ಅನಧಿಕೃತ ಪಡಿತರ ಚೀಟಿ ಮೇಲೆ ಹದ್ದಿನ ಕಣ್ಣು!

•ಅಕ್ರಮ ತಡೆಗೆ ಆಧಾರ ದೃಢೀಕರಣಕ್ಕೆ ನಿರ್ಧಾರ •60 ದಿನ ಕಾಲಾವಕಾಶ •ಹೆಸರು ದೃಢೀಕರಣ ಆಗದಿದ್ದಲ್ಲಿ ರೇಷನ್‌ ಕಟ್

Team Udayavani, Jun 10, 2019, 11:06 AM IST

10-Juen-10

ಶರತ್‌ ಭದ್ರಾವತಿ
ಶಿವಮೊಗ್ಗ:
ಪಡಿತರ ಚೀಟಿಗೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವ ಮೂಲಕ ಲಕ್ಷಾಂತರ ನಕಲಿ ಕಾರ್ಡ್‌ಗಳನ್ನು ಪತ್ತೆ ಹಚ್ಚಿದ ಸರಕಾರ ಈಗ ಇನ್ನು ಒಂದು ಹೆಜ್ಜೆ ಮುಂದೆ ಹೋಗಿದೆ. ಕುಟುಂಬದಲ್ಲಿ ಮೃತಪಟ್ಟವರು, ಕುಟುಂಬ ಬಿಟ್ಟು ವಾಸವಾಗಿರುವವರ ಹೆಸರಲ್ಲಿ ರೇಷನ್‌ ಪಡೆಯುವವರ ಮೇಲೆ ಸರಕಾರ ಹದ್ದಿನ ಕಣ್ಣಿಟ್ಟಿದ್ದು ಇನ್ನೆರಡು ತಿಂಗಳಲ್ಲಿ ಅನಧಿಕೃತ ಸದಸ್ಯರು ರೇಷನ್‌ ಕಾರ್ಡ್‌ನಿಂದ ಡಿಲೀಟ್ ಆಗಲಿದ್ದಾರೆ.

ಕಾರ್ಡ್‌ ಬೇರೆಯವರಿಗೆ ವರ್ಗಾಯಿಸಿರುವುದು, ಒಂದು ಕುಟುಂಬಸ್ಥರ ಹೆಸರಲ್ಲಿ ಬೇರೆಯವರು ರೇಷನ್‌ ಪಡೆಯುತ್ತಿರುವುದು ಕುಟುಂಬದೊಂದಿಗೆ ವಾಸವಿಲ್ಲದವರ ಹೆಸರು ಕಾರ್ಡಿನಲ್ಲಿ ಇರುವುದು ಹೀಗೆ ನಾನಾ ಕಾರಣಗಳಿಂದ ಪಡಿತರ ದುರುಪಯೋಗವಾಗುತ್ತಿತ್ತು. ಈ ರೀತಿಯ ಅನೇಕ ವಂಚನೆ ಪ್ರಕರಣಗಳಿಗೆ ಕಡಿವಾಣ ಹಾಕಲೆಂದೇ ಸರಕಾರ ಆಧಾರ್‌ ಕಾರ್ಡ್‌ ದೃಢೀಕರಣಕ್ಕೆ (ಇ-ಕೆವೈಸಿ) ಮುಂದಾಗಿದೆ.

ದೃಢೀಕರಣ ಹೇಗೆ?: ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲರೂ ತಮ್ಮ ಸ್ಥಳೀಯ ಪಡಿತರ ಅಂಗಡಿಯಲ್ಲಿ ಬೆರಳಚ್ಚು ನೀಡುವ ಮೂಲಕ ದೃಢೀಕರಣ ಖಾತ್ರಿಗೊಳಿಸಬೇಕು. ಬೇರೆ ಊರು, ಜಿಲ್ಲೆ, ರಾಜ್ಯದಲ್ಲಿ ವಾಸವಾಗಿರುವವರ ಅನುಕೂಲಕ್ಕಾಗಿ 60 ದಿನಗಳ ಕಾಲವಕಾಶ ನೀಡಿದೆ. ಯಾವುದೇ ದಿನ ಬಂದು ದೃಢೀಕರಣ ಖಾತ್ರಿಗೊಳಿಸಬಹುದಾಗಿದೆ. ಕುಟುಂಬ ಸದಸ್ಯರೆಲ್ಲ ಒಂದೇ ದಿನ ಬರಬೇಕೆಂಬ ನಿಯಮವಿಲ್ಲವಾದ್ದರಿಂದ ತಮಗೆ ಅನುಕೂಲವಾದ ದಿನ ಅವರು ಬರಬಹುದು.

ರೇಷನ್‌ ಕಟ್: ರೇಷನ್‌ ಕಾರ್ಡ್‌ನಲ್ಲಿರುವ ವ್ಯಕ್ತಿ 60 ದಿನದೊಳಗೆ ದೃಢೀಕರಣಗೊಳಿಸದಿದ್ದರೆ ಆ ವ್ಯಕ್ತಿಯ ರೇಷನ್‌ ಕಟ್ ಮಾಡಲು ಸರಕಾರ ಸೂಚಿಸಿದೆ. 60 ದಿನದ ನಂತರವೂ ಯಾವುದಾದರೂ ದಿನ ಬಂದು ದೃಢೀಕರಣ ಕೊಡಬಹುದು. 60 ದಿನದ ನಂತರ ಎಷ್ಟು ದಿನದ ವರೆಗೆ ಈ ವಿನಾಯಿತಿ ನೀಡಲಾಗಿದೆ ಎಂಬುದನ್ನು ಸರಕಾರ ಸ್ಪಷ್ಟಪಡಿಸಿಲ್ಲ.

ಯಾರ್ಯಾರಿಗೆ ವಿನಾಯಿತಿ: ವಯೋವೃದ್ಧರು, ಕುಷ್ಟರೋಗಿಗಳು, ಬೆರಳುಗಳಿಲ್ಲದ ಅಂಗವಿಕಲರು ಹಾಗೂ ಎಂಡೋಸಲ್ಫಾನ್‌ ಪೀಡಿತರನ್ನು ದೃಢೀಕರಣಗೊಳಿಸುವುದು ಸಾಧ್ಯವಾಗದಿರುವ ಕಾರಣ ಅವರಿಗೆ ವಿನಾಯ್ತಿ ನೀಡಲಾಗಿದೆ.

ಉಚಿತ ದೃಢೀಕರಣ: ದೃಢೀಕರಣಗೊಳಿಸುವವರಿಗೆ ಯಾವುದೇ ಶುಲ್ಕ ಇರುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸ್ಪಷ್ಟಪಡಿಸಿದೆ. ಪ್ರತಿ ತಿಂಗಳ ಪಡಿತರ ಪಡೆಯುವ ವೇಳೆ ಈಗಾಗಲೇ ಹಲವು ಕಡೆ ಬಯೋಮೆಟ್ರಿಕ್‌ ಪಡೆಯಲು 10, 20ರೂ. ವಸೂಲಿ ಮಾಡುತ್ತಿರುವ ಆರೋಪಗಳಿವೆ. ಆರೋಪಗಳ ನಡುವೆಯೂ ಸರಕಾರ ದೊಡ್ಡ ಮಟ್ಟದ ಕಾರ್ಯಕ್ಕೆ ಕೈ ಹಾಕಿದ್ದು ಯಾವ ರೀತಿಯ ಯಶಸ್ಸು ಸಿಗಲಿದೆ ಕಾದು ನೋಡಬೇಕಿದೆ.

ಪಡಿತರದಾರರಿಂದ ಯಾವುದೇ ಹಣ ಪಡೆಯಬಾರದೆಂದು ಹೇಳಿರುವ ಸರಕಾರ ಪ್ರತಿ ದೃಢೀಕರಣಕ್ಕೆ ಪಡಿತರ ಅಂಗಡಿ ಮಾಲೀಕರಿಗೆ ಶುಲ್ಕ ನಿಗದಿ ಮಾಡಿದೆ. ಪ್ರತಿ ಫಲಾನುಭವಿಯ ದೃಢೀಕರಣಕ್ಕೆ 5 ರೂ.ನಂತೆ ಒಂದು ಕುಟುಂಬಕ್ಕೆ ಗರಿಷ್ಠ 20 ರೂ./ ನೀಡಲು ಸರಕಾರ ಸೂಚಿಸಿದೆ.

60 ದಿನ ತೆಗೆದಿರಬೇಕು: ಪಡಿತರ ಅಂಗಡಿ ಮಾಲೀಕರು ಆಧಾರ್‌ ಕಾರ್ಡ್‌ ದೃಢೀಕರಣಕ್ಕಾಗಿ 60 ದಿನವೂ ಲಭ್ಯವಿರುವಂತೆ ಇಲಾಖೆ ಖಡಕ್‌ ಸೂಚನೆ ನೀಡಿದೆ. ಸರಕಾರಿ ರಜೆ ಹಾಗೂ ಮಂಗಳವಾರದಂದು ಮಾತ್ರ ವಿನಾಯಿತಿ ನೀಡಿದ್ದು, ಉಳಿದಂತೆ ಎಲ್ಲ ದಿನವೂ ಲಭ್ಯವಿರಬೇಕು. ಪ್ರತಿ ದಿನ ಪ್ರಗತಿ ಪರಿಶೀಲನೆಗೆ ಸಿಬ್ಬಂದಿ ನೇಮಿಸಲಾಗಿದ್ದು ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.

4 ಕೋಟಿ ಪಡಿತದಾರರು: ರಾಜ್ಯದಲ್ಲಿ 12462801 ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳಿದ್ದು, 41700813 ಮಂದಿ ಫಲಾನುಭವಿಗಳಿದ್ದಾರೆ. ಇದರಲ್ಲಿ ಶೇ.99ರಷ್ಟು ಮಂದಿಯ ಆಧಾರ್‌ ದಾಖಲೆಗಳು ಇಲಾಖೆ ಬಳಿ ಇವೆ. ಶೇ.17.07 ಮಂದಿಯ ಆಧಾರ್‌ ದೃಢೀಕರಣ ಆಗಿದ್ದು, ಉಳಿದ ಫಲಾನುಭವಿಗಳ ದೃಢೀಕರಣಕ್ಕೆ (ಇಕೆವೈಸಿ) ಸರಕಾರ ಸೂಚಿಸಿದೆ.

ಮರಣ, ಕುಟುಂಬದೊಂದಿಗೆ ವಾಸವಿಲ್ಲದ ಎಷ್ಟೋ ಮಂದಿ ಇದ್ದು, ಅವರು ಈಗಲೂ ಪಡಿತರ ಪಡೆಯುತ್ತಿದ್ದಾರೆ. ಜೂನ್‌ 1ರಿಂದಲೇ ದೃಢೀಕರಣಕ್ಕೆ ಚಾಲನೆ ನೀಡಲಾಗಿದ್ದು, ಜು. 31ರವರೆಗೆ ಈ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ. ಈ ಎರಡೂ ತಿಂಗಳು ಪಡಿತರ ಪಡೆಯವುದಕ್ಕೆ ತೊಂದರೆ ಇಲ್ಲ. 60 ದಿನಗಳ ಅವಧಿಯಲ್ಲಿ ಆಧಾರ್‌ ದೃಢೀಕರಣಗೊಳ್ಳದ ಫಲಾನುಭವಿಯ ರೇಷನ್‌ ತಡೆಹಿಡಿಯಲಾಗುವುದು. ಅವರು ದೃಢೀಕರಣ ಕೊಡುವವರೆಗೂ ರೇಷನ್‌ ಬರುವುದಿಲ್ಲ. ರೇಷನ್‌ ಅಂಗಡಿಯವರಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಯಾವುದೇ ಲೋಪವಾಗದಂತೆ ಕ್ರಮ ವಹಿಸಲಾಗಿದೆ. ಫಲಾನುಭವಿಗಳು ಯಾವುದೇ ಹಣ ನೀಡುವಂತಿಲ್ಲ. ಹಣ ವಸೂಲಿ ಮಾಡುವುದು ಕಂಡು ಬಂದರೆ ಅಂತವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಎ.ಟಿ. ಜಯಪ್ಪ,
ಜಂಟಿ ನಿರ್ದೇಶಕ.

ಟಾಪ್ ನ್ಯೂಸ್

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

1-KDP

Dakshina Kannada; ಜಿಲ್ಲಾ ಕೆಡಿಪಿ ಸಭೆ: ಕರಾವಳಿ ನಿರ್ಲಕ್ಷ್ಯ ಆರೋಪಿಸಿ ಬಿಜೆಪಿ ಸಭಾತ್ಯಾಗ

police

Udupi: ಕೋಳಿ ಅಂಕಕ್ಕೆ ದಾಳಿ; 9 ಕೋಳಿ ಸಹಿತ ನಾಲ್ವರ ವಶ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿVijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.