ಗುರುವಾಯೂರಿನಲ್ಲಿ ಪ್ರಧಾನಿ;ಕಮಲಲೋಚನನೆದುರು ಕಮಲ ನಾಯಕನಿಗೆ ತುಲಾಭಾರ
Team Udayavani, Jun 8, 2019, 10:49 AM IST
ತ್ರಿಶೂರ್: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಇತಿಹಾಸ ಪ್ರಸಿದ್ದ ಗುರುವಾಯೂರು ಶ್ರೀಕೃಷ್ಣಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ , ತಾವರೆ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.
ತಮಿಳುನಾಡಿನಿಂದ ತರಿಸಲಾಗಿದ್ದ ಕಮಲದ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಕದಳಿ ಬಾಳೆ, ಹಾಲು ಪರಮಾನ್ನ , ತುಪ್ಪ ಮತ್ತು ಶೇಷ ವಸ್ತ್ರ ಸಮರ್ಪಿಸಿದರು.
ಮೋದಿ ಅವರೊಂದಿಗೆ ದೇವಸ್ವಂ ಮಂಡಳಿಯ ಸದಸ್ಯರು, ಕೇರಳದ ಪ್ರಮುಖ ಬಿಜೆಪಿ ಮುಖಂಡರು ದೇವಾಲಯಕ್ಕೆ ಆಗಮಿಸಿದ್ದರು.
ದೇವಾಲಯದಲ್ಲಿ ವ್ಯಾಪಕಭದ್ರತೆ ಕೈಗೊಳ್ಳಲಾಗಿದ್ದು, ಪ್ರಮುಖ ವ್ಯಕ್ತಿಗಳಿಗೆ ಮಾತ್ರ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಸಾವಿರಾರು ಮಂದಿ ದೇವಾಲಯದ ಹೊರಗೆ ನಿಂತು ಪ್ರಧಾನಿ ಮೋದಿ ಅವರ ಆಗಮನವನ್ನು ಕಾಯುತ್ತಿದ್ದರು.
#WATCH Kerala: Prime Minister Narendra Modi offers prayers at Sri Krishna Temple in Guruvayur of Thrissur. pic.twitter.com/HB98hDQAFk
— ANI (@ANI) June 8, 2019
ದೇವಾಲಯದಲ್ಲಿ ವಿಶೇಷ ಭದ್ರತಾ ಪಡೆಗಳು ಕಟ್ಟೆಚ್ಚರವಹಿಸಿದರೆ, ದೇವಾಲಯದ ಹೊರಗೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.