ಹಲಸು ಮೇಳಕ್ಕೆ ಭೇಟಿಯಿತ್ತ ಕಮಾಂಡೋ ಶ್ಯಾಮ್ ರಾಜ್
Team Udayavani, Jun 10, 2019, 6:10 AM IST
ಬದಿಯಡ್ಕ: ದೇಶಕ್ಕಾಗಿ ತನ್ನ ಬದುಕನ್ನು ಮೀಸಲಾಗಿರಿಸಿದ ಕಮಾಂಡೋ ಶ್ಯಾಮ್ ರಾಜ್ ಶನಿವಾರ ಬದಿಯಡ್ಕದಲ್ಲಿ ನಡೆದ ಹಲಸು ಮೇಳಕ್ಕೆ ಭೇಟಿಯಿತ್ತು ದೊಡ್ಡ ಗಾತ್ರದ ಹಲಸಿನ ಕಾಯಿಯನ್ನು ಎತ್ತಲು ಪ್ರಯತ್ನಿಸಿ ಸಂಘಟಕರಿಗೆ ಸ್ಫೂ³ರ್ತಿಯಾದರು. ಮೂಲತ: ಕಾಸರಗೋಡು ಜಿಲ್ಲೆಯ ಎಡನೀರು ನಿವಾಸಿಯಾದರೂ ಅವರು ಪ್ರಸ್ತುತ ಪುಣೆಯಲ್ಲಿ ವಾಸವಾಗಿದ್ದಾರೆ.ಎಲ್ಲವನ್ನೂ ವೀಕ್ಷಿಸಿ, ಆತ್ಮೀಯರ ಜೊತೆಗೆ ಒಂದಿಷ್ಟು ಫೋಟೋ ಕ್ಲಿಕ್ಕಿಸಿ, ಮೇಳದ ಸ್ಮರಣಾರ್ಥ ಹಲಸಿನ ಕಾಯಿಗಳನ್ನೂ ಕೊಂಡೊಯ್ದಾಗ ಸಂಘಟಕರಿಗೆ ಹೆಮ್ಮೆಯೆನಿಸಿತು.
ತುರ್ತು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಅನಿರೀಕ್ಷಿತವಾಗಿ ಊರಿಗೆ ಬಂದ ಶ್ಯಾಮ್‌ರಾಜ್‌ಗೆ ಇಲ್ಲಿ ನಡೆಯುವ ಹಲಸಿನ ಮೇಳದ ಬಗ್ಗೆ ತಿಳಿದಾಗ ಅದನ್ನು ನೋಡುವ ಆಸಕ್ತಿ ಉಂಟಾಯಿತು. ಶ್ರೀ ರಾಘವೇಶ್ವರ ಭಾರತೀ ಶ್ರೀಗಳ ಬಗ್ಗೆ ಗೌರವ ಹೊಂದಿರುವ ಅವರು ತನ್ನ ಮಹೋನ್ನತ ಕಲ್ಪನೆಯ ಸಾಕಾರ ರೂಪವಾದ ಗೋ ಸಂರಕ್ಷಣೆಯ ಬಗ್ಗೆ ಅತೀವ ಕಾಳಜಿ ಹೊಂದಿ, ಪ್ರಯಾಣವನ್ನು ಎರಡು ದಿನ ಮುಂದಕ್ಕೆ ಹಾಕಿ ಹಲಸಿನ ಮೇಳಕ್ಕೆ ಆಗಮಿಸಿದ್ದರು. ಇತ್ತೀಚೆಗೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಿವೃತ್ತ ಯೋಧರನ್ನು ಸಮ್ಮಾನಿಸಿ ಗೌರವಿಸುವ ಸಂದರ್ಭದಲ್ಲಿ ಶ್ಯಾಮ್‌ರಾಜ್ ಅವರನ್ನೂ ಸಮ್ಮಾನಿಸಲಾಗಿತ್ತು.
ಸಹಸ್ರಾರು ಸಂಖ್ಯೆ ಯಲ್ಲಿ ಜನರು ಪಾಲ್ಗೊಂಡು ಗ್ರಾಮೀಣ ಹಲಸಿನ ತಿಂಡಿ ತಿನಿಸುಗಳನ್ನು ಸೇವಿಸಿದ ಬಗ್ಗೆ ಶ್ಯಾಮ್‌ರಾಜ್ ಮೆಚ್ಚುಗೆವ್ಯಕ್ತ ಪಡಿಸಿದರು. ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಹಲಸು ಮೇಳ ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.