ಜೀವನದಲ್ಲಿ ಯಶಸ್ಸಿಗೆ ಕಠಿನ ಶ್ರಮ ಮಾತ್ರ ದಾರಿ: ಬಿಷಪ್
Team Udayavani, Jun 11, 2019, 6:00 AM IST
ಕುಂದಾಪುರ: ವಿದ್ಯಾರ್ಥಿಗಳು ತಾವು ಏನಾಗಬೇಕೆಂಬ ಸ್ಪಷ್ಟ ಗುರಿ ಹೊಂದಿರಬೇಕು. ಜೀವನದಲ್ಲಿ ಯಶಸ್ಸು ಗಳಿಸಲು ಕಠಿನ ಶ್ರಮ ಬಿಟ್ಟರೆ ಬೇರೆ ದಾರಿಯಿಲ್ಲ. ಅಸಾಧ್ಯ ಮತ್ತು ಅನುತ್ತೀರ್ಣ ಎಂಬ ಪದಗಳು ನಿಮ್ಮ ಶಬ್ದ ಕೋಶದಲ್ಲಿ ಇರಬಾರದು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಐಸಾಕ್ ಲೋಬೊ ಅವರು ಹೇಳಿದರು.
ಇಲ್ಲಿನ ಸಂತ ಮೇರಿಸ್ ಪಿ.ಯು. ಕಾಲೇಜಿನ ಪ್ರಾರಂಭೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೀವನದಲ್ಲಿ ಪ್ರಯತ್ನ ಪಡುತ್ತಲೇ ಇರಬೇಕು. ಥಾಮಸ್ ಆಲ್ವಾ ಎಡಿಸನ್ ಹಲವಾರು ಬಾರಿ ಪ್ರಯೋಗಗಳಲ್ಲಿ ಸಫಲನಾಗದಿದ್ದರೂ, ಛಲದಿಂದ ಪ್ರಯತ್ನ ಪಡುತ್ತಾ ಕೊನೆಗೆ ಯಶಸ್ಸನ್ನು ಪಡೆದು ಜಗತ್ತಿಗೆ ಬೆಳಕು ನೀಡಿದ. ಅವರಂತೆ ನಿಮ್ಮ ಪ್ರಯತ್ನ ಸಾಗಲಿ ಎಂದರು.
ವೈದ್ಯೆ ಡಾ| ರೆನ್ನಿ ವಿಲ್ಸನ್, ಪ್ರಪಂಚದಲ್ಲಿ ಯಶಸ್ಸು ಪಡೆದವರ ಬಗ್ಗೆ ತಿಳಿದುಕೊಂಡರೆ, ಅವರುಗಳು ಕಷ್ಟ ಪಟ್ಟು ಪರಿಶ್ರಮ ಪಟ್ಟು ಯಶಸ್ಸು ಗಳಿಸಿದ್ದಾರೆ. ನೀವು ಏನಾಗಬೇಕೆಂದು ಮೊದಲು ಕನಸು ಕಾಣಬೇಕು. ಅದನ್ನು ಸಾಕಾರಗೊಳಿಸಲು ಕಠಿನ ಪರಿಶ್ರಮ ಪಡಿ. ಆಗ ನಿಮಗೆ ಯಶಸ್ಸು ದೊರಕುತ್ತದೆ ಎಂದರು.
ಕಾಲೇಜಿನ ಜಂಟಿ ಕಾರ್ಯದರ್ಶಿ ಫಾ| ಸ್ಟ್ಯಾನಿ ತಾವ್ರೊ, ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳು, ಕಾಲೇಜಿನ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದರು.
ಧರ್ಮಾಧ್ಯಕ್ಷರು ಕಾಲೇಜಿನ ಮ್ಯಾಗಜಿನ್ ಬ್ಲೊಸಮ್‌ನ್ನು ಉದ್ಘಾಟನೆ ಮಾಡಿದರು.
ದ್ವಿತಿಯ ಪಿ.ಯು.ಸಿ. ಪ್ರಥಮ ಪಿ.ಯು.ಸಿ. ಮತ್ತು ಎಸೆಸೆಲ್ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದವರನ್ನು ಗೌರವಿಸಲಾಯಿತು. ವರ್ಗಾವಣೆಗೊಂಡ ರೋಜರಿ ಚರ್ಚ್‌ನ ಧರ್ಮಗುರು ಫಾ| ರೋಯ್ ಲೋಬೊ ಅವರಿಗೆ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಪ್ರಾಂಶುಪಾಲ ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ಕಾಲೇಜಿನ ಬಗ್ಗೆ, ಕಾಲೇಜಿನ ನೀತಿ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಿದರು.
ಸಹಾಯಕ ಧರ್ಮಗುರು ಫಾ| ವಿಜಯ್ ಡಿ’ಸೋಜಾ, ವಿದ್ಯಾರ್ಥಿಗಳ ಪೋಷಕರ ಪ್ರತಿನಿಧಿಯಾಗಿ ವೇಲಾ ಬ್ರಗಾಂಜಾ, ದೇವದಾಸ್ ವಿ.ಜೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಉಪ ಪ್ರಾಂಶುಪಾಲೆ ಮಂಜುಳಾ ನಾಯರ್ ಸ್ವಾಗತಿಸಿದರು. ಪ್ರಾಧ್ಯಾಪಕಿಯರಾದ ಅಸ್ಮಿತಾ ಕೊರೆಯಾ, ಸ್ವಾತಿ, ನಿಶಾ ಸುವಾರಿಸ್ ಮತ್ತು ವಿದ್ಯಾರ್ಥಿನಿ ಮೇಲಿಟಾ ಡಿಸೋಜಾ ನಿರ್ವಹಿಸಿದರು. ಮೇಲಿÅಯಾ ಕ್ರಾಸ್ತಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Hindutva; ಧರ್ಮದ ವಿರುದ್ಧ ಬಂದರೆ ಸುಮ್ಮನಿರೆವು: ಯದುವೀರ ಕೃಷ್ಣದತ್ತ ಒಡೆಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.