ಕಜಂಪಾಡಿ ಎಸ್‌.ಸಿ. ಕಾಲನಿ ವಿವಿಧ ಸಮಸ್ಯೆಗಳ ಆಗರ

ಅನುದಾನವಿದ್ದರೂ ಕಾಮಗಾರಿ ಅಪೂರ್ಣ

Team Udayavani, Jun 11, 2019, 6:00 AM IST

09KSDE14

ಕಾಸರಗೋಡು: ಎಣ್ಮಕಜೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ 8ನೇ ವಾರ್ಡ್‌ ಕಜಂಪಾಡಿಯಲ್ಲಿ ಸುಮಾರು 52 ಮನೆಗಳುಳ್ಳ ಎಸ್‌.ಸಿ. ಕಾಲನಿ ವಿವಿಧ ಸಮಸ್ಯೆಗಳ ಆಗರವಾಗಿದೆ.

ಕಾಲನಿ ಮೂಲ ಸೌಕರ್ಯದಿಂದ ವಂಚಿತ ಗೊಂಡಿದ್ದು, ಶಾಸಕರ ನಿಧಿಯಿಂದ ಕಾಲನಿಯ ವಸತಿ ದುರಸ್ತಿ ಮತ್ತು ಪುನರ್‌ ನಿರ್ಮಾಣಕ್ಕಾಗಿ 1 ಕೋಟಿ ರೂ. ಅನುದಾನ ಲಭಿಸಿ ವರ್ಷ ಸಂದರೂ ಕಾಮಗಾರಿ ಪರಿಪೂರ್ಣಗೊಂಡಿಲ್ಲ. ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮನೆ ನಿರ್ಮಾಣ ವಿಳಂಬವಾಗುತ್ತಿರುವುದು ಕಾಲನಿ ನಿವಾಸಿಗಳನ್ನು ಆತಂಕಕ್ಕೀಡು ಮಾಡುತ್ತಿದೆ.

ಬಾವಿಯಿದ್ದರೂ ಬಳಕೆಯಿಲ್ಲ
ವಸತಿ ಸೌಲಭ್ಯಗಳ ಕೊರತೆ ಅಷ್ಟಾದರೆ ಇದೀಗ ಬರಗಾಲ. ನೀರಿನ ಸಮಸ್ಯೆ ಎಲ್ಲೆಮೀರಿದ್ದು ಎರಡು ದಿನಗಳಿಗೊಮ್ಮೆ ನೀರು ಪೂರೈಕೆ ನಡೆಯುತ್ತಿದ್ದರೂ ಎಲ್ಲ ಮನೆ ಬಾಗಿಲನ್ನು ಮುಟ್ಟುವಲ್ಲಿ ವಿಫಲ ಗೊಂಡಿದೆ. ಪ್ರತಿ ವರ್ಷ ಪಂಚಾಯತ್‌ನಿಂದ ಕಾಲನಿಗೆ ಬರುವ ನೀರು ಪೂರೈಕೆ ಕೂಡ ಈ ಬಾರಿ ಸ್ಥಗಿತಗೊಂಡಿದ್ದು ಕೆಲವು ದಿನಗಳ ಹಿಂದೆ ಮೋದಿ ಪ್ರಧಾನಿ ಪ್ರಮಾಣ ವಚನ ದಿನ ಮಾತ್ರ ಮೋದಿ ಬ್ಯಾನರ್‌ ಮೂಲಕ ಒಂದು ದಿನ ಮಾತ್ರ ಸೀಮಿತವಾಗಿ ನೀರು ಪೂರೈಸಲಾಗಿತ್ತು. ಮುಂದು ವರಿದ ಈ ಕಾಲದಲ್ಲೂ ಪ್ಲಾಸ್ಟಿಕ್‌ ಟಾರ್ಪಲ್‌ ಹಾಸಿದ ಸಾರಣೆ ಮಾಡದ ಮಣ್ಣಿನಿಂದ ಕಲ್ಲುಕಟ್ಟಿದ ಮನೆಗಳನ್ನು ಕಾಣಬಹುದಾಗಿದೆ. ಸರಕಾರಿ ಬಾವಿ ಇದ್ದರೂ ಸಮರ್ಪಕವಾದ ನೀರಿನ ಬಳಕೆ ಮಾಡಲಾಗುತ್ತಿಲ್ಲ. 52 ಮನೆಗಳಿಗೆ ನೀರಿನ ಪೂರೈಕೆಗೆ ಆ ಬಾವಿ ನೀರು ಸಾಕಾಗುತ್ತಿಲ್ಲ. ಅಲ್ಲದೆ ಬಾವಿ ಉಪಯೋಗ ಶೂನ್ಯವಾಗಿದ್ದು ಇಂಗು ರಿಂಗುಗಳು ಶಿಥಿಲಗೊಂಡು ಬಿದ್ದಿವೆ.
ಅಭಿವೃದ್ಧಿ ನಿಧಿಯಿಂದ ನಿರ್ಮಿಸಿದ ಮಿನಿ ಮಾಸ್ಟ್‌ ಲೈಟ್‌ ಉರಿಯದೇ 2 ವರ್ಷಗಳಾದವು. ಎಂಡೋಸಲ್ಫಾ ನ್‌ ಪ್ಯಾಕೇಜ್‌ನಲ್ಲಿ ಕುಟುಂಬ ಕಲ್ಯಾಣ ಕೇಂದ್ರ ನಿರ್ಮಾಣಕ್ಕೆ ಕಟ್ಟಡ ನಿರ್ಮಿಸ ಲಾಗಿದ್ದು 6 ವರ್ಷಗಳಾದರೂ ಲೋಕಾ ರ್ಪಣೆಗೊಳ್ಳದೆ ಕಾಡು, ಪೊದೆಗಳು ಬೆಳೆದಿವೆ.

ಸಾರಿಗೆ ಸೌಕರ್ಯವೂ ಇಲ್ಲ
ಈ ಊರಿಗೆ ಸರಿಯಾದ ಸಾರಿಗೆ ಸೌಲಭ್ಯ ಕೂಡ ಇಲ್ಲ. ಪೆರ್ಲದಿಂದ ಸುಮಾರು 3 ವರ್ಷಗಳ ಹಿಂದೆ ಕಜಂಪಾಡಿ ಸ್ಟೇಟ್‌ ಅಂತಲೇ ಹೆಸರಲ್ಲಿ ಕೇರಳ ಸರಕಾರ ಮಿನಿ ಸಾರಿಗೆ ಬಸ್‌ನ್ನು ವ್ಯವಸ್ಥೆ ಪಡಿಸಿದ್ದರೂ ಈಗ ಆ ಬಸ್‌ ಸೇವೆಯಿಂದ ನಿವೃತ್ತಿ ಹೊಂದಿದೆ. ಖಾಸಗಿ ಬಸ್ಸೊಂದು ಸೇವಾನಿರತವಾಗಿದ್ದು ಸಮರ್ಪಕವಾಗಿ ದಿನಾ ತಲುಪುವಲ್ಲಿ ಅದೂ ಕೂಡ ಕೈಕೊಡುತ್ತಿ ರುವುದಾಗಿ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ರೀತಿಯ ಗ್ರಾಮೀಣ ಪ್ರದೇಶಗಳಿರುವಾಗ ದೇಶ ಹೇಗೆ ಅಭಿವೃದ್ಧಿ ಪಥದಲ್ಲಿ ಮುನ್ನಡೆಯಲು ಸಾಧ್ಯ. ಕಾಲನಿಗಳಲ್ಲಿ ಹೆಚ್ಚಾಗಿ ವಾಸಿಸುವ ಇಂತಹ ಊರಿನ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತುತ ವಾರ್ಡ್‌ ಪ್ರತಿನಿಧಿಗಳು, ಪಂಚಾಯತ್‌ ಆಡಳಿತ ಸಮಿತಿ ಗಳು ಜವಾಬ್ದಾರಿಯುತವಾಗಿ ಗಮನಹರಿಸದೇ ಹೋದಲ್ಲಿ ಕಜಂಪಾಡಿ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ರೂಪಿಸಿ ಹೋರಾಟ ಕ್ಕಿಳಿಯುವುದಾಗಿ ಕಾಲನಿ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.

ಹಾಳಾಗುತ್ತಿರುವ ನಿರ್ಮಾಣ ಸಾಮಗ್ರಿಗಳು
ಮನೆ ನಿರ್ಮಾಣ ಕಾರ್ಯಗಳಿಗಾಗಿ ತಂದ ಸಿಮೆಂಟ್‌ ಗಟ್ಟಿಯಾಗಿದ್ದು, ಸಿಮೆಂಟ್‌ ದಾರಂದ, ಕಿಟಿಕಿ, ಕಬ್ಬಿಣ ಪರಿಕರಗಳು ಗುಡ್ಡೆಯಲ್ಲಿಯೇ ರಾಶಿ ಬಿದ್ದಿವೆ. ಕೆಲವೊಂದು ಮನೆಗಳ ಕೆಲಸ ಕಾರ್ಯಗಳು ಅರ್ಧಕ್ಕೆ ನಿಂತಿದ್ದು ಕಾರ್ಮಿಕರಿಗೆ ಸಮರ್ಪಕವಾದ ವೇತನ ದೊರೆಯುತ್ತಿಲ್ಲವೆನ್ನುವ ಆರೋಪಗಳು ಕೇಳಿ ಬರುತ್ತಿವೆ.

ಟಾಪ್ ನ್ಯೂಸ್

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

Na-Desoza

Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ

8

ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ

11

PAK- SA: 421 ರನ್ನುಗಳ ಭಾರೀ ಹಿನ್ನಡೆ; ಪಾಕಿಸ್ಥಾನಕ್ಕೆ ಫಾಲೋಆನ್‌

10

ODI: ಶ್ರೀಲಂಕಾ ಬ್ಯಾಟಿಂಗ್‌ ಕುಸಿತ; ನ್ಯೂಜಿಲ್ಯಾಂಡ್‌ಗೆ ಸುಲಭ ಜಯ

Yathanaa

BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

Brisbane ಇಂಟರ್‌ನ್ಯಾಶನಲ್‌ ಟೆನಿಸ್‌: ಅರಿನಾ ಸಬಲೆಂಕಾ ಚಾಂಪಿಯನ್‌

arrested

Mangaluru; ನಕಲಿ ಆಧಾರ್, ದಾಖಲೆ ಸೃಷ್ಟಿಸಿಕೊಡುತ್ತಿದ್ದ ಆರೋಪಿ ಬಂಧನ

BSY1

ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್‌ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್‌.ಯಡಿಯೂರಪ್ಪ

1-idpp

Actor; ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಟಿ ಡಿಂಪಲ್‌ ಕಪಾಡಿಯಾ

1-kukke

Kukke Subrahmanya: ಕಿರುಷಷ್ಠಿ ರಥೋತ್ಸವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.