ರಸ್ತೆ ಬದಿ ಅಗೆದು ದೂರವಾಣಿ ಸಂಪರ್ಕ ಕಾಮಗಾರಿ: ಗ್ರಾಮಸ್ಥರ ಆಕ್ರೋಶ
Team Udayavani, Jun 11, 2019, 6:00 AM IST
ಹೆಬ್ರಿ: ಇಲ್ಲಿನ ಬಚ್ಚಪ್ಪು ಮಾರ್ಗವಾಗ ಕಬ್ಬಿನಾಲೆ ಸಂಪರ್ಕಿಸುವ ರಸ್ತೆಯಲ್ಲಿ ಖಾಸಗಿ ದೂರವಾಣಿ ಸಂಸ್ಥೆಯೊಂದು ಕೇಬಲ್ ಅಳವಡಿಸುವ ಕಾಮಗಾರಿ ನಡೆಸುತ್ತಿರುವ ಕಾರಣ ರಸ್ತೆ ಮಗ್ಗಲುಗಳಲ್ಲಿ ಬೃಹತ್ ಹೊಂಡಗಳು ಉಂಟಾಗಿದ್ದು, ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪೂರ್ಣ ಹದಗೆಟ್ಟಿದ್ದ ಈ ರಸ್ತೆ ಗ್ರಾಮಸ್ಥರ ಸತತ ಪ್ರಯತ್ನದ ಫಲವಾಗಿ ಕಳೆದ ಸಾಲಿನಲ್ಲಿ ಅಭಿವೃದ್ಧಿಗೊಂಡಿತ್ತು. ಆದರೆ ಈಗ ರಸ್ತೆ ಅಗೆಯುತ್ತಿರುವ ಪರಿಣಾಮ ಡಾಮರು ಕಿತ್ತಿಹೋಗುತ್ತಿದೆ. ಅಲ್ಲದೆ ಮಳೆಗಾಲವಾದ್ದರಿಂದ ಕೆಸರು ನೀರು ರಸ್ತೆಗೆ ಹರಿದು ವಾಹನ ಸಂಚಾರ ಕಷ್ಟಕರವಾಗಿದೆ. ಜೆಸಿಬಿ ಬಳಸಿ ಕಾಮಗಾರಿ ನಡೆಸುತ್ತಿದ್ದು, ಅದರ ಲೆಗ್ ರಸ್ತೆಗಳಿಗೆ ತಾಗಿ ಅಲ್ಲಲ್ಲಿ ಹೊಂಡಗಳಾಗಿವೆ. ಈ ಹೊಂಡಗಳು ಮಳೆಗಾಲದಲ್ಲಿ ಮತ್ತಷ್ಟು ದೊಡ್ಡದಾಗಿ ರಸ್ತೆಗೆ ಹಾನಿ ಯಾಗುತ್ತದೆ ಎಂಬುದು ಸ್ಥಳೀಯರ ದೂರು.
ಸಮಸ್ಯೆ ಇಲ್ಲ
ಕಾಮಗಾರಿ ಅನುಮತಿ ಪಡೆದೆ ಮಾಡುತ್ತಿದ್ದಾರೆ. ರಸ್ತೆಯ ಬದಿಯಿಂದ ಕೇಬಲ್ ಲೈನ್ಗಳು ಹೋಗುತ್ತಿದ್ದು ಕೆಲವೊಂದು ಕಡೆ ಮಾತ್ರ ರಸ್ತೆಗೆ ಹಾನಿ ಯಾಗಿದ್ದು ಅದನ್ನು ಅವರೇ ಸರಿ ಪಡಿಸುತ್ತಾರೆ. ಉಳಿದಂತೆ ರಸ್ತೆಗೆ ಯಾವುದೇ ಸಮಸ್ಯೆ ಇಲ್ಲ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Hubli: ಅಡವಿಸಿದ್ದೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.