ರಾಯ್ ಶತಕ: ಆಂಗ್ಲರ ಬಲೆಗೆ ಬಿದ್ದ ಬಾಂಗ್ಲಾ ಹುಲಿ
Team Udayavani, Jun 9, 2019, 6:00 AM IST
ಕಾರ್ಡಿಫ್: ವಿಶ್ವಕಪ್ ಇತಿಹಾಸದಲ್ಲಿ ತನ್ನ ಗರಿಷ್ಠ ಮೊತ್ತ ದಾಖಲಿಸಿದ ಇಂಗ್ಲೆಂಡ್ 106 ರನ್ನುಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಮೆರೆದಿದೆ.
ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 6 ವಿಕೆಟಿಗೆ 386 ರನ್ ಪೇರಿಸಿದರೆ, ಬಾಂಗ್ಲಾ 48.5 ಓವರ್‌ಗಳಲ್ಲಿ 280ಕ್ಕೆ ಆಲೌಟ್ ಆಯಿತು. ಆರಂಭಕಾರ ಜಾಸನ್ ರಾಯ್ ಅವರ ಭರ್ಜರಿ 153 ರನ್ ಸಾಹಸ ಇಂಗ್ಲೆಂಡಿನ ಬೃಹತ್ ಮೊತ್ತದಲ್ಲಿ ಎದ್ದು ಕಂಡಿತು. ಬಾಂಗ್ಲಾ ಪರ ಶಕಿಬ್ ಅಲ್ ಹಸನ್ 121 ರನ್ ಬಾರಿಸಿದರು.
2011ರಲ್ಲಿ ಭಾರತದೆದುರಿನ ಬೆಂಗ ಳೂರು ಪಂದ್ಯದಲ್ಲಿ 8ಕ್ಕೆ 338 ರನ್ ಬಾರಿ ಸಿದ್ದು ಇಂಗ್ಲೆಂಡಿನ ಈವರೆಗಿನ ಗರಿಷ್ಠ ವಿಶ್ವಕಪ್ ಗಳಿಕೆಯಾಗಿತ್ತು. ಸತತ 7 ಏಕದಿನ ಪಂದ್ಯ ಗಳಲ್ಲಿ 300 ಪ್ಲಸ್ ರನ್ ಬಾರಿಸಿದ ವಿಶಿಷ್ಟ ಸಾಧನೆಯೂ ಇಂಗ್ಲೆಂಡ್‌ನದ್ದಾಯಿತು.
ಇಂಗ್ಲೆಂಡ್ ಭರ್ಜರಿ ಆರಂಭ
ಜಾಸನ್ ರಾಯ್-ಜಾನಿ ಬೇರ್‌ಸ್ಟೊ ಸೇರಿಕೊಂಡು ಇಂಗ್ಲೆಂಡಿಗೆ ಭರ್ಜರಿ ಆರಂಭ ಒದಗಿಸಿದರು. 19.1 ಓವರ್‌ಗಳಿಂದ 128 ರನ್ ಒಟ್ಟುಗೂಡಿತು. ಆಗಲೇ ಇಂಗ್ಲೆಂಡಿನ ಭಾರೀ ಮೊತ್ತದ ಸೂಚನೆ ಲಭಿಸಿತ್ತು.
35ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿದ ಜಾಸನ್ ರಾಯ್ 121 ಎಸೆತಗಳಿಂದ 153 ರನ್ ಬಾರಿಸಿದರು. ಸಿಡಿಸಿದ್ದು 14 ಬೌಂಡರಿ, 5 ಸಿಕ್ಸರ್. ಇದು ಏಕದಿನದಲ್ಲಿ ರಾಯ್ ಬಾರಿಸಿದ 9ನೇ ಶತಕ. ಬೇರ್‌ಸ್ಟೊ ಭರ್ತಿ 50 ಎಸೆತಗಳಿಂದ 51 ರನ್ ಹೊಡೆದರು (6 ಬೌಂಡರಿ).ರಾಯ್-ರೂಟ್ ಜೋಡಿಯಿಂದ 2ನೇ ವಿಕೆಟಿಗೆ 77 ರನ್ ಹರಿದು ಬಂತು. ಬಟ್ಲರ್ 44 ಎಸೆತಗಳಿಂದ 64 ರನ್ ಸಿಡಿಸಿದರು (2 ಬೌಂಡರಿ, 4 ಸಿಕ್ಸರ್).
ಸ್ಕೋರ್ ಪಟ್ಟಿ
ಇಂಗ್ಲೆಂಡ್
ಜಾಸನ್ ರಾಯ್ ಸಿ ಮೊರ್ತಜ ಬಿ ಮೆಹಿದಿ 153
ಜಾನಿ ಬೇರ್‌ಸ್ಟೊ ಸಿ ಮೆಹಿದಿ ಬಿ ಮೊರ್ತಜ 51
ಜೋ ರೂಟ್ ಬಿ ಸೈಫುದ್ದೀನ್ 21
ಜಾಸ್ ಬಟ್ಲರ್ ಸಿ ಸರ್ಕಾರ್ ಬಿ ಸೈಫುದ್ದೀನ್ 64
ಇಯಾನ್ ಮಾರ್ಗನ್ ಸಿ ಸರ್ಕಾರ್ ಬಿ ಮೆಹಿದಿ 35
ಬೆನ್ ಸ್ಟೋಕ್ಸ್ ಸಿ ಮೊರ್ತಜ ಬಿ ಮುಸ್ತಫಿಜುರ್ 6
ಕ್ರಿಸ್ ವೋಕ್ಸ್ ಔಟಾಗದೆ 18
ಲಿಯಮ್ ಪ್ಲಂಕೆಟ್ ಔಟಾಗದೆ 27
ಇತರ 11
ಒಟ್ಟು (50 ಓವರ್‌ಗಳಲ್ಲಿ 6 ವಿಕೆಟಿಗೆ) 386
ವಿಕೆಟ್ ಪತನ: 1-128, 2-205, 3-235, 4-330, 5-340, 6-341.
ಬೌಲಿಂಗ್:
ಶಕಿಬ್ ಅಲ್ ಹಸನ್ 10-0-71-0
ಮಶ್ರಫೆ ಮೊರ್ತಜ 10-0-68-1
ಮೊಹಮ್ಮದ್ ಸೈಫುದ್ದೀನ್ 9-0-78-2
ಮುಸ್ತಫಿಜುರ್ ರಹಮಾನ್ 9-0-75-1
ಮೆಹಿದಿ ಹಸನ್ 10-0-67-2
ಮೊಸದ್ದೆಕ್ ಹೊಸೈನ್ 2-0-24-0
ಬಾಂಗ್ಲಾದೇಶ
ತಮಿಮ್ ಇಕ್ಬಾಲ್ ಸಿ ಮಾರ್ಗನ್ ಬಿ ವುಡ್ 19
ಸೌಮ್ಯ ಸರ್ಕಾರ್ ಬಿ ಆರ್ಚರ್ 2
ಶಕಿಬ್ ಅಲ್ ಹಸನ್ ಬಿ ಸ್ಟೋಕ್ಸ್ 121
ಮುಶ್ಫಿಕರ್ ರಹೀಂ ಸಿ ರಾಯ್ ಬಿ ಪ್ಲಂಕೆಟ್ 44
ಮೊಹಮ್ಮದ್ ಮಿಥುನ್ ಸಿ ಬೇರ್‌ಸ್ಟೊ ಬಿ ರಶೀದ್ 0
ಮಹಮದುಲ್ಲ ಸಿ ಬೇರ್‌ಸ್ಟೊ ಬಿ ವುಡ್ 28
ಮೊಸದ್ದೆಕ್ ಹೊಸೈನ್ ಸಿ ಆರ್ಚರ್ ಬಿ ಸ್ಟೋಕ್ಸ್ 26
ಮೊಹಮ್ಮದ್ ಸೈಫುದ್ದೀನ್ ಬಿ ಸ್ಟೋಕ್ಸ್ 5
ಮೆಹಿದಿ ಹಸನ್ ಸಿ ಬೇರ್‌ಸ್ಟೊ ಬಿ ಆರ್ಚರ್ 12
ಮಶ್ರಫೆ ಮೊರ್ತಜ ಔಟಾಗದೆ 4
ಮುಸ್ತಫಿಜುರ್ ರಹಮಾನ್ ಸಿ ಬೇರ್‌ಸ್ಟೊ ಬಿ ಆರ್ಚರ್ 0
ಇತರ 19
ಒಟ್ಟು (48.5 ಓವರ್‌ಗಳಲ್ಲಿ ಆಲೌಟ್) 280
ವಿಕೆಟ್ ಪತನ: 1-8, 2-63, 3-169, 4-170, 5-219, 6-254, 7-261, 8-264, 9-280.
ಬೌಲಿಂಗ್: ಕ್ರಿಸ್ ವೋಕ್ಸ್ 8-0-67-0
ಜೋಫÅ ಆರ್ಚರ್ 8.5-2-29-3
ಲಿಯಮ್ ಪ್ಲಂಕೆಟ್ 8-0-36-1
ಮಾರ್ಕ್ ವುಡ್ 8-0-52-2
ಆದಿಲ್ ರಶೀದ್ 10-0-64-1
ಬೆನ್ ಸ್ಟೋಕ್ಸ್ 6-1-23-3
ಪಂದ್ಯಶ್ರೇಷ್ಠ: ಜಾಸನ್ ರಾಯ್
ಅಫ್ಘಾನ್ 172
ಟೌಂಟನ್: ಶನಿವಾರದ ಇನ್ನೊಂದು ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಫ್ಘಾನಿ ಸ್ಥಾನ 41.1 ಓವರ್‌ಗಳಲ್ಲಿ 172 ರನ್ನಿಗೆ ಆಲೌಟ್ ಆಗಿದೆ. ನ್ಯೂಜಿಲ್ಯಾಂಡ್ ಪರ ಜೇಮ್ಸ್ ನೀಶಮ್ 31 ರನ್ನಿಗೆ 5, ಲಾಕಿ ಫರ್ಗ್ಯುಸನ್ 37ಕ್ಕೆ 4 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.