ಭಾರತದಲ್ಲಿ ಮೊಬೈಲ್ ಡೇಟಾ ಭಾರೀ ಅಗ್ಗ
Team Udayavani, Jun 9, 2019, 6:00 AM IST
ಮಣಿಪಾಲ: ಈಗ ಎಲ್ಲಿ ನೋಡಿದರೂ ಮೊಬೈಲ್ ಡಾಟಾದ್ದೇ ಚರ್ಚೆ. ಎಷ್ಟಿದ್ದರೂ ಸಾಲದೆಂಬಂತೆ. ಟೆಲಿಕಾಂ ಕಂಪೆನಿಗಳೂ ಸಹ ಡಾಟಾ ಲೆಕ್ಕವನ್ನೇ ಮುಂದಿಟ್ಟು ಗ್ರಾಹಕರನ್ನು ಸೆಳೆದುಕೊಳ್ಳುತ್ತಿದ್ದಾರೆ. ಜಗತ್ತಿನಲ್ಲಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಅತೀ ಕಡಿಮೆ ದರಗಳಿಗೆ 1 ಜಿಬಿ (ಜಿಗಾಬೈಟ್) ಡಾಟಾ ಲಭ್ಯವಾಗುತ್ತಿರುವುದು. ನಮ್ಮಲ್ಲಿ 1 ಜಿಬಿ ಮೊಬೈಲ್ ಡಾಟಾಗೆ ಬರೀ 18. 22 ರೂ. ಗಳು ಅಂದರೆ 18.50 ರೂ.ಗೆ ದೊರಕುತ್ತಿದೆ.
ಅದೇ ಆಕರ್ಷಣೆ
ಹಾಗಾಗಿಯೇ ಸಹಜವಾಗಿ ಜನರು ಹೆಚ್ಚು ನೆಟ್‌ಪ್ಯಾಕ್ ಅಥವ ಡಾಟಾ ಪ್ಯಾಕ್ ಖರೀದಿಸುತ್ತಿದ್ದಾರೆ. ಜಿಯೋ ಪರಿಚಯವಾಗುವ ಮೊದಲು ಡಾಟಾ ಪ್ಯಾಕ್ ತುಸು ದುಬಾರಿಯಿತ್ತು. ಈಗ ಸ್ಪರ್ಧಾತ್ಮಕ ದರದಲ್ಲಿ ಲಭ್ಯವಿದೆ.
ಏನು ಕಾರಣ?
ಜಾಗತಿಕ ಮಟ್ಟದಲ್ಲಿ 1 ಜಿಬಿ ಡಾಟಾ ದರ ಸರಾಸರಿ 600 ರೂ. ಇದೆ. ವಿಶ್ವದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಇರುವ ದೇಶದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನದ ಬೆಳವಣಿಗೆಗಳು ಕ್ಷಿಪ್ರವಾಗಿ ಸಾಗುತ್ತವೆ. ಯುವಜನರು ವರ್ತಮಾನದ ಜತೆಗೆ ಸಾಗಲು ಇಷ್ಟಪಡುತ್ತಾರೆ. ಹಾಗಾಗಿ ಇಂಟರ್‌ನೆಟ್ ಮೂಲಕ ಜಗತ್ತಿನ ಆಗುಹೋಗುಗಳ ಪಡೆ ಯು ವಿಕೆ, ತಮ್ಮ ಮಾಹಿತಿ, ಸ್ಥಿತಿ ಎಲ್ಲವನ್ನೂ ಬಿತ್ತರಿಸುತ್ತಾರೆ.
ಇ.ಲೈಬ್ರೆರಿಗಳ ಬಳಕೆ
ಆಧುನಿಕ ಯುಗದಲ್ಲಿ ವಾಚನಾಲಯಗಳ ಬಳಕೆ ಕಡಿಮೆಯಾಗುತ್ತಿದೆ. ಪುಸ್ತಗಳನ್ನು ಕೊಂಡು ಓದು ವವರ ಸಂಖ್ಯೆ ಬಿಡಿ, ಲಭ್ಯವುಳ್ಳ ಪುಸ್ತಕಗಳನ್ನೇ ಓದು ವವರ ಸಂಖ್ಯೆಯೂ ಕಡಿಮೆ. ವಾಚನಾಲಯಗಳ ಸ್ಥಾನವನ್ನು ಇ-ಲೈಬ್ರೆರಿಗಳು ತುಂಬಿವೆ. ಇ-ಬುಕ್‌ಗಳು ಇಂದು ಹೆಚ್ಚು ಪ್ರಚಲಿತದಲ್ಲಿರುವ ಕಾರಣ ಎಲ್ಲರೂ ಅಂತರ್ಜಾಲದ ಮೊರೆ ಹೋಗುವವರೇ ಹೆಚ್ಚು. ಈ ಕಾರಣಕ್ಕೆ ಮೊಬೈಲ್ ನೆಟ್‌ವರ್ಕ್ ಸಂಸ್ಥೆ ಗಳು ಪೈಪೋಟಿಗೆ ಇಳಿದು ದರಗಳನ್ನು ಕಡಿಮೆ ಮಾಡಿ, ಗುಣಮಟ್ಟದ ಸೇವೆಗಳನ್ನು ನೀಡುತ್ತಿವೆ. ಈಗ ಸುಮಾರು 28 ಕೋಟಿ ಗ್ರಾಹಕರನ್ನು ಜಿಯೋ ಹೊಂದಿದೆ.
ಅಗ್ಗದ ಡಾಟಾ ಸೇವೆಯಲ್ಲಿ ಭಾರತದ ಅನಂತರದ ಸ್ಥಾನದಲ್ಲಿ ಕಿರ್ಗಿಸ್ಥಾನ ಇದೆ. ಅಲ್ಲಿ ಜಿಬಿಗೆ 19.13 ಕಿರ್ಗಿಸ್ಥಾನಿ ಸಮ್ (18.95 ರೂ.)ಗಳಿವೆ. ಕಜಾಕಿಸ್ಥಾನ, ಉಕ್ರೈನ್‌ಗಳು ಆ ನಂತರದ ಸ್ಥಾನದಲ್ಲಿವೆ. ನಮ್ಮ ದೇಶದಲ್ಲಿ ಸುಮಾರು 44.2 ಕೋಟಿ ಸ್ಮಾರ್ಟ್ ಫೋನ್ ಬಳಕೆದಾರರಿದ್ದು, ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್ ಫೋನ್ ಮಾರುಕಟ್ಟೆ ಹೊಂದಿದ ದೇಶವಾಗಿದೆ. ಚೀನಾ ಮೊದಲ ಸ್ಥಾನದಲ್ಲಿದೆ.
1ಜಿಬಿ ಡೇಟಾದ ಸರಾಸರಿ ದರ
ಭಾರತ 18.22 (0.26 ಡಾಲರ್)
ಬ್ರಿಟನ್ 467.67 (5.35 ಪೌಂಡ್)
ಅಮೆರಿಕ 866.77 (12.53 ಡಾಲರ್)
ಜಿಂಬಾಬ್ವೆ 5,268.66 (67.97 ಯೂರೋ)
ಜಾಗತಿಕ ಮಟ್ಟದ ಸರಾಸರಿ 600 (8.67 ಡಾಲರ್)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.