ಯುವ ಜನಾಂಗದ ಭವಿಷ್ಯಕ್ಕೆ ಬಿಡಿ ಸಿಗರೇಟ್‌ ಕುತ್ತಾಗದಿರಲಿ


Team Udayavani, Jun 9, 2019, 6:00 AM IST

Cigarettes,

ಸಾಂದರ್ಭಿಕ ಚಿತ್ರ.

ತಂಬಾಕು ಸೇವನೆಯ ನಿಯಂತ್ರಣವೂ ಜಾಗತಿಕ ಮಟ್ಟದಲ್ಲಿ ಅಕಾಲಿಕ ಮರಣವನ್ನು ತಡೆಗಟ್ಟಬಹುದಾದ ಅತಿ ದೊಡ್ಡ ಕ್ರಮವಾಗಿದೆ. ಧೂಮಪಾನಿಗಳ ಸಂಖ್ಯೆಯಲ್ಲಿ ಚೀನವು ಮೊದಲನೆಯದಾದರೆ, ಭಾರತವು ಎರಡನೆಯ ಸ್ಥಾನದಲ್ಲಿದೆ. 2020ರ ಹೊತ್ತಿಗೆ ತಂಬಾಕು ಸಂಬಂಧಿ ರೋಗಗಳಿಂದಾಗಿ ಸುಮಾರು 1.5 ದಶಲಕ್ಷ ಭಾರತೀಯರು ಸಾಯುತ್ತಾರೆ ಎಂದು ಅಂದಾಜಿಸಲಾಗಿದೆ.

ಸೆಪ್ಟಂಬರ್‌ 11, 2017ರಿಂದ ಕರ್ನಾಟಕ ಸರಕಾರವು ಬಿಡಿ ಸಿಗರೇಟ್‌ಗಳ ಮಾರಾಟವನ್ನು ನಿಷೇಧಿಸಿದೆ. ಈ ಕಾಯಿದೆಯು ಸೆಪ್ಟಂಬರ್‌ ಕೊನೆಯ ವಾರದಲ್ಲಿ ಜಾರಿಗೆ ಬಂದಿದೆ.

ಭಾರತದಲ್ಲಿ ಶೇ.70 ಸಿಗರೇಟ್‌ಗಳನ್ನು ಬಿಡಿಯಾಗಿ ಮಾರಾಟ ಮಾಡಲಾಗುತ್ತಿದೆ. ಬಿಡಿ ಸಿಗರೇಟ್‌ಗಳ ಮಾರಾಟದಿಂದ ವಯಸ್ಕರು, ಹದಿಹರೆಯದವರು, ಅಪ್ರಾಪ್ತರು, ಅವಿದ್ಯಾವಂತರು ಮತ್ತು ಕಡಿಮೆ ಆದಾಯವುಳ್ಳ ಧೂಮಪಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಧೂಮಪಾನ ಚಟಕ್ಕೆ ದಾಸರಾಗುತ್ತಿದ್ದಾರೆ. ಬಿಡಿ ಸಿಗರೇಟ್‌ಗಳನ್ನು ಮಾರಾಟ ಮಾಡುವ ಮಳಿಗೆಗಳಲ್ಲಿ ಅಪ್ರಾಪ್ತರಿಗೆ ಮಾರುವ ಸಿಗರೇಟ್‌ಗಳು ಬಿಡಿ ಸಿಗರೇಟ್‌ ಮಾರಾಟ ಮಾಡದ ಮಳಿಗೆಗಳಿಗಿಂತ ಐದು ಪಟ್ಟು ಹೆಚ್ಚು ಎಂದು ತಿಳಿದು ಬಂದಿದೆ. ಒಂದು ಅಧ್ಯಯನದ ಪ್ರಕಾರ, ಬಿಡಿ ಸಿಗರೇಟ್‌ಗಳ ಮಾರಾಟಗಳನ್ನು ತಡೆದಲ್ಲಿ ಹದಿಹರೆಯದವರ ಧೂಮಪಾನ ಚಟವನ್ನು ತಡೆಯಬಹುದಾಗಿದೆ.

ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ ಬಿಡಿ ಸಿಗರೇಟ್‌ಗಳನ್ನು ಬಳಸದಂತೆ ನಿಷೇಧಿಸಲಾಗಿದೆ. ಇದಕ್ಕೆ ಅನುಗುಣವಾಗಿ ಸೆಪ್ಟಂಬರ್‌ 11, 2017ರಿಂದ ಕರ್ನಾಟಕ ಸರಕಾರವು ಬಿಡಿ ಸಿಗರೇಟ್‌ಗಳ ಮಾರಾಟವನ್ನು ನಿಷೇಧಿಸಿದೆ. ಈ ಕಾಯಿದೆಯು ಸೆಪ್ಟಂಬರ್‌ ಕೊನೆಯ ವಾರದಲ್ಲಿ ಜಾರಿಗೆ ಬಂದಿದೆ.

ಬಿಡಿ ಸಿಗರೇಟ್‌ಗಳನ್ನು ಕೊಳ್ಳುವುದರಿಂದಾಗಿ ಜನರಿಗೆ ಅದರ ಪ್ಯಾಕ್‌ ಮೇಲೆ ಇರುವ ಚಿತ್ರಣ ಮತ್ತು ಆರೋಗ್ಯ ಸಂಬಂಧಿ ಎಚ್ಚರಿಕೆ ಸಂದೇಶ ರವಾನೆಯಾಗದೆ, ಚಿತ್ರಣ ಮತ್ತು ಆರೋಗ್ಯ ಎಚ್ಚರಿಕೆಯ ಮೂಲ ಉದ್ದೇಶ ವ್ಯರ್ಥವಾಗುತ್ತಿದೆ.

ಬಿಡಿ ಸಿಗರೇಟ್‌ಗಳನ್ನು ಮಾರುವ ಮೂಲಕ ಸಿಗರೇಟ್‌ ಪ್ಯಾಕ್‌ ಮೇಲೆ ವಿಧಿಸುವ ಹೆಚ್ಚಿನ ತೆರಿಗೆಯ ಉದ್ದೇಶವೂ ನಿಷ್ಪ್ರಯೋಜಕವಾಗುತ್ತಿದೆ. ಬಿಡಿ ಸಿಗರೇಟ್‌ ಮಾರಾಟದಿಂದ ಅಪ್ರಾಪ್ತ ವಯಸ್ಕರು ಧೂಮಪಾನ ಪ್ರಾರಂಭಿಸುವುದಕ್ಕೆ ಸಮೀಪ ಆಗುತ್ತಿದ್ದಾರೆ. ಕಾನೂನುಬಾಹಿರ ಸಿಗರೇಟ್‌ಗಳು ಈಗ ವ್ಯಾಪಕವಾಗಿವೆ. ಬಿಡಿ ಸಿಗರೇಟ್‌ಗಳ ನಿರ್ಬಂಧದಿಂದ ಆಗುವ ಪ್ರಯೋಜನವೇನೆಂದರೆ, ಸಿಗರೇಟ್‌ ಪ್ಯಾಕ್‌ಗಳು ಬಿಡಿ ಸಿಗರೇಟ್‌ಗಳಿಗಿಂತ ದುಬಾರಿಯಾಗಿವೆ; ಅದರಿಂದಾಗಿ ಹದಿಹರೆಯದವರ ಧೂಮಪಾನವನ್ನು ತಡೆಗಟ್ಟಬಹುದಾಗಿದೆ.

ರಾಜ್ಯ ತಂಬಾಕು ನಿಯಂತ್ರಣ ಘಟಕ ಮತ್ತು ಆರೋಗ್ಯ ಇಲಾಖೆ ಹಾಗೂ ಕುಟುಂಬ ಕಲ್ಯಾಣ ಇಲಾಖೆಗಳು ಕೇಂದ್ರದ ಮೆಟ್ರೋಲಜಿ ಆ್ಯಕ್ಟ್ ಪ್ರಕಾರ ಬಿಡಿ ಸಿಗರೇಟ್‌ ಮಾರಾಟವನ್ನು ನಿಷೇಧಿಸಬೇಕೆಂದು ಬಯಸಿದ್ದವು. ಈ ಕಾನೂನನ್ನು ಪಾಲಿಸದವರು ಕೋಟಾ³ ಕಾಯಿದೆಯ 20ನೇ ಸೆಕ್ಷನ್‌ ಪ್ರಕಾರ 1,000 ರೂ. ದಂಡ ಅಥವಾ ಒಂದು ವರ್ಷ ಸೆರೆವಾಸ ಅಥವಾ ಎರಡನ್ನೂ ಅನುಭವಿಸಬೇಕಾಗುತ್ತದೆ. ಈ ಕಾನೂನನ್ನು ಎರಡನೇ ಬಾರಿ ಉಲ್ಲಂ ಸಿದರೆ ಸೆರೆವಾಸ ಎರಡು ವರ್ಷಗಳ ವರೆಗೆ ಮತ್ತು ದಂಡದ ಮೊತ್ತ ಮೂರು ಸಾವಿರ ರೂಪಾಯಿವರೆಗೆ ಹೆಚ್ಚಾಗುತ್ತದೆ.

ಸಮುದಾಯ ವೈದ್ಯಕೀಯ ವಿಭಾಗ ಮತ್ತು ತಂಬಾಕು ನಿಯಂತ್ರಣ ಘಟಕದ ವತಿಯಿಂದ ಉಡುಪಿ ಜಿಲ್ಲೆಯಲ್ಲಿ ನಡೆಸಿದ ಅಧ್ಯಯನದಲ್ಲಿ ಬಿಡಿ ರೂಪದ ಸಿಗರೇಟ್‌ ಮಾರಾಟ ನಿಷೇಧದ ಕುರಿತಾಗಿ 155 ವ್ಯಾಪಾರಸ್ಥರು ಮತ್ತು 465 ಧೂಮಪಾನಿಗಳನ್ನು ಒಳಪಡಿಸಲಾಯಿತು. 5 ಶೈಕ್ಷಣಿಕ ವಲಯಗಳಾದ ಉಡುಪಿ, ಕುಂದಾಪುರ, ಬೈಂದೂರು, ಕಾರ್ಕಳ, ಬ್ರಹ್ಮಾವರ ವ್ಯಾಪ್ತಿಯಲ್ಲಿ ಈ ಅಧ್ಯಯನ ನಡೆಸಲಾಯಿತು.

ತರಬೇತಿ ಪಡೆದ ಸಂದರ್ಶಕರಿಂದ ಪೂರ್ವ ಪರೀಕ್ಷೆ ಪ್ರಶ್ನಾವಳಿಯ ಮುಖಾಂತರ ಬಿಡಿ ರೂಪದ ಸಿಗರೇಟ್‌ ಮಾರಾಟಗಾರರನ್ನು ಮತ್ತು ತಂಬಾಕು ಸೇವಿಸುವವರನ್ನು ಸಂದರ್ಶಿಸಲಾಯಿತು ಹಾಗೂ ಬಿಡಿ ರೂಪದ ಸಿಗರೇಟ್‌ ಮಾರಾಟ ನಿಷೇಧದ ಬಗ್ಗೆ ಅವರಿಗೆ ತಿಳಿದಿರುವ ಮಾಹಿತಿಯನ್ನು ಸಂದರ್ಶಕರು ಪಡೆದುಕೊಂಡರು. ಇದರಲ್ಲಿ ಕೇವಲ 78 (ಶೇ.50.3) ಮಾರಾಟಗಾರರು ಬಿಡಿ ರೂಪದ ಸಿಗರೇಟ್‌ ಮಾರುವುದರ ನಿಷೇಧದ ಬಗ್ಗೆ ತಿಳಿದಿದ್ದಾರೆ ಎನ್ನುವುದು ತಿಳಿದುಬಂತು.

ಈ ಅಧ್ಯಯನದ ಸಮೀಕ್ಷೆಯಲ್ಲಿ ಶೇ.86ರಷ್ಟು ಜನರು ಬಿಡಿ ರೂಪದ ಸಿಗರೇಟನ್ನು ಬಳಸುತ್ತಿದ್ದು, ಅದರಲ್ಲಿ ಶೇ.18 ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ. ಧೂಮಪಾನಿಗಳ ಪ್ರಕಾರ ಬಿಡಿ ರೂಪದ ಸಿಗರೇಟ್‌ ಅವರಿಗೆ ಕಡಿಮೆ ವೆಚ್ಚದಲ್ಲಿ ಸಿಗುವುದರಿಂದ ಸಹಕಾರಿ ಆಗಿರುತ್ತದೆ.

ಈ ಅಧ್ಯಯನದ ಪ್ರಕಾರ ಬಿಡಿ ರೂಪದ ಸಿಗರೇಟ್‌ ಮಾರಾಟ ನಿಷೇಧದ ಬಗ್ಗೆ ಶೇ.50ಕ್ಕಿಂತ ಹೆಚ್ಚಿನ ಮಾರಾಟಗಾರರು ಮತ್ತು ಧೂಮಪಾನ ಸೇವಿಸುವವರಿಗೆ ಸರಿಯಾದ ಮಾಹಿತಿ ಇಲ್ಲ.ಶೇ.60ರಷ್ಟು ಜನರಿಗೆ ಮಾತ್ರ ಕಾನೂನು ಉಲ್ಲಂ ಸಿದರೆ ಅದು ಶಿಕ್ಷಾರ್ಹ ಅಪರಾಧ ಎನ್ನುವ ಬಗ್ಗೆ ಅರಿವಿರುತ್ತದೆ.ಕಾನೂನು ಸರಿಯಾಗಿ ಅಳವಡಿಕೆಯಾದಲ್ಲಿ ಶೇ.75ರಷ್ಟು ಮಾರಾಟಗಾರರು ಬಿಡಿ ರೂಪದ ಸಿಗರೇಟ್‌ ಮಾರಾಟ ಮಾಡುವ ನಿಷೇಧ ಕಾನೂನನ್ನು ಸರಿಯಾಗಿ ಅಳವಡಿಕೆ ಮಾಡಿಕೊಳ್ಳಬಹುದು.

ಈ ಅಧ್ಯಯನದ ಪ್ರಕಾರ, ಈ ಕಾನೂನು ಸರಿಯಾಗಿ ಅನುಷ್ಠಾನಗೊಂಡಲ್ಲಿ ಧೂಮಪಾನಿಗಳು ಸಿಗರೇಟ್‌ ಸೇವನೆಯನ್ನು ಬಿಡಲು ಮತ್ತು ಸಿಗರೇಟ್‌ ಸೇವನೆಯ ಪ್ರಮಾಣವನ್ನು ತಗ್ಗಿಸಲು ಸಹಕಾರಿಯಾಗಲಿದೆ.ಈ ನಿಟ್ಟಿನಲ್ಲಿ ಎಲ್ಲ ವ್ಯಾಪಾರಸ್ಥರು ಬಿಡಿ ರೂಪದ ಸಿಗರೇಟ್‌ ಮಾರಾಟ ನಿಷೇಧದ ಕಾನೂನನ್ನು ಪಾಲಿಸಿದರೆ ತಂಬಾಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

– ಡಾ| ರೋಹಿತ್‌ ಭಾಗವತ್‌
ಮತ್ತು
ಡಾ| ಮುರಳೀಧರ ಕುಲಕರ್ಣಿ
ಸಮುದಾಯ ವೈದ್ಯಕೀಯ ವಿಭಾಗ,
ಕೆಎಂಸಿ ಮಣಿಪಾಲ

ಟಾಪ್ ನ್ಯೂಸ್

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್‌ ಗೆ ಆಹ್ವಾನವಿಲ್ಲ!‌ ದಿಗ್ಗಜನ ಬೇಸರ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1

Snuff: ನಶ್ಯ ತಂದಿಟ್ಟ ಸಮಸ್ಯೆ

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

10–Cosmetic-surgery

Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ

9-health

Manipal ಪಾಯ್ಸನ್‌ ಇನ್‌ಫಾರ್ಮೇಶನ್‌ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

1-asad

ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ

5

Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Mollywood: ʼಮಾರ್ಕೊʼ ಬಳಿಕ ಮೋಹನ್‌ ಲಾಲ್‌ ನಿರ್ದೇಶನದ ʼಬರೋಜ್‌ʼ ಚಿತ್ರಕ್ಕೂ ಪೈರಸಿ ಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.