ಆರಂಭವಾಗಿಲ್ಲ ಶುದ್ಧ ನೀರಿನ ಘಟಕ
Team Udayavani, Jun 10, 2019, 6:10 AM IST
ಅಜ್ಜಾವರ: ತೀವ್ರ ಬರಗಾಲದಿಂದ ಜನರು ತತ್ತರಿಸುತ್ತಿರುವಾಗ, ಶುದ್ಧ ನೀರಿನ ಘಟಕದ ಕೊಳವೆ ಬಾವಿಯಲ್ಲಿ ನೀರಿದ್ದರೂ ಜನರಿಗೆ ಪೂರೈಕೆ ಆಗುತ್ತಿಲ್ಲ, ಮೇನಾಲದ ಶುದ್ಧ ನೀರಿನ ಘಟಕದ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಇನ್ನೂ ಪೂರ್ಣವಾಗಿಲ್ಲ.
ಅಜ್ಜಾವರ ಗ್ರಾಮದ ಮೇನಾಲ ಬಸ್ ನಿಲ್ದಾಣದ ಸಮೀಪ ಸುಳ್ಯ – ಮಂಡೆಕೋಲು ರಸ್ತೆ ಬದಿಯಲ್ಲಿ ಈ ಶುದ್ಧ ನೀರಿನ ಘಟಕ. ಶುದ್ಧ ನೀರಿನ ಘಟಕ ನಿರ್ಮಾಣವಾಗಿ ವರ್ಷಗಳೇ ಕಳೆದರೂ ಆರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರಿನ ಭಾಗ್ಯ ಇನ್ನೂ ಲಭಿಸಿಲ್ಲ.
ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಕಲ್ಪಿಸಲು ಜಿ.ಪಂ. ಯೋಜನೆ ಅಡಿಯಲ್ಲಿ ಕೈಗೊಂಡ ಘಟಕಕ್ಕೆ ಇಂದಿಗೂ ಯಂತ್ರೋಪಕರಣಗಳು, ಇತರೆ ಪರಿಕರಗಳನ್ನು ಅಳವಡಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇಲ್ಲಿನ ಘಟಕದಲ್ಲಿ ಅಳವಡಿಸಲಾಗಿರುವ ನಾಣ್ಯ ಹಾಕುವ ಪಕ್ಕದಲ್ಲಿರುವ ನೀರಿನ ಆಯ್ಕೆಗೆ ಇರುವ ಮೆಶೀನ್ ಕೆಟ್ಟು ಹೋದ ಸ್ಥಿತಿಯಲ್ಲಿದೆ.
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ವತಿಯಿಂದ ಗ್ರಾಮೀಣಾವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಿಂದ ಈ ಘಟಕ ಅನುಷ್ಠಾನಗೊಂಡಿದ್ದು, ಕೆಆರ್‌ಐಡಿಎಲ್ ಮಂಗಳೂರು ಇದರ ಮೂಲಕ ಘಟಕದ ಕೆಲಸಗಳು ನಡೆದಿದ್ದವು.
ಕಾರ್ಯಾರಂಭ ಹೇಗೆ?
ಘಟಕದ ಯಂತ್ರಕ್ಕೆ ಒಂದು ರೂ. ನಾಣ್ಯ ಹಾಕಿದರೆ ಶುದ್ಧೀಕೃತ ಆರೇಳು ಲೀ. ನೀರು ಸಿಗುತ್ತದೆ. ಪ್ರತಿ ಲೀಟರಿಗೆ 15 ಪೈಸೆ ಖರ್ಚು ಬೀಳುತ್ತದೆ. ಎರಡು ವರ್ಷದ ಅನಂತರ ದರ ಪರಿಷ್ಕರಣೆ ಆಗುತ್ತದೆ. ಘಟಕ ನಿರ್ಮಾಣಕ್ಕೆ ಮಾನದಂಡ ಏನೆಂದರೆ, ಗ್ರಾ.ಪಂ.ನಲ್ಲಿ ನೀರಿನ ಮೂಲ ಇರಬೇಕು ಮತ್ತು 30ಸ30 ಅಡಿ ಸ್ಥಳವನ್ನು 15 ವರ್ಷ ಖಾಸಗಿ ಕಂಪೆನಿಗೆ ಲೀಸ್ ನೀಡಬೇಕು ಎಂಬಿತ್ಯಾದಿ ಷರತ್ತು ವಿಧಿಸಲಾಗಿತ್ತು. ಬೇಸಗೆ ಕಾಲದಲ್ಲಿ ಇದು ಪ್ರಯೋಜನಕಾರಿಯೆಂದೂ ಭಾವಿಸಲಾಗಿತ್ತು.
2015-16ನೇ ಸಾಲಿನಲ್ಲಿ ಸರಕಾರ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೇಲುಸ್ತು ವಾರಿಯಲ್ಲಿ ಖಾಸಗಿ ಮತ್ತು ಸರಕಾರಿ ಸಹಭಾಗಿತ್ವದಲ್ಲಿ ಶುದ್ಧ ನೀರು ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. ಗ್ರಾ.ಪಂ. ವ್ಯಾಪ್ತಿಯ ಜನಸಂದಣಿ ಪ್ರದೇಶದಲ್ಲಿ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಯೋಜನೆ ಇದಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
MUST WATCH
ಹೊಸ ಸೇರ್ಪಡೆ
Maharashtra Results 2024: ಮಾಹಾಯುತಿಗೆ ಭರ್ಜರಿ ಜನಮನ್ನಣೆ, ಮಹಾವಿಕಾಸ್ ಅಘಾಡಿಗೆ ಮುಖಭಂಗ
Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್
Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫನ್‌ರೈಡ್
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.