ಬಾಲಸಭಾ ಮಕ್ಕಳ ಎರಡು ದಿನದ ಪೆನ್ಸಿಲ್ ಶಿಬಿರ
ವಿನೂತನ ಪರಿಸರ ಸ್ನೇಹಿ ಯೋಜನೆ
Team Udayavani, Jun 11, 2019, 5:30 AM IST
ಪೆರ್ಲ:ಪರಿಸರ ಸ್ನೇಹಿ ವಸ್ತುಗಳ ಬಳಕೆ,ಪ್ರೇರಣೆ ಮೊದಲಾದ ಉದ್ದೇಶವಿರಿಸಿ ಹರಿತ ಕೇರಳ ಮಿಶನ್,ಕುಟುಂಬಶ್ರೀ ಮಿಶನ್,ಆರೋಗ್ಯ ಇಲಾಖೆ,ಗ್ರಾಮ ಪಂಚಾಯತು ಸಹಕಾರದೊಂದಿಗೆ ಕುಟುಂಬಶ್ರೀಬಾಲಸಭಾ ಮಕ್ಕಳಿಗೆ ಸ್ವರ್ಗ ಎಸ್‌ವಿಎಯುಪಿ ಶಾಲೆಯಲ್ಲಿ ಎರಡು ದಿನಗಳ ವಿನೂತನ ಕಾರ್ಯಕ್ರಮ ಪೆನ್ಸಿಲ್ ಶಿಬಿರ ನಡೆಯಿತು.
ಪರಿಸರ ಮಾಲಿನ್ಯ ಉಂಟುಮಾಡುವ ವಸ್ತುಗಳು,ಅದರ ಮರುಬಳಕೆ ಮುಂತಾ ದವುಗಳ ಬಗ್ಗೆ ಆಟದೊಂದಿಗೆ ಪಾಠ ಶೈಲಿಯಲ್ಲಿ ಮಾಹಿತಿ ನೀಡಲಾಯಿತು.ಶಿಬಿರವನ್ನು ಎಣ್ಮಕಜೆ ಗ್ರಾ.ಪಂ.ಕ್ಷೇ.ಕಾ.ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ.ಅವರು ಉದ್ಘಾಟಿಸಿದರು. ಶಾಲೆಯು ಮಕ್ಕಳಿಗೆ ಆಪ್ಯಾಯ ಮಾನವಾಗಿರಬೇಕು.ಶಿಸೌಹಾರ್ದ ಪರಿಸರವು ಮಕ್ಕಳಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದರು. ವಾರ್ಡ್ ಕುಟುಂಬಶ್ರೀ ಎಡಿಎಸ್ ಅಧ್ಯಕ್ಷೆ ವಲ್ಸಮ್ಮ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಶಿಕ್ಷಕಿ ಗೀತಾ ಕುಮಾರಿ,ಸಿಡಿಎಸ್ ಅಧ್ಯಕ್ಷೆ ಶಾರದಾ,ಉಪಾಧ್ಯಕ್ಷೆ ಶಶಿಕಲಾ ಕೆ.ಶುಭ ಹಾರೈಸಿದರು. ಸ್ವರ್ಗ ಶಾಲಾ ಶಿಕ್ಷಕರಾದ ವೆಂಕಟ ವಿದ್ಯಾಸಾಗರ್,ಸಚ್ಚಿದಾ ನಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರಮಿ ಎಂ.ಸ್ವಾಗತಿಸಿ,ಜಯಂತಿ ವಂದಿಸಿದರು.ಶಶಿಕಲಾ ಕಾರ್ಯಕ್ರಮನಿರೂಪಿಸಿದರು
ಪರಿಸರ ಜಾಗೃತಿ ಉದ್ದೇಶ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ.ಮಕ್ಕಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಶಿಕ್ಷಕರ ಶ್ರಮದೊಂದಿಗೆ ಹೆತ್ತವರ ಪ್ರೋತ್ಸಾಹವು ಮುಖ್ಯ ಎಂದರು.ಪರಿಸರ ಮಾಲಿನ್ಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ಅವರ ಮೂಲಕ ರಕ್ಷಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಟಿಟಿ ರೋಡ್‌ನಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!
Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್ ಸಿಟಿʼ
Vijay Hazare Trophy; ಅಭಿನವ್ ಮನೋಹರ್ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ
Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.