ಕಾಂಗರೂ ಕಂಟಕದಿಂದ ಪಾರಾಗಲಿ ಕೊಹ್ಲಿ ಪಡೆ

ಇಂದು ಭಾರತ-ಆಸ್ಟ್ರೇಲಿಯ "ಓವಲ್‌' ಮೇಲಾಟ

Team Udayavani, Jun 9, 2019, 6:00 AM IST

AP6_8_2019_000161B

ಲಂಡನ್‌: ವಿಶ್ವಕಪ್‌ ಪಂದ್ಯಾವಳಿಯ ದೊಡ್ಡ ಕದನವೊಂದು ರವಿವಾರ ಲಂಡನ್ನಿನ “ಕೆನ್ನಿಂಗ್ಟನ್‌ ಓವಲ್‌’ನಲ್ಲಿ ನಡೆಯಲಿದೆ. ಇದಕ್ಕೆ ಸಾಕ್ಷಿಯಾಗಲಿರುವ ತಂಡಗಳೆಂದರೆ ಭಾರತ ಮತ್ತು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ. ಎರಡೂ ತಂಡಗಳು ಈವರೆಗೆ ಅಜೇಯವಾಗಿ ಉಳಿದಿರುವುದರಿಂದ ಹಾಗೂ ಎರಡೂ ಬಲಿಷ್ಠ ಪಡೆಗಳಾ ಗಿರುವುದರಿಂದ ಸಹಜವಾಗಿಯೇ ಈ ಪಂದ್ಯದ ತೂಕ ಹೆಚ್ಚು.

ಆಸ್ಟ್ರೇಲಿಯ ಈಗಾಗಲೇ ಅಫ್ಘಾನಿಸ್ಥಾನ ಮತ್ತು ವೆಸ್ಟ್‌ ಇಂಡೀಸ್‌ ವಿರುದ್ಧ ಚಾಂಪಿಯನ್ನರ ಆಟವಾಡಿ ಗೆದ್ದು ಬಂದಿದೆ. ಟೀಮ್‌ ಇಂಡಿಯಾ ದಕ್ಷಿಣ ಆಫ್ರಿಕಾವನ್ನು ಮಣಿಸಿದೆ. ಹೀಗಾಗಿ ಭಾರತ, ಆಸ್ಟ್ರೇಲಿಯ ತಂಡಗಳ ನೈಜ ಸಾಮರ್ಥ್ಯ ಅನಾವರಣಗೊಳ್ಳಲು ಓವಲ್‌ ಒಂದು ವೇದಿಕೆಯಾಗಲಿದೆ.

ಇತಿಹಾಸ ಭಾರತದ ವಿರುದ್ಧವಾಗಿದೆ!
ವಿಶ್ವಕಪ್‌ ಇತಿಹಾಸದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತದ ದಾಖಲೆ ಅತ್ಯಂತ ಕಳಪೆ. 11ರಲ್ಲಿ ಮೂರನ್ನಷ್ಟೇ ಜಯಿಸಿದೆ. ಆಸೀಸ್‌ ಎಂಟರಲ್ಲಿ ಗೆದ್ದಿದೆ. ಆದರೆ ಎಲ್ಲ ಸಲವೂ ಇತಿಹಾಸವೇ ಮಾನದಂಡವಾಗದು. ವಿಶ್ವ ಚಾಂಪಿಯನ್‌ ತಂಡವೊಂದನ್ನು ಎದುರಿಸುವಾಗ ಪ್ರತ್ಯೇಕ ರಣತಂತ್ರವನ್ನು ರೂಪಿಸಬೇಕಾದ ಅನಿವಾರ್ಯತೆ ಇದೆ. ಕೋಚ್‌ ರವಿಶಾಸ್ತ್ರಿ, ನಾಯಕ ವಿರಾಟ್‌ ಕೊಹ್ಲಿ ಮತ್ತು ತಂಡದ ಆಡಳಿತ ಮಂಡಳಿ ಸೇರಿಕೊಂಡು ಕಾಂಗರೂಗಳನ್ನು ಹಣಿಯಲು ರೂಪಿಸಿದ ಕಾರ್ಯತಂತ್ರ ಸದ್ಯಕ್ಕೆ ಸಸ್ಪೆನ್ಸ್‌!

ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಪ್ರದರ್ಶನ ಒಟ್ಟಾರೆಯಾಗಿ ಉತ್ತಮ ಮಟ್ಟದಲ್ಲಿತ್ತು. ಆದರೆ ಎಲ್ಲರೂ ಹರಿಣಗಳನ್ನು ಬೇಟೆಯಾಡುತ್ತಿರುವುದರಿಂದ ಭಾರತದ ಈ ಸಾಧನೆಯನ್ನು ಅಮೋಘ ಎಂದು ಬಣ್ಣಿಸುವುದು ತರವಲ್ಲ. ಅಂದಮಾತ್ರಕ್ಕೆ ಆಸ್ಟ್ರೇಲಿಯವನ್ನು ಹೊಡೆದುರುಳಿಸುವ ಸಾಮರ್ಥ್ಯ ಟೀಮ್‌ ಇಂಡಿಯಾ ಹೊಂದಿಲ್ಲ ಎಂದು ತೀರ್ಮಾನಿಸುವುದೂ ತಪ್ಪಾಗುತ್ತದೆ.

ಆಫ್ರಿಕಾ ವಿರುದ್ಧ ಭಾರತದ ಬೌಲಿಂಗ್‌ ಅಮೋಘ ಮಟ್ಟದಲ್ಲಿತ್ತು. ಬುಮ್ರಾ, ಚಾಹಲ್‌ ಘಾತಕವಾಗಿ ಪರಿಣಮಿಸಿದ್ದರು. ಇವರೊಂದಿಗೆ ಚೈನಾ ಮನ್‌ ಕುಲದೀಪ್‌ ಕೂಡ ಕಂಟಕವಾಗಿ ಪರಿಣ ಮಿಸಿದರೆ ಆಸೀಸ್‌ ವಿರುದ್ಧ ಭಾರತ ಅರ್ಧ ಗೆದ್ದಂತೆ. ಆದರೆ ಟೀಮ್‌ ಇಂಡಿಯಾ ಬೌಲಿಂಗ್‌ ಕಾಂಬಿನೇಶನ್‌ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಪವರ್‌ ಪ್ಲೇಯಲ್ಲಿ ರನ್‌ ಕೊರತೆ
ಭಾರತದ ಬ್ಯಾಟಿಂಗ್‌ ಆರಂಭದಲ್ಲಿ ಬಹಳ ನಿಧಾನಗತಿಯಿಂದ ಕೂಡಿತ್ತು. ಧವನ್‌, ಕೊಹ್ಲಿ ಬೇಗನೇ ನಿರ್ಗಮಿಸಿದ್ದರು. ಪವರ್‌ ಪ್ಲೇ ಅವಧಿಯ ಭರಪೂರ ಲಾಭವೆತ್ತಲು ಆರಂಭಿಕರು ಪ್ರಯತ್ನಿಸಬೇಕಿದೆ.

ರೋಹಿತ್‌ ಶರ್ಮ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. ರಾಹುಲ್‌ 4ನೇ ಕ್ರಮಾಂಕದ ಕೊರತೆ ನೀಗಿಸುವ ಭರವಸೆ ಮೂಡಿಸಿದ್ದಾರೆ. ಅನಂತರ ಧೋನಿ, ಜಾಧವ್‌, ಪಾಂಡ್ಯ ಕ್ರೀಸ್‌ ಆಕ್ರಮಿಸಿಕೊಂಡರೆ ಭಾರತದ ಬ್ಯಾಟಿಂಗ್‌ ಮೇಲೆ ಹೆಚ್ಚಿನ ನಂಬಿಕೆ ಇಡಬಹುದು. ಏನೇ ಆದರೂ ಆಸ್ಟ್ರೇಲಿಯದಂಥ ಚಾಂಪಿಯನ್‌ ತಂಡದೆದುರು ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅತ್ಯಗತ್ಯ.

ಇದು ಚಾಂಪಿಯನ್ನರ ಆಟ…
ತಂಡವೊಂದು ಆರಂಭಿಕ ಕುಸಿತಕ್ಕೆ ಸಿಲುಕಿದಾಗ ಹೇಗೆ ಇನ್ನಿಂಗ್ಸ್‌ ಬೆಳೆಸಬೇಕು ಎಂಬುದನ್ನು ವಿಂಡೀಸ್‌ ವಿರುದ್ಧ ಆಸ್ಟ್ರೇಲಿಯ ತೋರಿಸಿ ಕೊಟ್ಟಿದೆ. ಸ್ಮಿತ್‌ ಹಾಗೂ ಎಂದೂ ಆಡದ ಕೋಲ್ಟರ್‌ ನೈಲ್‌ ಸೇರಿಕೊಂಡು ಬ್ಯಾಟಿಂಗ್‌ ವಿಸ್ತರಿಸಿದ ಪರಿ ಎಲ್ಲರಿಗೂ ಒಂದು ಪಾಠದಂತಿದೆ. ಇದಕ್ಕೇ ಹೇಳುವುದು “ಚಾಂಪಿಯನ್ನರ ಆಟ’ಎಂದು.
ಭಾರತ ಪ್ರವಾಸದ ವೇಳೆ ತವರಲ್ಲೇ ಎಡವಿದ ಆಸ್ಟ್ರೇಲಿಯ ಈಗ ಹಿಂದಿನಂತಿಲ್ಲ. ಭಾರತಕ್ಕೆ ಆಗಮಿಸಿ ಸರಣಿ ಗೆದ್ದ ಬಳಿಕ ಭಾರೀ ಪ್ರಗತಿ ಸಾಧಿಸಿದೆ. ತಂಡದಲ್ಲಿ ಎಷ್ಟೇ ಗೊಂದಲ, ಸಮಸ್ಯೆಗಳಿದ್ದರೂ ವಿಶ್ವಕಪ್‌ ಹೊತ್ತಿಗೆ ಸರಿಯಾಗಿ ಇದನ್ನೆಲ್ಲ ನಿವಾರಿಸಿಕೊಂಡು ಮುನ್ನುಗ್ಗುವ ಛಾತಿ ಕಾಂಗರೂ ತಂಡದ್ದಾಗಿದೆ.
ಇಂಥ ತಂಡವನ್ನು ಓವಲ್‌ನಲ್ಲಿ ಕೆಡವಿದರೆ ಅದು ಭಾರತದ ಪಾಲಿನ ಅಮೋಘ ಸಾಧನೆಯಾಗಲಿದೆ.

ಕೋಲ್ಟರ್‌ ನೈಲ್‌ಗೆ ಜಾಗವಿಲ್ಲ?
ಆಸ್ಟ್ರೇಲಿಯ ವಿರುದ್ಧ ಯಾವತ್ತೂ ಅಮೋಘ ಬ್ಯಾಟಿಂಗ್‌ ಪ್ರದಶೀಸಿದ ವೆಸ್ಟ್‌ ಇಂಡೀಸ್‌ ವಿರುದ್ಧ ಅಮೋಘ 92 ರನ್‌ ಬಾರಿಸಿ ಆಸ್ಟ್ರೇಲಿಯ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ ಬೌಲಿಂಗ್‌ ಆಲ್‌ರೌಂಡರ್‌ ನಥನ್‌ ಕೋಲ್ಟರ್‌ ನೈಲ್‌ ಭಾರತದ ವಿರುದ್ಧ ಸ್ಥಾನ ಸಂಪಾದಿಸುವುದು ಅನುಮಾನ ಎನ್ನಲಾಗಿದೆ. ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಪ್ರಕಾರ ದ್ವಿತೀಯ ಸ್ಪಿನ್ನರ್‌ ಆಗಿ ನಥನ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಭಾರತದೆದುರು ಲಿಯೋನ್‌ ಸಾಧನೆ ಉತ್ತಮ ಮಟ್ಟದಲ್ಲಿರುವುದೇ ಇದಕ್ಕೆ ಕಾರಣ. ಹಾಗೆಯೇ ತ್ರಿವಳಿ ವೇಗಿಗಳನ್ನು ಕಣಕ್ಕಿಳಿಸುವ ಯೋಜನೆಯೂ ಆಸ್ಟ್ರೇಲಿಯ ಮುಂದಿದೆ. ಆಗ ಬೆಹೆಡಾಫ್ì ಅಥವಾ ಕೇನ್‌ ವಿಲಿಯಮ್ಸನ್‌ ಅವಕಾಶ ಪಡೆಯಬಹುದು.

ಸಚಿನ್‌ ದಾಖಲೆ ಮುರಿಯುವರೇ ಕೊಹ್ಲಿ?
ಆಸ್ಟ್ರೇಲಿಯ ವಿರುದ್ಧ ಯಾವತ್ತೂ ಅಮೋಘ ಬ್ಯಾಟಿಂಗ್‌ ಪ್ರದರ್ಶಿ ಸುವ ಕೊಹ್ಲಿ ಮುಂದೆ ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯೊಂದನ್ನು ಮುರಿಯುವ ಅವಕಾಶವಿದೆ. ಇವರಿಬ್ಬರೂ ಆಸೀಸ್‌ ವಿರುದ್ಧ ಈಗಾಗಲೇ ಅತ್ಯಧಿಕ 9 ಶತಕ ಬಾರಿಸಿ ಜಂಟಿ ದಾಖಲೆ ಸ್ಥಾಪಿಸಿದ್ದಾರೆ. ಕೊಹ್ಲಿ ಇದನ್ನು 10ಕ್ಕೆ ಏರಿಸಿ ನೂತನ ದಾಖಲೆ ನಿರ್ಮಿಸುವರೇ ಎಂಬುದೊಂದು ಕುತೂಹಲ.

ವಿಶ್ವಕಪ್‌ನ ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್‌ ಶತಕದ ದಾಖಲೆ ನಿರ್ಮಿಸುವ ಅವಕಾಶ ಕೊಹ್ಲಿ ಮುಂದಿತ್ತು. ಆದರೆ ದ.ಆಫ್ರಿಕಾ ವಿರುದ್ಧ ಇದು ಸಾಧ್ಯವಾಗಲಿಲ್ಲ. 2011,2015ರ ವಿಶ್ವಕಪ್‌ ಕೂಟಗಳಲ್ಲಿ, ಭಾರತದ ಮೊದಲ ಪಂದ್ಯದಲ್ಲೇ ಕೊಹ್ಲಿ ಸೆಂಚುರಿ ಬಾರಿಸಿದ್ದರು.

ಸಂಭಾವ್ಯ ತಂಡಗಳು
ಭಾರತ:
ರೋಹಿತ್‌ ಶರ್ಮ, ಶಿಖರ್‌ ಧವನ್‌, ವಿರಾಟ್‌ ಕೊಹ್ಲಿ (ನಾಯಕ), ಕೆ.ಎಲ್‌. ರಾಹುಲ್‌, ಕೇದಾರ್‌ ಜಾಧವ್‌, ಮಹೇಂದ್ರ ಸಿಂಗ್‌ ಧೋನಿ, ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌/ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯ:
ಆರನ್‌ ಫಿಂಚ್‌ (ನಾಯಕ), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖ್ವಾಜಾ, ಸ್ಟೀವನ್‌ ಸ್ಮಿತ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಮಾರ್ಕಸ್‌ ಸ್ಟೋಯಿನಿಸ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌/ನಥನ್‌ ಲಿಯೋನ್‌, ಪ್ಯಾಟ್‌ ಕಮಿನ್ಸ್‌, ಮಿಚೆಲ್‌ ಸ್ಟಾರ್ಕ್‌, ಆ್ಯಡಂ ಝಂಪ.

ಟಾಪ್ ನ್ಯೂಸ್

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Karkala: ದುರ್ಗಾಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

Karkala: ದುರ್ಗಾ ಫಾಲ್ಸ್ ಗೆ ಈಜಲು ಹೋಗಿದ್ದ ವಿದ್ಯಾರ್ಥಿ ನೀರು ಪಾಲು

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ

School Teacher: ಅನಾರೋಗ್ಯದಿಂದ ಉದ್ಯಾವರ ಜೂಲಿಯಾನಾ ಟೀಚರ್‌ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivada

ವಿಶ್ವಕಪ್‌ ಮುಗಿದರೂ ವಿವಾದ ಮುಗಿದಿಲ್ಲ !

williams

ಐಸಿಸಿ ನಿಯಮ ಪ್ರಶ್ನಿಸುವ ಉದ್ದೇಶವಿಲ್ಲ: ವಿಲಿಯಮ್ಸನ್‌

stoks

4 ವರ್ಷಗಳ ಶ್ರಮಕ್ಕೆ ಇಂದು ಪ್ರತಿಫ‌ಲ: ಸ್ಟೋಕ್ಸ್‌

Neesham

ಕ್ರೀಡೆಗಿಂತ ಬೇಕರಿಯೇ ಬೆಸ್ಟ್ : ಜೇಮ್ಸ್ ನೀಶಮ್ ಹತಾಶೆಯ ನುಡಿ

stokes

ಓವರ್‌ ಥ್ರೋ ಎಸೆತದಲ್ಲಿ 6 ಅಲ್ಲ, ಐದು ರನ್ ಆಗಬೇಕಿತ್ತು!

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

1-qeqwewq

Udupi; ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಡಿ.1 ರಂದು ದೀಪೋತ್ಸವ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.