ಭೂಮಿ ಹದದಲ್ಲಿ ರೈತರು ನಿರತ
•ಪೂರ್ವ ಮುಂಗಾರಿನಲ್ಲಿ ಮಳೆ ಕೊರತೆ•ಜಿಲ್ಲೆಯಲ್ಲಿ 3.53 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ
Team Udayavani, Jun 9, 2019, 11:02 AM IST
ಯಾದಗಿರಿ: ಮುಂಗಾರು ಬಿತ್ತನೆಗೆ ಜಮೀನು ಹದ ಮಾಡುತ್ತಿರುವ ರೈತ.
ಅನೀಲ ಬಸೂದೆ
ಯಾದಗಿರಿ: ಜಿಲ್ಲೆಯಲ್ಲಿ ಪ್ರಸಕ್ತ ಪೂರ್ವ ಮುಂಗಾರಿನಲ್ಲಿಯೇ ಮಳೆ ಕೈಕೊಟ್ಟಿದ್ದರಿಂದ ಕಂಗಾಲಾಗಿದ್ದ ರೈತ ಸಮೂಹದಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದ ಖುಷಿ ಮೂಡಿದೆ. ಸತತ ನೀರಿನ ಅಭಾವದಿಂದ ನೀರಾವರಿ ಪ್ರದೇಶದಲ್ಲಿಯೂ ರೈತರು ಬಿತ್ತನೆ ಮಾಡಿಲ್ಲ.
ಜಿಲ್ಲೆಯಲ್ಲಿ ಮಾರ್ಚ್‌ದಿಂದ ಮೇ ತಿಂಗಳ ಅಂತ್ಯದವರೆಗೆ ಮಳೆ ಸುರಿದಿದ್ದರೇ ರೈತರು ಬಿತ್ತನೆಗೆ ಭೂಮಿ ಸಿದ್ಧ ಮಾಡುತ್ತಿದ್ದರು, ಪೂರ್ವ ಮುಂಗಾರಿನಲ್ಲಿ 62 ಮಿ.ಮೀಟರ್ ವಾಡಿಕೆ ಮಳೆಯಾಗಬೇಕಿತ್ತು, ಆದರೆ ಕೇವಲ 34 ಮಿ.ಮೀಟರ್ ಮಳೆಯಾಗಿದೆ. ಈ ವೆರೆಗೆ ಜಿಲ್ಲೆಯ ವಾಡಿಕೆ ಮಳೆ 79 ಮಿ.ಮೀಟರ್‌ಗಳಲ್ಲಿ 51 ಮಿ.ಮೀಟರ್ ಸುರಿದಿದ್ದು, ಶೇ. 35ರಷ್ಟು ಮಳೆ ಕೊರತೆ ಎದುರಾಗಿದೆ.
ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 3.53 ಲಕ್ಷ ಹೆಕ್ಟೇರ್ ಬಿತ್ತೆನೆ ಗುರಿ ಹೊಂದಲಾಗಿದ್ದು, ಪೂರ್ವ ಮುಂಗಾರಿನಲ್ಲಿಯೇ ಮಳೆ ಕೈ ಕೊಟ್ಟಿರುವುದರಿಂದ ರೈತರು ತೀವ್ರ ಆತಂಕಕ್ಕೀಡಾಗುವಂತೆ ಮಾಡಿದೆ. ಸಕಾಲಕ್ಕೆ ಮಳೆಯಾದರೆ ರೈತರು ಜಮೀನು ಬಿತ್ತನೆಗೆ ಹದ ಮಾಡುತ್ತಿದ್ದರೂ ಆದರೆ, ಮಳೆಯೇ ಇಲ್ಲದೇ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ರೈತರು ಜಮೀನು ಹದ ಮಾಡದೇ ಇರುವುದು ಮುಂಗಾರಿನಲ್ಲಿ ಅರ್ಧದಷ್ಟು ಬಿತ್ತನೆಯಾಗುವುದು ಡೌಟು ಎನ್ನಲಾಗುತ್ತಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಹೆಸರು, ತೊಗರಿ, ಉದ್ದು, ಭತ್ತ, ಸಜ್ಜೆ, ಜೋಳ, ಅಲಸಂದಿ, ಸೂರ್ಯಕಾಂತಿ, ಮೆಕ್ಕೆ ಜೋಳ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ರಾಷ್ಟ್ರೀಯ ಬೀಜ ನಿಗಮ ಹಾಗೂ ಖಾಸಗಿ ಸಂಸ್ಥೆಗಳಿಂದ ದಾಸ್ತಾನು ಮಾಡಲಾಗಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಆದರೂ ಮಳೆಯಿಲ್ಲದೇ ರೈತರು ಎಷ್ಟರ ಮಟ್ಟಿಗೆ ಬಿತ್ತನೆಗೆ ಮುಂದಾಗುತ್ತಾರೆ ಎನ್ನುವುದೇ ಪ್ರಶ್ನೆಯಾಗಿದೆ.
ಜಿಲ್ಲೆಯಲ್ಲಿ ರಸಗೊಬ್ಬರ 79,285 ಮೆಟ್ರಿಕ್ ಟನ್ ಬೇಡಿಕೆ ಇದ್ದು, 95,567 ಮೆಟ್ರಿಕ್ ಟನ್ ಜಿಲ್ಲೆಗೆ ಹಂಚಿಕೆ ಮಾಡಲಾಗಿದೆ. ಹಾಗಾಗಿ, ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ. ಅಲ್ಲದೆ ಮಳೆ ಬರದಿದ್ದರೆ ಪರ್ಯಾಯ ಬೆಳೆ ಪದ್ಧತಿ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದೂ ಕೃಷಿ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಎಷ್ಟು ಮಳೆ: ಜಿಲ್ಲೆಯ ಅವಿಭಜಿತ ತಾಲೂಕುಗಳಲ್ಲಿ ಮಳೆ ಪ್ರಮಾಣವನ್ನು ನೋಡುವುದಾದರೆ, ಶಹಾಪುರ ತಾಲೂಕಿನಲ್ಲಿ 86 ಮಿ.ಮೀಟರ್ ವಾಡಿಕೆ ಮಳೆಯಲ್ಲಿ ಈವರೆಗೆ 44 ಮಿ.ಮೀಟರ್ ಮಳೆ ಸುರಿರಿದ್ದು, ಶೇ. 49ರಷ್ಟು ಕೊರತೆಯುಂಟಾಗಿದೆ. ಸುರಪುರ ತಾಲೂಕಿನಲ್ಲಿ ವಾಡಿಕೆ ಮಳೆ 74 ಮಿ.ಮೀಟರ್‌ಗಳಲ್ಲಿ 60 ಮಿ.ಮೀಟರ್ ಸುರಿದಿದ್ದು, ಶೇ. 20 ಕೊರತೆಯುಂಟಾಗಿದೆ ಹಾಗೂ ಯಾದಗಿರಿಯಲ್ಲಿ 79 ಮಿ.ಮೀಟರ್ ವಾಡಿಕೆ ಮಳೆಯಲ್ಲಿ ಈವರೆಗೆ 49 ಮಿ.ಮೀಟರ್ ಮಳೆ ಸುರಿದು ಶೇ. 38 ಕೊರತೆಯಾಗಿದೆ.
ಎಲ್ಲೆಲ್ಲಿ ಎಷ್ಟು ಗುರಿ: ಶಹಾಪುರ ತಾಲೂಕಿನಲ್ಲಿ 62,962 ಹೆಕ್ಟೇರ್ ನೀರಾವರಿ, 71004 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 1,33,966 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಸುರಪುರ ವ್ಯಾಪ್ತಿಯಲ್ಲಿ 73,405 ಹೆಕ್ಟೇರ್ ನೀರಾವರಿ, 51,321 ಹೆಕ್ಟೇರ್ ಖುಷ್ಕಿ ಸೇರಿ ಒಟ್ಟು 1,24,726 ಹೆಕ್ಟೇರ್ ಬಿತ್ತನೆ ಗುರಿಯಿದೆ. ಯಾದಗಿರಿಯಲ್ಲಿ 24,034 ಹೆಕ್ಟೇರ್ ನೀರಾವರಿ ಹಾಗೂ 71,122 ಹೆಕ್ಟೇರ್ ಖುಷ್ಕಿ ಸೇರಿದಂತೆ ಒಟ್ಟು 95,156 ಹೆಕ್ಟೇರ್‌ಗಳಲ್ಲಿ ಬಿತ್ತನೆ ಮಾಡುವ ಗುರಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.