೇರಿ ಇದೆ. ಹಾಲಿ ಮಂಜೂರಾದ ನಿವೇಶನವೂ ಅದೇ ಪರಿಸರದಲ್ಲಿದೆ. ತಾ.ಪಂ. ಹಳೆಯ ಕಟ್ಟಡ ತೆರವುಗೊಳಿಸಿದ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುತ್ತಿದ್ದು, ಅದರಲ್ಲೇ ಮತ್ತೆ ಬಾಡಿಗೆ ನೆಲೆಯಲ್ಲಿ ಕಚೇರಿಗೆ ಸ್ಥಳಾವಕಾಶ ಒದಗಿಸುವಂತೆಯೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಕೆಲವು ಸಮಯಗಳಿಂದ ಸಿಡಿಪಿಒ ಹುದ್ದೆಯೂ ಖಾಲಿ ಇದ್ದು, ಭಾರತಿ ಜೆ.ಕೆ. ಅವರು ಪ್ರಭಾರ ಸಿಡಿಪಿಒ ಆಗಿದ್ದಾರೆ. 16 ಮೇಲ್ವಿಚಾರಕ ಹುದ್ದೆಗಳಿದ್ದರೂ ಇರುವುದು 12 ಮಂದಿ ಮಾತ್ರ. ಪ್ರಥಮ ದರ್ಜೆ ಸಹಾಯಕರ 6 ಹುದ್ದೆಗಳಿದ್ದು, ಎಲ್ಲವೂ ಖಾಲಿ ಇವೆ. 4 ಮಂದಿ ಕಂಪ್ಯೂಟರ್ ಆಪರೇಟರ್ ಹಾಗೂ ಒಬ್ಬರು ವಾಹನ ಚಾಲಕರು ಇದ್ದಾರೆ.
ಕೇಂದ್ರ ಸ್ಥಳದಲ್ಲೇ ಕಚೇರಿ ಇರಲಿ
ಪ್ರಸ್ತುತ ನಗರದ ಹೊರವಲಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ ಇರುವುದರಿಂದ ಕೆಲಸ ಮಾಡುವ ಮಹಿಳೆಯರಿಗೆ ಹಾಗೂ ಕಚೇರಿ ಸೌಲಭ್ಯಗಳಿಗಾಗಿ ಬರುವವರಿಗೆ ಸಮಸ್ಯೆ ಆಗುತ್ತಿದೆ. ಈಗ ಲಭಿಸಿದ ನಿವೇಶನವೂ ನಗರದ ಹೊರವಲಯದಲ್ಲೇ ಇರುವುದರಿಂದ ಅಲ್ಲಿ ಕಟ್ಟಡ ನಿರ್ಮಾಣ ಮಾಡಿದರೂ ಸಮಸ್ಯೆಯೇ. ಕೇಂದ್ರ ಸ್ಥಳದಲ್ಲಿಯೇ ಕಚೇರಿ ಹೆಚ್ಚು ಅನುಕೂಲವಾಗುತ್ತದೆ
– ಶಾಂತಿ ಹೆಗ್ಡೆ, ನಿವೃತ್ತ ಸಿಡಿಪಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು
Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ
Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.