ಬಾಕಿ ಶುಲ್ಕ ಮರುಪಾವತಿಗೆ ಆಗ್ರಹ
5.5 ಕೋಟಿ ರೂ.ಬಾಕಿ : ಸಮಸ್ಯೆ ಮುಂದುವರಿದರೆ ಪ್ರತಿಭಟನೆ
Team Udayavani, Jun 9, 2019, 1:57 PM IST
ತುಮಕೂರು ನಗರದ ಮಾರುತಿ ಇಂಟರ್‌ನ್ಯಾಷನಲ್ ಸ್ಕೂಲ್ನಲ್ಲಿ ಶನಿವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಹಾಲನೂರು ಲೇಪಾಕ್ಷ ಮಾತನಾಡಿದರು.
ತುಮಕೂರು : ತುಮಕೂರು ದಕ್ಷಿಣ ಶೈಕ್ಷಣಿಕ ಜಿಲ್ಲೆಗೆ ಹಿಂದಿನ ವರ್ಷ, 2018-19 ನೇ ಸಾಲಿನ ಶುಲ್ಕ ಮರು ಪಾವತಿ 5.5 ಕೋಟಿ ರೂ. ಇನ್ನು ಬಾಕಿ ಯಿದೆ. ಅನುದಾನ ರಹಿತ ಶಾಲೆಗಳಿಗೆ ಸರ್ಕಾರ ಮತ್ತು ಅಧಿಕಾರಿಗಳು ಕಿರುಕುಳ ನೀಡುತ್ತಿದ್ದು, ಈ ರೀತಿಯ ಸಮಸ್ಯೆ ಮುಂದುವರಿದರೆ ಜೂ. 30 ರೊಳಗೆ ಪ್ರತಿಭಟನೆ ಮಾಡು ವುದಾಗಿ ಖಾಸಗಿ ಅನುದಾನ ರಹಿತ ಶಾಲೆಗಳ ಸಂಘದ ಅಧ್ಯಕ್ಷ ಹಾಲನೂರು ಲೇಪಾಕ್ಷ ತಿಳಿಸಿದರು.
ನಗರದ ಮಾರುತಿ ಇಂಟರ್‌ನ್ಯಾಷನಲ್ ಸ್ಕೂಲ್ನಲ್ಲಿ ಶನಿವಾರ ಏರ್ಪ ಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆರ್‌ಟಿಇ ಕಾಯ್ದೆ ಪ್ರಕಾರ ಜ.31 ರೊಳಗೆ ಪಾವತಿಯಾಗಬೇಕಿದ್ದ ಹಣವನ್ನು ಈವರೆಗೆ ಕೇವಲ ಒಂದು ಕಂತು ಮಾತ್ರ ಕಳೆದ ತಿಂಗಳು ಬಾಕಿಯಿದ್ದು, ಇನ್ನು ಹೆಚ್ಚಿನ ಶುಲ್ಕವು ಬಾಕಿಯಿದೆ. ಶಾಲಾ ಬ್ಯಾಗ್, ಪಠ್ಯ ಪುಸ್ತಕಗಳ ಸಂಬಂಧಿಸಿದಂತೆ ಶೇ.75 ರಷ್ಟು ಪುಸ್ತಕಗಳು ಮಾರಾಟ ವಾಗಿದ್ದು, 25 ರಷ್ಟು ಹಾಗೆ ಉಳಿದಿವೆ. ಇದರಲ್ಲಿ ಹಲವು ಲೋಪದೋಷಗಳಿವೆ. ಶಾಲೆಗಳಲ್ಲಿ ಸರ್ಕಾರ ತುಂಬಿರುವ ಆರ್‌ಟಿಇ ಸೀಟುಗಳು 20-30 ಸಂಖ್ಯೆಯಲ್ಲಿ ಬಿಟ್ಟುಹೋಗಿರುವ ನಿಟ್ಟಿನಲ್ಲಿ ಖಾಲಿ ಯಾಗಿವೆ, ಇವುಗಳ ನಷ್ಟವನ್ನು ಸರ್ಕಾರ ಭರಿಸಬೇಕು ಎಂದರು.
ಅನುದಾನ ರಹಿತ ಶಾಲೆಗಳಿಗೆ ಅಧಿಕಾರಗಳು ಭೇಟಿ ನೀಡಿ ಕಿರುಕುಳ ನೀಡುತ್ತಿದ್ದು, ಅಧಿಕಾರಿಗಳ ಹಾಗೂ ರಾಜ್ಯ ಸರ್ಕಾರದ ಕೆಂಗಣ್ಣು ಖಾಸಗಿ ಶಾಲೆಗಳ ಮೇಲೆ ಬಿದ್ದಿದೆ. ಶಾಲೆಯಲ್ಲಿ ಮೂಲಭೂತ ಸೌಲಭ್ಯ, ಬ್ಯಾಗ್, ಹಾಗೂ ಪಠ್ಯಪುಸ್ತಕಗಳ ಶುಲ್ಕವನ್ನು ಸಾಮಾನ್ಯ ವಾಗಿ ತೆಗೆದುಕೊಳ್ಳದೇ ಜಿಎಸ್ಟಿ ನೆಪವೊಡ್ಡಿ ಹೆಚ್ಚಿನ ಶುಲ್ಕವನ್ನು ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 2018 ರಲ್ಲೇ ಹಣ ಪಾವತಿ ಸಿದ್ದರೂ ಪುಸ್ತಕ ಇನ್ನೂ ನೀಡಿಲ್ಲ. ಕಳೆದ ವರ್ಷ ಈ ಸಮಸ್ಯೆಯನ್ನು ಎದುರಿ ಸಿದ್ದೇವೆ. ಪ್ರಸಕ್ತ ವರ್ಷವು ಕೂಡ ಈ ರೀತಿಯ ಸಮಸ್ಯೆಯ ಆತಂಕವಿದೆ ಎಂದು ಮಾತನಾಡಿದರು.
ಅನುದಾನ ರಹಿತ ಶಾಲೆಗಳ ಸಂಘದ ಮುಖ್ಯಸ್ಥರಾದ ಡಾ.ಜಯರಾಮ್ ರಾವ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌ರಾವ್, ಪ್ರಕಾಶ್ ರಾವ್, ಜಂಟಿ ಕಾರ್ಯದರ್ಶಿ ಲೋಕೇಶ್, ಮಂಜುನಾಥ್, ಖಜಾಂಚಿ ಚಂದ್ರ ಶೇಖರ್ ಪದಾಧಿಕಾರಿಗಳಾದ ನಿಖೀಲ್, ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
Tumkur: ತುಮಕೂರಲ್ಲಿ ದಲಿತ ಮಹಿಳೆ ಹ*ತ್ಯೆ: 21 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
Road Mishap: ಚಲಿಸುತ್ತಿದ್ದ ಲಾರಿಗೆ ಕಾರು ಢಿಕ್ಕಿ: ತಂದೆ-ಮಗು ಸ್ಥಳದಲ್ಲೇ ಸಾವು
Maharashtra ಸರಕಾರ ವಿರುದ್ಧ ಮಾನನಷ್ಟ ಕೇಸ್: ಸಚಿವ ಡಾ| ಜಿ. ಪರಮೇಶ್ವರ್
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.