ಮಾನಸ ಫಿಶ್‌ಲ್ಯಾಂಡ್‌

ಸಮುದ್ರದ ದಂಡೆಯಲ್ಲೇ ಕುಳಿತು ಊಟ ಮಾಡಿ..! ಕರಾವಳಿ ಮೀನೂಟದ ಮೋಡಿ

Team Udayavani, Jun 8, 2019, 3:08 PM IST

2-dss

ಅಲೆಗಳ ಮೇಲೆ ತೇಲುತ್ತಾ, ತೆವಳುತ್ತಾ ಹೊರಟ ದೋಣಿ. ಸಮುದ್ರದಾಳಕ್ಕೆ ಬಲೆ ಬೀಸುತ್ತಿರುವ ಬೆಸ್ತರು. ರಾಶಿ ರಾಶಿ ಮೀನು ಮೊಗೆಯುವಾಗ, ಅವರ ಮೊಗದಲ್ಲಿ ಅರಳುವ ಹರ್ಷ. ಅದೇ ಮೀನು ಸಂತೆಪೇಟೆಯನ್ನು ತಲುಪಿ, ತಕ್ಕಡಿಯಲ್ಲಿ ತೂಗಿ, ಗ್ರಾಹಕನ ಮನೆ ಸೇರುವ ಪರಿ. ಅದು ಶುದ್ಧಗೊಂಡು, ಬೆಂಕಿಯ ಒಲೆಯಲ್ಲಿ, ಮಣ್ಣಿನ ಪಾತ್ರೆಯ ಮೇಲೆ ಬೇಯುತ್ತಾ, ರುಚಿರುಚಿಯಾಗಿ ತಟ್ಟೆಗೆ ಬೀಳುವ ಆ ಪುಳಕಯಾತ್ರೆ… ಇವೆಲ್ಲವೂ ಒಂದು ಮೀನಿನ ಕತೆ. ಆ ಚಿತ್ರಕತೆಯನ್ನು ಹೇಳುತ್ತಲೇ, ಗ್ರಾಹಕನ ಭೋಜನಕ್ಕೆ ಕಿಕ್‌ ಕೊಡುವ ಹೋಟೆಲ್‌ “ಮಾನಸ ಫಿಶ್‌ಲ್ಯಾಂಡ್‌’!

ಬರೀ ಮೆನು ಅಷ್ಟೇ ಅಲ್ಲ, ತಟ್ಟೆಯ ಆಚೆಈಚೆಯೂ ಇಲ್ಲಿ ಕಾಣುವುದು ಬರೀ ಕರಾವಳಿ. ಇಲ್ಲಿ ಆಹಾರ ಸವಿಯುವ ಪ್ರತಿಯೊಬ್ಬರಿಗೂ, ಸಮುದ್ರದ ದಂಡೆಯ ಮೇಲೆ ಊಟಕ್ಕೆ ಕುಳಿತಂಥ ಸುಖ ಸಿಗಬೇಕು ಎನ್ನುವುದು, ಮಾಲೀಕ ಸುರೇಂದ್ರ ಪೂಜಾರಿ ಅವರ ಸದಾಶಯ. ಊರ ಜನಜೀವನ, ಅದರ ನೆನಪುಗಳನ್ನು ಕಟ್ಟಿಕೊಡುತ್ತಲೇ, ಊರಿನ ರುಚಿಯನ್ನೂ ಭರ್ಜರಿಯಾಗಿಯೇ ಉಣಿಸುವ ಈ ವಿಭಿನ್ನ ಪ್ರಯತ್ನಕ್ಕೆ ಗ್ರಾಹಕರೂ ಮಾರುಹೋಗಿದ್ದಾರೆ.

ಸ್ಪೆಷೆಲ್‌ ಏನುಂಟು ಮಾರಾಯ್ರೇ ..
ಬಂಗುಡೆ ಸಾರಿನ ಪರಿಮಳ, ಭೂತಾಯಿ ಫ್ರೈ ರುಚಿಯೇ ಕರಾವಳಿಗರ ಹೋಟೆಲ್‌ನ ಸಿಗ್ನೇಚರ್‌. ಆ ನಂಬಿಕೆಗೆ ಇಲ್ಲಂತೂ ಮೋಸ ಇಲ್ಲ. ಪಾಂಫ್ರೆಟ್‌, ಕಾನೆ, ಅಂಜಲ್‌, ಕೊಕ್ಕರಾ, ಕಲ್ಲೂರ, ಪಯ್ನಾ, ನಂಗ್‌ ಅಂಜಲ್‌, ಸಿಲ್ಲವರ್‌ ಮೀನುಗಳ ರುಚಿಗೆ ಇಲ್ಲಿ ಸಂಪೂರ್ಣ ಅಂಕ. ಏಡಿ ಮಸಾಲ, ಕ್ರಾಬ್‌ ಸೂಪ್‌ ಅಷ್ಟೇ ಸೂಪರು. ಪ್ರಾನ್‌ ಕೊಲ್ಹಾಪುರಿ, ಪ್ರಾನ್‌ ಜಿಂಜರ್‌ ಮಸಾಲಗಳ ಆಸ್ವಾದವಂತೂ, ಮನೆಗೆ ಹೋದ ಮೇಲೂ ಕಾಡುವಂಥದ್ದು. ಇನ್ನು ಬಿರಿಯಾನಿಪ್ರಿಯರು ಇಲ್ಲಿಗೆ ಬಂದು ಮುಖ ಬಾಡಿಸಿಕೊಳ್ಳುವ ಅಗತ್ಯವಿಲ್ಲ, ಧಮ್‌ಗಟ್ಟಿದ ಫಿಷ್‌ ಬಿರಿಯಾನಿ ನಿಮಗಾಗಿಯೇ ಕಾದು ಕೂತಿರುತ್ತದೆ.

ಕರಾವಳಿಯನ್ನು ಹೀಗೆಲ್ಲ ನೆನಪಿಸುವ ಈ ಹೋಟೆಲ್‌ನಲ್ಲಿ ಬಿಸಿಬಿಸಿ ನೀರ್‌ದೋಸೆ, ಕೋರಿ ರೊಟ್ಟಿ ಇಲ್ಲದೇ ಇದ್ದೀತೇ? ಇವೆಲ್ಲದರ ಜೊತೆಗೆ ಚೈನೀಸ್‌ ಖಾದ್ಯಗಳು, ತಂದೂರ್‌ ವೆರೈಟಿಗಳು, ಮಟನ್‌ ಖಾದ್ಯಗಳೂ ತಮ್ಮದೇ ಶೈಲಿಯಲ್ಲಿ ಗ್ರಾಹಕರಿಗೆ ಇಷ್ಟವಾಗುತ್ತವೆ.

ಕರಾವಳಿ ಬಾಣಸಿಗರ ಕೈಚಳಕ
“ಊರಿನ ಖಾದ್ಯಗಳನ್ನು ಊರಿನವರು ಮಾಡಿದರೇನೇ ಚೆಂದ’ ಎನ್ನುತ್ತಾರೆ, ಸುರೇಂದ್ರ ಪೂಜಾರಿ ಅವರು. ಅದಕ್ಕಾಗಿ ಇವರ ಹೋಟೆಲ್‌ನ ಕಿಚನ್‌ನಲ್ಲಿ ಕರಾವಳಿಯ ನುರಿತ ಬಾಣಸಿಗರೇ ತುಂಬಿಕೊಂಡಿದ್ದಾರೆ. ಅವರು ಹಾಕುವ ಹದಕ್ಕೂ, ಊರಿನ ಮನೆಗಳಲ್ಲಿ ಸಿದ್ಧವಾದ ಅಡುಗೆಗೂ ಎಳ್ಳಷ್ಟೂ ಆಚೆ‌ಈಚೆ ಇರೋದಿಲ್ಲ. ಪರಿಶುದ್ಧತೆಗೆ ಆದ್ಯತೆ ಕೊಟ್ಟು, ಇಲ್ಲಿ ಖಾದ್ಯಗಳನ್ನು ಸಿದ್ಧಪಡಿಸಲಾಗುತ್ತದೆ.

ಹಳೇ ಮೀನಲ್ಲ, ತಾಜಾ ಮೀನು
ಬೆಂಗಳೂರಿನ ಸಾಕಷ್ಟು ಹೋಟೆಲ್‌ಗ‌ಳಲ್ಲಿ ಫ್ರೆಶ್‌ ಮೀನು ಖಾದ್ಯವೇ ಇರೋದಿಲ್ಲ. ಆದರೆ, ಇಲ್ಲಿ ಹಾಗಲ್ಲ. ಮಲ್ಪೆ, ಭಟ್ಕಳದಿಂದ ತರಿಸಿಕೊಂಡ ತಾಜಾ ಮೀನುಗಳು ಆಗಷ್ಟೇ ಅಡುಗೆ ಮನೆಗೆ ಸೇರಿರುತ್ತವೆ. ಅತ್ಯಂತ ಕ್ರಮಬದ್ಧವಾಗಿ ಅದನ್ನು ಸರಿಮಾಡಿ, ಗ್ರಾಹಕರಿಗೆ ಉಣಬಡಿಸಿದರೇನೇ ಮಾಲೀಕರಿಗೆ ಸಮಾಧಾನ. ಅದಕ್ಕಾಗಿಯೇ, ಕೇವಲ ಕರಾವಳಿಗರು ಮಾತ್ರವಲ್ಲ, ಬೆಂಗಳೂರಿಗರೂ ಸೇರಿದಂತೆ ಇತರ ಪ್ರಾದೇಶಿಕ ಮೂಲದವರೂ, ಈ ಹೋಟೆಲ್‌ ಅನ್ನು ಎರಡನೇ ಮನೆಯಂತೆಯೇ ನೋಡುತ್ತಾರೆ. ರುಚಿಯಲ್ಲೂ, ಶುಚಿಯಲ್ಲೂ ತನ್ನದೇ ಬ್ರ್ಯಾಂಡ್‌ ಅನ್ನು ಸೃಷ್ಟಿಸಿಕೊಂಡ, ಈ ಹೋಟೆಲ್‌ಗೆ ಮೀನುಮೋಹಿಗಳು ಧಾರಾಳ ಭೇಟಿ ನೀಡಬಹುದು.

ಅಡುಗೆ ತಯಾರಿಯಲ್ಲಿ ಊರಿನ ಸಂಪ್ರದಾಯ ಕಾಯ್ದುಕೊಂಡು, ರುಚಿಯಲ್ಲೂ- ಶುಚಿಯಲ್ಲೂ ನಮ್ಮದೇ ಒಂದು ಬ್ರ್ಯಾಂಡ್‌ ಸೃಷ್ಟಿಸಿದ್ದೇವೆ. ಹಾಗಾಗಿ, ಗ್ರಾಹಕರು ಮಾನಸ ಫಿಶ್‌ಲ್ಯಾಂಡ್‌ ಅನ್ನು ಹುಡುಕಿಕೊಂಡು ಬರುತ್ತಾರೆ.
– ಸುರೇಂದ್ರ ಪೂಜಾರಿ, ಮಾಲೀಕ

ವಿಳಾಸ
# 03, 7ನೇ ಮೇನ್‌, 80 ಅಡಿ ರಸ್ತೆ, ಎಚ್‌ಆರ್‌ಬಿಆರ್‌ ಲೇಔಟ್‌, ಬೆಂಗಳೂರು
ದೂ.ಸಂ.: 7090913399

ಎಂಥ ರುಚಿ ಮಾರಾಯ್ರೇ …
ಅಂಜಲ್‌ ವೆರೈಟಿ, ಕ್ರಾಬ್‌ ಮಸಾಲ, ಕ್ರಾಬ್‌ ಸೂಪ್‌, ಫಿಷ್‌ ಬಿರಿಯಾನಿ, ಪಾಂಫ್ರೆಟ್‌- ಬಂಗುಡೆ ಕರ್ರಿ

– ಬಳಕೂರು ವಿ.ಎಸ್‌. ನಾಯಕ್‌

ಟಾಪ್ ನ್ಯೂಸ್

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

adani (2)

Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್‌

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

BBK11: ದುಡ್ಡು ಕದ್ದ ಚೈತ್ರಾನಿಗೆ ಕಿಚ್ಚನ ಶಹಬ್ಬಾಸ್ – ಪಂಚಾಯ್ತಿಯಲ್ಲಿ ಏನೆಲ್ಲ ಆಯಿತು

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

bjp-congress

Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Sanjeev-Matandoor

Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು

Sri-Home-minister

Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್‌ ಶಾ ಭೇಟಿ

Udupi-DC-Dr.-Vidya-kumari

Udupi: ಮಂಗನಕಾಯಿಲೆ ಪ್ರಕರಣ: ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ: ಡಿಸಿ ಡಾ.ವಿದ್ಯಾಕುಮಾರಿ

puttige-5

Udupi:ಗೀತಾರ್ಥ ಚಿಂತನೆ 93; ಶ್ರೀಕೃಷ್ಣನಿಗೆ ಶರಣಾದ ಅರ್ಜುನ

Police

Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.