ದುಬೈ ಬಸ್ ದುರಂತದಲ್ಲಿ 12 ಭಾರತೀಯರ ಸಾವು
Team Udayavani, Jun 8, 2019, 6:00 AM IST
ಒಮನ್‌ನ ಸಾರಿಗೆ ಸಂಸ್ಥೆ ಮ್ವಸಲತ್‌ಗೆ ಸೇರಿದ ಬಸ್ ಅಲ್ ರಶೀದಿಯಾ ಮೆಟ್ರೋ ನಿಲ್ದಾಣದ ರಸ್ತೆಗೆ ಆಗಮಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಬದಿಯಲ್ಲಿದ್ದ ಸಿಗ್ನಲ್ ಫಲಕಕ್ಕೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ಅಸುನೀಗಿದ 12 ಭಾರತೀಯರ ಪೈಕಿ ಆರು ಮಂದಿ ಕೇರಳದರಾಗಿದ್ದಾರೆ. ಈ ಪೈಕಿ ನಾಲ್ವರ ಗುರುತು ಪತ್ತೆಯಾಗಿದೆ. ಅವರನ್ನು ತಿರುವನಂತಪುರದ ದೀಪಕ್ ಕುಮಾರ್, ಜಮಾಲುದ್ದೀನ್ ಅರಕ್ಕವೀಟಿಲ್, ತಲಶೆರಿ ಮೂಲದ ಚೊನೋಕ್ಕದೇವಾತ್ತು ಉಮ್ಮರ್, ಅವರ ಪುತ್ರ ನಬೀಲ್ ಎಂದು ಗುರುತಿಸಲಾಗಿದೆ. ಉಳಿದವರನ್ನು ವಾಸುದೇವನ್ ಮತ್ತು ತಿಲಕನ್ ಎಂದು ಗುರುತಿಸಲಾಗಿದೆ ಎಂದು ಭಾರತೀಯ ದೂತವಾಸ ಕಚೇರಿ ತಿಳಿಸಿದೆ.
ಒಮನ್‌ನಿಂದ ದುಬೈಗೆ ತೆರಳುತ್ತಿದ್ದ ಈ ಬಸ್‌ನಲ್ಲಿ 31 ಮಂದಿ ಪ್ರಯಾಣಿಸುತ್ತಿದ್ದರು. ದುರಂತದ ಬಗ್ಗೆ ಭೂತಾನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಶೋಕ ವ್ಯಕ್ತಪಡಿಸಿ, ಸೂಕ್ತ ನೆರವಿನ ಭರವಸೆ ನೀಡಿದ್ದಾರೆ. ದೂತವಾಸ ಕಚೇರಿ +971565463903 ದೂರವಾಣಿ ಸಂಖ್ಯೆ ನೀಡಿದ್ದು, ಅದನ್ನು ಸದುಪಯೋಗ ಮಾಡುವಂತೆ ಸೂಚಿಸಿದೆ. ಪ್ರಯಾಣಿಕರ ಕುಟುಂಬ ಸದಸ್ಯರನ್ನು ಶೀಘ್ರ ಗುರುತಿಸಿ ಅವರಿಗೆ ನೆರವು ನೀಡಲು ಕ್ರಮ ಕೈಗೊಂಡಿರುವುದಾಗಿ ಕಾನ್ಸುಲೇಟ್ ಜನರಲ್ ವಿಪುಲ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
America: ಬೋಯಿಂಗ್ ಸಂಸ್ಥೆಯ 17,000 ಉದ್ಯೋಗಿಗಳು ಶೀಘ್ರವೇ ವಜಾ
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.