ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ
ಒಂದೇ ಠಾಣೆಯಲ್ಲಿ ಬೀಡುಬಿಟ್ಟಿದ್ದ ಪೊಲೀಸರನ್ನು ವರ್ಗಾವಣೆಗೊಳಿಸಿ ಆದೇಶಿಸಿದ ಎಸ್ಪಿ
Team Udayavani, Jun 9, 2019, 3:36 PM IST
ಚಿಕ್ಕಮಗಳೂರು: ಜಿಲ್ಲಾ ರಕ್ಷಣಾಧಿಕಾರಿ ಕಚೇರಿ.
ಚಿಕ್ಕಮಗಳೂರು: ಒಂದೇ ಠಾಣೆಯಲ್ಲಿ ಹಲವಾರು ವರ್ಷಗಳಿಂದ ಬೀಡುಬಿಟ್ಟಿದ್ದ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಪೊಲೀಸರನ್ನು ಏಕಕಾಲದಲ್ಲಿಯೇ ಸಾರಾಸಗಟಾಗಿ ವರ್ಗಾವಣೆಗೊಳಿಸಿರುವ ಜಿಲ್ಲಾ ರಕ್ಷಣಾಧಿಕಾರಿ ಹರೀಶ್ ಪಾಂಡೆ ಅವರು, ಇಲಾಖೆ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದ್ದಾರೆ.
ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಎಸ್‌ಐ, ಮುಖ್ಯಪೇದೆ ಹಾಗೂ ಪೇದೆಗಳನ್ನು ಗುರುತಿಸಿ ಜಿಲ್ಲೆಯ ವಿವಿಧ ಠಾಣೆಗಳಿಗೆ ವರ್ಗಾವಣೆಗೊಳಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.
ಕಚೇರಿಗೆ ವರದಿ ಸಲ್ಲಿಸಲು ಸೂಚನೆ: ಜಿಲ್ಲಾ ಪೊಲೀಸ್ ಘಟಕದಲ್ಲಿ ಒಂದೇ ವರ್ಗಾವಣೆ ಆದೇಶ ಹೊರಡಿಸಿರುವ ಎಸ್ಪಿ, ಕೌನ್ಸೆಲಿಂಗ್ ಮೂಲಕ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವರ್ಗಾವಣೆ ಆದೇಶವನ್ನು ತಕ್ಷಣದಿಂದಲೇ ಜಾರಿಗೊಳಿಸಿದ್ದಾರೆ. ಅಲ್ಲದೇ, ವರ್ಗಾವಣೆಗೊಂಡ ಅಧಿಕಾರಿ, ಸಿಬ್ಬಂದಿಯನ್ನು ಕೂಡಲೇ ಠಾಣೆ ಅಥವಾ ಕಚೇರಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ವರ್ಗಾವಣೆಯಾದ ಸ್ಥಳಗಳಿಗೆ ವರದಿ ಮಾಡಿಕೊಳ್ಳಲು ಹಾಗೂ ಪಾಲನಾ ವರದಿಯನ್ನು ತಮ್ಮ ಕಚೇರಿಗೆ ಸಲ್ಲಿಸುವಂತೆ ಸಂಬಂಧಪಟ್ಟ ವೃತ್ತ ನಿರೀಕ್ಷರಿಗೆ ಸೂಚಿಸಿದ್ದಾರೆ.
ವರ್ಗಾವಣೆಗೊಂಡ ಅಧಿಕಾರಿಗಳು: ಎಎಸ್‌ಐ ಶಿವರುದ್ರಮ್ಮ ಕೊಪ್ಪ ಠಾಣೆ, ಎಎಸ್‌ಐ ಗಾಯಿತ್ರಿ ಲಿಂಗದಹಳ್ಳಿ ಠಾಣೆ, ಎಎಸ್‌ಐ ಜ್ಯೋತಿ ಲಕ್ಕವಳ್ಳಿ ಠಾಣೆ, ಎಎಸ್‌ಐ ವೈ.ಎನ್.ಚಂದ್ರಮ್ಮ ಬಾಳೆಹೊನ್ನೂರು ಠಾಣೆ, ಎಂ.ಕೃಷ್ಣಮೂರ್ತಿ ಕಳಸ ಠಾಣೆ, ಎಎಸ್‌ಐ ಹೇಮಾ ಗೋಣಿಬೀಡು ಠಾಣೆ, ಎಎಸ್‌ಐ ಕುಮಾರಮೂರ್ತಿ ಸಿಂಗಟಗೆರೆ ಠಾಣೆ, ಎಎಸ್‌ಐ ಮುರಳೀಧರ್ ಅವರನ್ನು ಕಳಸ ಠಾಣೆಗೆ ವರ್ಗಾಯಿಸಲಾಗಿದೆ.
ಮುಖ್ಯ ಪೇದೆಗಳು: ಮುಖ್ಯ ಪೇದೆಗಳಾದ ಕುಮಾರಸ್ವಾಮಿ ಅವರನ್ನು ಆಲ್ದೂರು ಠಾಣೆ, ಹರೀಶ್ ಸಿಟಿ ಸಂಚಾರ ಠಾಣೆ, ಮಂಜುನಾಥ್ ಚಿಕ್ಕಮಗಳೂರು ಸಂಚಾರ ಠಾಣೆ, ಸುರೇಶ್‌ರನ್ನು ಕಡೂರು ಠಾಣೆ, ರವಿಕುಮಾರ್ ಗ್ರಾಮಾಂತರ ವೃತ್ತ ನಿರೀಕ್ಷಕರ ಕಚೇರಿಗೆ, ಸುಬ್ರಹ್ಮಣ್ಯ ಮಲ್ಲಂದೂರು ಠಾಣೆ, ರಾಜು ಜಯಪುರ ಠಾಣೆ, ಕೆ.ಎಸ್.ಗಂಗಾಧರ್ ನಗರ ಠಾಣೆ, ಮಂಜುನಾಥ್ ಮೂಡಿಗೆರೆ ಠಾಣೆ, ನಾಗೇಂದ್ರರಾಜ್ ಅರಸ್ ಕಡೂರು ಠಾಣೆ, ಶೇಷಪ್ಪ ಶೆಟ್ಟಿ ಬೀರೂರು ವೃತ್ತ ಕಚೇರಿ, ಮೋಹನ್‌ಕುಮಾರ್ ಕಳಸ ಠಾಣೆ, ಉಮೇಶ್ ಸಂಚಾರ ಠಾಣೆ, ಶಿವಕುಮಾರ್ ಕುದುರೆಮುಖ ಠಾಣೆ, ಕಿರಣ್ ಬಂಡೆಗಾರ್ ಬಾಳೆಹೊನ್ನೂರು ಠಾಣೆ, ಶೇಷೇಗೌಡ ಸಿಂಗಟಗೆರೆ ಠಾಣೆ, ಗುರುಮೂರ್ತಿ ಸಿ.ಎಚ್.ಸಂಚಾರ ಠಾಣೆ, ಉಮೇಶ್.ಕೆ. ಜಯಪುರ ಠಾಣೆ, ರಂಗನಾಥ್ ಸಿಂಗಟಗೆರೆ ಠಾಣೆ, ರವಿ.ಎಂ.ಆರ್.ಪಂಚನಹಳ್ಳಿ ಠಾಣೆ, ರಂಗೇಗೌಡ ಆಲ್ದೂರು ಠಾಣೆ, ಬಸವರಾಜಪ್ಪ ಜಯಪುರ ಠಾಣೆ, ಗಿರೀಶ್.ಎಚ್.ಜಿ ಪಂಚನಹಳ್ಳಿ ಠಾಣೆ, ರಮೇಶ್ ಕುದುರೆಮುಖ ಠಾಣೆ, ಎನ್.ಇ.ಜಯಶಂಕರ್ ಆಲ್ದೂರು ಠಾಣೆ, ರಾಜೇಂದ್ರ ಬಾಳೂರು ಠಾಣೆ, ಗುರುನಾಯಕ್ ಶೃಂಗೇರಿ ಠಾಣೆ, ಜಿ.ಕೆ.ಚಂದ್ರಪ್ಪ ಆಲ್ದೂರು ಠಾಣೆ, ಎಂ.ಎಂ.ಅಶೋಕ್ ಕಳಸ ಠಾಣೆ, ಉಮೇಶ್‌ನಾಯಕ್ ಮೂಡಿಗೆರೆ ಠಾಣೆ, ಓಂಪ್ರಕಾಶ್.ಸಿ. ಆಲ್ದೂರು ಠಾಣೆ, ಮಹೇಶ್ ಮೂಡಿಗೆರೆ ವೃತ್ತ ನಿರೀಕ್ಷಕರ ಕಚೇರಿ, ಲಕ್ಷ್ಮಣಗೌಡ ಬಣಕಲ್ ಠಾಣೆ, ಶಿವಾನಂದ ಮೂಡಿಗೆರೆ ಠಾಣೆ, ಪರಮೇಶ ಜಯಪುರ ಠಾಣೆ, ದಿನೇಶ್ ಬಣಕಲ್ ಠಾಣೆ, ಆದರ್ಶ ಕೊಪ್ಪ ಠಾಣೆ, ಸುರೇಶ್ ಗೋಣಿಬೀಡು ಠಾಣೆ, ಶಿವಕುಮಾರ್ ಕಳಸ ಠಾಣೆ, ಸಿ.ಟಿ.ಚಂದ್ರಪ್ಪ ಕೊಪ್ಪ ಠಾಣೆ, ರೇಣುಕಾಚಾರ್ಯ ಎನ್.ಆರ್.ಪುರ ವೃತ್ತ ನಿರೀಕ್ಷಕರ ಕಚೇರಿ, ಬಿ.ಎಲ್.ಸುರೇಶ ಕೊಪ್ಪ ಠಾಣೆ, ರಾಘವೇಂದ್ರ ಗೋಣಿಬೀಡು ಠಾಣೆ, ತೀರ್ಥ ಮಲ್ಲೇಗೌಡ ಕೊಪ್ಪ ಠಾಣೆ, ರುದ್ರೇಶ್ ಕಳಸ ಠಾಣೆ, ಪ್ರಕಾಶ್ ಎನ್.ಆರ್.ಪುರ ವೃತ್ತ ನಿರೀಕ್ಷಕರ ಕಚೇರಿ, ಲಕ್ಷಿ ್ಮೕನಾರಾಯಣ್ ಜಯಪುರ ಠಾಣೆ, ಗಂಗಾಧರಪ್ಪ ಗೋಣಿಬೀಡು ಠಾಣೆ, ವರದಪ್ಪ ಕಳಸ ಠಾಣೆ, ಸಿ.ಟಿ.ರಮೇಶ್ ಕೊಪ್ಪ ವೃತ್ತ ನಿರೀಕ್ಷಕರ ಕಚೇರಿ, ರವಿಕುಮಾರ್ ಶೃಂಗೇರಿ ಠಾಣೆ, ಉಮೇಶ್ ಶೃಂಗೇರಿ ಠಾಣೆ, ಪ್ರಕಾಶ್ ಎಚ್.ಎಸ್. ಅವರನ್ನು ಬಾಳೂರು ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಸುರೇಶ್ ಬಾಳೂರು ಠಾಣೆ, ಎಚ್.ಎಂ.ಈಶ್ವರಪ್ಪ ಬಾಳೂರು ಠಾಣೆ, ಕುಮಾರ್. ಡಿ.ವಿ.ಹರಿಹರಪುರ ಠಾಣೆ, ಗಿರೀಶ್ ಹರಿಹರಪುರ ಠಾಣೆ, ಮಹಮದ್ ಇಲಿಯಾಸ್ ಹರಿಹರಪುರ ಠಾಣೆ, ವಿಜಯಶಂಕರ್ ಕುದುರೆಮುಖ ವೃತ್ತ ನಿರೀಕ್ಷಕರ ಕಚೇರಿ, ಜಯಣ್ಣ ಕುದುರೆಮುಖ ಠಾಣೆ, ಅಶೋಕ್ ಕುದುರೆಮುಖ ವೃತ್ತ ನಿರೀಕ್ಷಕರ ಕಚೇರಿ, ಭಾಸ್ಕರ್ ಅವರನ್ನು ಎನ್.ಆರ್.ಪುರ ಠಾಣೆಗೆ ವರ್ಗಾಯಿಸಿದ್ದಾರೆ.
ಮಹಿಳಾ ಪೇದೆಗಳು: ಮಹಿಳಾ ಪೇದೆಗಳಾದ ಪ್ರೇಮಾ ಲಿಂಗದಹಳ್ಳಿ ಠಾಣೆ, ಕಲಾವತಿ ಕಡೂರು ಠಾಣೆ, ರೇಖಾ ತರೀಕೆರೆ ಠಾಣೆ, ಪ್ರಮೀಳಾ ಅಜ್ಜಂಪುರ ಠಾಣೆ, ಆಶಾ ಅವರನ್ನು ಕಡೂರು ಠಾಣೆಗೆ ವರ್ಗಾಯಿಸಿ ಆದೇಶಿಸಿದ್ದಾರೆ.
ಪೇದೆಗಳು: ಪೇದೆಗಳಾದ ಕುಮಾರಸ್ವಾಮಿ ಮಹಿಳಾ ಠಾಣೆ, ಗೋಪಾಲ್ ಗ್ರಾಮಾಂತರ ಠಾಣೆ, ಓಂಕಾರಸ್ವಾಮಿ ಕೊಪ್ಪ ಠಾಣೆ, ಕುಚೇಲ.ಪಿ.ಕೆ. ಕಡೂರು ಠಾಣೆ, ಮಥಾಯಿ ಕೊಪ್ಪ ಠಾಣೆ, ಮಂಜುನಾಥ್‌ಸ್ವಾಮಿ ಬಾಳೂರು ಠಾಣೆ, ನವೀನ್‌ಕುಮಾರ್ ಅಜ್ಜಂಪುರ ಠಾಣೆ, ಗಿರೀಶ್‌ಕುಮಾರ್ ಎನ್.ಆರ್.ಪುರ ಠಾಣೆ, ವಿಜಯಕುಮಾರ್ ಮಹಿಳಾ ಠಾಣೆ, ರಿಯಾಜ್ ತರೀಕೆರೆ ಠಾಣೆ, ಜಗದೀಶ್ ಬಣಕಲ್ ಠಾಣೆ, ಓಂಕಾರಮೂರ್ತಿ ಅಜ್ಜಂಪುರ ಠಾಣೆ, ಪ್ರಭಾಕರ್ ಮಹಿಳಾ ಠಾಣೆ, ಸಂದೇಶ್ ಅಜ್ಜಂಪುರ ಠಾಣೆ, ಆನಂದ ಆಲ್ದೂರು ಠಾಣೆ, ಬಿನು ಹರಿಹರಪುರ ಠಾಣೆ, ಕೆ.ಜಿ.ಜಗದೀಶ್ ಗೋಣಿಬೀಡು ಠಾಣೆ, ರಮೇಶ್ ಮಹಿಳಾ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.