ಸಂತ್ರಸ್ತರ ಅವಗಣನೆ ಆರೋಪ : ಸರ್ವ ಸದಸ್ಯರ ಅಸಮಾಧಾನ
Team Udayavani, Jun 9, 2019, 5:50 AM IST
ಮಡಿಕೇರಿ: ಮಳೆಗಾಲ ಪ್ರವೇಶಿಸುವ ಹಂತದಲ್ಲಿದ್ದರು, ಕಳೆದ ವರ್ಷದ ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಸಮರ್ಪಕ ರೀತಿಯಲ್ಲಿ ಪರಿಹಾರ ವಿತರಣೆಯಾಗಿಲ್ಲವೆಂದು ಜಿಲ್ಲಾ ಪಂಚಾಯಥ್ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.
ಅತಿವೃಷ್ಟಿ ಹಾನಿ ಪರಿಹಾರ ಕಾರ್ಯದ ಕುರಿತು ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಎ.ಹರೀಶ್ ಅವರ ಅಧ್ಯಕ್ಷತೆಯಲ್ಲಿ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. ಮಳೆಹಾನಿ ಪರಿಹಾರವಾಗಿ ಕೋಟಿ ಕೋಟಿ ಹಣ ಸಂಗ್ರಹವಾಗಿದೆ ಮತ್ತು ಬಿಡುಗಡೆಮಾಡಲಾಗಿದೆ ಎಂದು ಹೇಳಲಾಗುತ್ತಿದೆಯಷ್ಟೆ. ಆದರೆ, ಇಲ್ಲಿಯವರೆಗೆ ಅರ್ಹ ಫಲಾನುಭವಿಗಳಿಗೆ ಪರಿಹಾರ ದೊರಕಿಲ್ಲ. ಅಲ್ಲದೆ, ಭೂಮಿ ಕಳೆದುಕೊಂಡ ರೈತರು ಮತ್ತು ಬೆಳೆಗಾರರಿಗೆ ಭೂಮಿಯ ಮೌಲ್ಯಕ್ಕೆ ಸಮಾನವಾದ ಸೂಕ್ತ ಪರಿಹಾರ ದೊರಕಿಸಿಕೊಡುವ ಕುರಿತು ಅಧಿಕಾರಿಗಳ ಬಳಿ ಸ್ಪಷ್ಟ ನಿಲುವುಗಳಿಲ್ಲವೆಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ ಸದಸ್ಯ ಶಿವು ಮಾದಪ್ಪ ಮಾತನಾಡಿ, ಕೇವಲ ಮನೆಗಳನ್ನು ಕಟ್ಟಿಸಿಕೊಟ್ಟರೆ ಸಾಕೇ, ಗದ್ದೆ, ತೋಟ ಕಳೆದುಕೊಂಡ ರೈತರು ಬದುಕು ಸಾಗಿಸುವುದಾದರು ಹೇಗೆ ಎಂದು ಪ್ರಶ್ನಿಸಿದರು. ಕೃಷಿ ಮಾಡಲು ಮನೆಯೊಂದಿಗೆ ಭೂಮಿಯನ್ನು ಕೂಡ ನೀಡಬೇಕೆಂದರು.
ಬಿಜೆಪಿ ಸದಸ್ಯ ಮುರಳಿ ಕರುಂಬಮ್ಮಯ್ಯ ಮಾತನಾಡಿ, ಕನಿಷ್ಠ 1 ಏಕರೆ ಗದ್ದೆಗೆ 5 ಲಕ್ಷ ಮತ್ತು ಕಾಫಿ ತೋಟಕ್ಕೆ 10 ಲಕ್ಷ ಪರಿಹಾರವನ್ನು ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಹಿರಿಯ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದರು. ಅಧ್ಯಕ್ಷ ಬಿ.ಎ.ಹರೀಶ್ ಮಾತನಾಡಿ ಮಧ್ಯಾಹ್ನದ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಲಿದ್ದು, ಸಭೆಯಲ್ಲಿ ಗಮನ ಸೆಳೆಯೋಣವೆಂದರು.
ತೋಟ ಮತ್ತು ಕೃಷಿ ಭೂಮಿ ಕಳೆದು ಕೊಂಡವರಿಗೆ ಹೆಚ್ಚಿನ ಮೊತ್ತದ ಪರಿಹಾರ ಘೋಷಿಸಬೇಕೆಂದು ಸದಸ್ಯರು ಮಾಡಿರುವ ಮನವಿಯ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದೆಂದು ಉಪವಿಭಾಗಾ ಧಿಕಾರಿ ಭರವಸೆ ನೀಡಿದರು. ನೀರಿನ ಸಮಸ್ಯೆ ಬಗ್ಗೆಯೂ ವಿಷಯ ಪ್ರಸ್ತಾಪಿಸಿದ ಸದಸ್ಯರು, ಕುಡಿಯುವ ನೀರು ಸದಸ್ಯೆ ಕೆ.ಪಿ.ಚಂದ್ರಕಲಾ, ಸದಸ್ಯ ಬಿ.ಜೆ. ದೀಪಕ್ ಮಾತನಾಡಿದರು. . ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀ ಪ್ರಿಯ ಟಾಸ್ಕ್ ಫೋರ್ಸ್‌ನ ಸಹಾಯವಾಣಿ ಸದಸ್ಯೆ ಎಂ.ಬಿ. ಸುನೀತಾ ನಿಫಾ ವೈರಸ್ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮೋಹನ್ ಸಭೆಗೆ ಮಾಹಿತಿ ನೀಡಿದರು. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಉಪಸ್ಥಿತರಿದ್ದರು.
ಇನ್ನೂ ಅರ್ಜಿ ಸಲ್ಲಿಸಬಹುದು
ಉಪ ವಿಭಾಗಾಧಿಕಾರಿ ಜವರೇಗೌಡ ಸಭೆಗೆ ಪರಿಹಾರ ಚ ಕುರಿತು ವಿವರಿಸಿದರು. ಮಡಿಕೇರಿ ತಾಲೂಕಿನಲ್ಲಿ 14, ಸೋಮವಾರಪೇಟೆಯಲ್ಲಿ 2 ಹಾಗೂ ವೀರಾಜಪೇಟೆಯಲ್ಲಿ 4 ಮಾನವ ಜೀವಹಾನಿಯಾಗಿದ್ದು, ಕುಟುಂಬಗಳಿಗೆ ತಲಾ 5 ಲಕ್ಷದಂತೆ ಪರಿಹಾರ ಧನ ವಿತರಿಸಲಾಗಿದೆ. ಎನ್‌ಡಿಆರ್‌ಎಫ್ನಿಂದ 4 ಲಕ್ಷ ಹಾಗೂ ರಾಜ್ಯ ಸರ್ಕಾರದಿಂದ 1 ಲಕ್ಷ ರೂ.ಗಳಂತೆ ಮಾನವ ಜೀವಹಾನಿಗೆ ಪರಿಹಾರ ವಿತರಿಸಲಾಗಿದೆ. ಜಿಲ್ಲಾ ವ್ಯಾಪಿ ಒಟ್ಟು 268 ಜಾನುವಾರುಗಳು ಮರಣವನ್ನಪ್ಪಿದ್ದು, ಇವುಗಳಿಗೂ ಪರಿಹಾರ ವಿತರಿಸಲಾಗಿದೆ. 415 ಕುಟುಂಬಗಳಿಗೆ ತಲಾ 10 ಸಾವಿರ ರೂ.ಗಳಂತೆ ಮನೆಬಾಡಿಗೆಯನ್ನು ನೀಡಲಾಗುತ್ತಿದೆ. ಮೊದಲ ಹಂತ ದಲ್ಲಿ 427 ಮನೆನಿರ್ಮಿಸಿ ಹಸ್ತಾಂತರಿಸುವ ಗುರಿ ಹೊಂದಲಾ ಗಿದೆ ಎಂದು ಮಾಹಿತಿ ನಿಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.