ಮುಚ್ಚಿದ ಸರಕಾರಿ ಶಾಲೆ ತೆರೆಯಲು ಮುಂದಾದ ಶಿಕ್ಷಣ ಇಲಾಖೆ
Team Udayavani, Jun 10, 2019, 6:10 AM IST
ಹೆಬ್ರಿ: ಮಕ್ಕಳಿಲ್ಲವೆಂದು ಕಳೆದ ಮೂರು ವರ್ಷಗಳಿಂದ ಮುಚ್ಚಿದ್ದ ಸುಮಾರು 40 ವರ್ಷಗಳ ಇತಿಹಾಸವಿರುವ ತಾಲೂಕಿನ ನಾಡಾ³ಲು ಗ್ರಾಮದ ಮೇಗದ್ದೆ ಸ.ಕಿ.ಪ್ರಾ. ಶಾಲೆಯನ್ನು ಪುನಃ ತೆರೆಯಲು ಇಲಾಖೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
1978ರಲ್ಲಿ ಆರಂಭವಾದ ಶಾಲೆಯ ಉಳಿವಿಗೆ ಮೊದಲಿನಿಂದಲೂ ಹೋರಾ ಡುತ್ತಿದ್ದ ಗ್ರಾಮಸ್ಥರು ಈ ಭಾರಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ಪ್ರೇರೆಪಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ 11 ವಿದ್ಯಾರ್ಥಿಗಳು ಶಾಲೆಗೆ ಸೇರಲು ತಯಾರಿದ್ದು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಗಳಿಗೆ ಮನವಿ ಸಲ್ಲಿಸಿದ್ದರು. ಪತ್ರಿಕೆ ಈ ಬಗ್ಗೆ ಸಚಿತ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಅವರು ಸ್ಥಳಕ್ಕೆ ಭೇàಟಿ ನೀಡಿ ಪರಶೀಲಿಸಿದ್ದು 10 ವಿದ್ಯಾರ್ಥಿಗಳು ಶಾಲೆ ಸೇರಲು ಮುಂದೆ ಬಂದಲ್ಲಿ ಶಾಲೆಯನ್ನು ತೆರೆಯುವ ಭರವಸೆ ನೀಡಿದ್ದರು.
ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗದಲ್ಲಿ ಬರುವ ಶಾಲೆಯಲ್ಲಿ ಮೂಲಸೌಲಭ್ಯಗಳ ಕೊರತೆ ಸಹಿತ ಹತ್ತು ಹಲವು ಸಮಸ್ಯೆಗಳಿದ್ದವು. ಈ ಬಗ್ಗೆ ಗ್ರಾಮಸ್ಥರು ಶಾಲೆಗೆ ನಿರಂತರ ಸಹಕಾರ ನೀಡುತ್ತಿದ್ದು, ನೀರಿನ ಪೂರೈಕೆ ಮೊದಲಾದ ಸೌಕರ್ಯಗಳನ್ನು ಮಾಡಿದ್ದಾರೆ. ಶಿಕ್ಷಕರಿಗೂ ಗ್ರಾಮಸ್ಥರ ಮನೆಯÇÉೇವಸತಿ ವ್ಯವಸ್ಥೆಯನ್ನು 8 ವರ್ಷಗಳ ಕಾಲ ನೀಡಲಾಗಿತ್ತು.
ಆದರೂ ಶಾಲೆಯನ್ನು ಮುಚ್ಚಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶಗೊಂಡಿದ್ದರು.
ಶಾಲೆ ಮುಚ್ಚಲು ಇಲ್ಲಿ ಇದ್ದ ಶಿಕ್ಷಕಿಯೇ ಕಾರಣವೆಂಬ ಆರೋಪಗಳ ಬಗ್ಗೆ ತನಿಖೆ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ. ಮಕ್ಕಳ ಸಂಖ್ಯೆ 10ಕ್ಕಿಂತ ಕಡಿಮೆ ಯಾದಾಗ ಶಾಲೆ ಮುಂದುವರಿಸಲು ಕಷ್ಟ. ಈ ಕಾರಣದಿಂದಲೇ ಶಾಲೆ ಮುಚ್ಚಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.
ಶಾಲೆ ತೆರೆಯದಿದ್ದರೆ ಪ್ರತಿಭಟನೆ
ತೀರ ಗ್ರಾಮೀಣ ಪ್ರದೇಶವಾದ ಮೇಗದ್ದೆಗೆ ಸರಕಾರಿ ಶಾಲೆಯ ಅಗತ್ಯವಿದೆ. ಈ ಭಾಗದಲ್ಲಿ ರಸ್ತೆ ಹಾಗೂ ಬಸ್ಸಿನ ಸೌಕರ್ಯವಿಲ್ಲ. ಹೀಗಿರುವಾಗ ಶಾಲೆ ಮುಚ್ಚಿರುವುದು ಬಡವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಮನೆಮನೆಗೆ ತೆರಳಿ ಮನವಿ ಮಾಡಿದ ಪರಿಣಾಮ 11 ವಿದ್ಯಾರ್ಥಿಗಳು ಶಾಲೆಗೆ ಸೇರಲು ತಯಾರಿಗಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಶಾಲೆಯನ್ನು ತೆರೆಯಬೇಕು. ಇಲ್ಲದಿದ್ದಲ್ಲಿ ಗ್ರಾಮಸ್ಥರು ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.
-ರಮೇಶ್ ಮೇಗದ್ದೆ, ಸ್ಥಳೀಯರು
ಗ್ರಾಮಸ್ಥರು ಸಹಕರಿಸಿ
ಈಗಾಗಲೇ ಎರಡು ಬಾರಿ ಸ್ಥಳಕ್ಕೆ ಭೇàಟಿ ನೀಡಿದ್ದೇನೆ. ತೀರ ಗ್ರಾಮೀಣ ಹಾಗೂ ವಲಯ ವನ್ಯಜೀವಿ ವಿಭಾಗವಾದ್ದರಿಂದ ಇಲ್ಲಿ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುವುದು ಕಷ್ಟ. ಈ ಕಾರಣದಿಂದ ಇಲ್ಲಿ ಶಿಕ್ಷಕರ ನೇಮಕ್ಕಾಗಿ ಇಲಾಖೆ ವ್ಯವಸ್ಥೆ ಮಾಡುತ್ತಿದ್ದು 4ದಿನದ ಒಳಗೆ ಸಮಸ್ಯೆ ಇತ್ಯರ್ಥವಾಗಲಿದೆ. ಈಗಾಗಲೆ ಗ್ರಾಮಸ್ಥರು ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಲು ತಯಾರಿದ್ದಾರೆ. ಮುಚ್ಚಿದ ಶಾಲೆಯನ್ನು ಪುನಃ ತೆರೆಯಲು ಕೆಲವು ಪ್ರಕ್ರಿಯೆಗಳು ಇರುವ ಕಾರಣ ವಿಳಂಬವಾಗುತ್ತಿದ್ದು ಗ್ರಾಮಸ್ಥರು ಸಹಕರಿಸಬೇಕು.
-ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿ, ಕಾರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.