ಹುಟ್ಟುಹಬ್ಬದಂದು ಗಿಡ ನೆಟ್ಟು ಬೆಳೆಸಿ: ಕೃಷ್ಣಪ್ಪ
Team Udayavani, Jun 11, 2019, 5:00 AM IST
ಮಹಾನಗರ: ಸುಭದ್ರ ಭವಿಷ್ಯಕ್ಕಾಗಿ ಪರಿಸರ ಉಳಿಸಬೇಕು. ಪ್ರತಿಯೊಬ್ಬರೂ ಹುಟ್ಟುಹಬ್ಬಕ್ಕೆ ಗಿಡವನ್ನು ನೆಟ್ಟು ಬೆಳೆಸುವುದಕ್ಕೆ ಬದ್ಧರಾಗಬೇಕು ಎಂದು ನ್ಯಾಶನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ನಿವೃತ್ತ ಉದ್ಯೋಗಿ, ವೃಕ್ಷಪ್ರೇಮಿ ಹಸಿರು ಕೃಷ್ಣಪ್ಪ ಹೇಳಿದರು.
ಶನಿವಾರ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆಡಳಿತದಲ್ಲಿರುವ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಶ್ರೀ ಭಾರತೀ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಗಿಡವನ್ನು ನೆಟ್ಟು ಅವರು ಮಾತನಾಡಿದರು. ಕಾಡು ಉಳಿಸಿದಾಗ ನಾಡು ಉಳಿಯುತ್ತದೆ. ಗಿಡ ಮರ ಬೆಳೆಸಿ, ಮಂಗಳೂರನ್ನು ಉಳಿಸುವ ಪಣ ತೊಡಬೇಕು. ಪರಿಸರ ಸಂರಕ್ಷಣೆ ನಮ್ಮೆಲ್ಲರ ಉಸಿರಾಗಬೇಕು ಎಂದರು.
ನೀರಿನ ದುರ್ಬಳಕೆ ನಿಲ್ಲಿಸಿ
ಆಡಳಿತಾಧಿಕಾರಿ ಪ್ರೊ| ಶಂಕರ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನೀರಿನ ದುರ್ಬಳಕೆಯನ್ನು ನಿಲ್ಲಿಸಬೇಕು. ದೇಶದಲ್ಲಿ ಶೇ.20ಕ್ಕಿಂತ ಕಡಿಮೆ ಇರುವ ಕಾಡನ್ನು ಶೇ.40ಕ್ಕೆ ಏರಿಸಬೇಕು. ಯುವಕರು ಕರ್ತವ್ಯಬದ್ಧರಾದಾಗ ಇದು ಸಾಧ್ಯವಾಗುತ್ತದೆ. ಸ್ವತ್ಛ ಮತ್ತು ಹಸುರು ದೇಶವನ್ನಾಗಿಸಲು ವಿದ್ಯಾರ್ಥಿ ಜೀವನದಲ್ಲೇ ಪಣತೊಡಬೇಕು ಎಂದು ಹೇಳಿದರು.
ಮರಗಳನ್ನು ನಾಶ ಮಾಡದಿರಿ
ಪದವಿ ಕಾಲೇಜು ಪ್ರಾಂಶುಪಾಲ ಜೀವನ್‌ದಾಸ್ ಎ. ಅವರು ಮಾತನಾಡಿ, ಪರಿಸರ ಸ್ವತ್ಛವಾದಾಗ ಗಿಡ ಮರಗಳಲ್ಲಿ ಪ್ರೀತಿ ಹೆಚ್ಚಾದಾಗ ಸಮಾಜಕ್ಕೆ ಪ್ರಯೋಜನವಾಗುತ್ತದೆ. ಆದುದರಿಂದ ಮರಗಳನ್ನು ನಾಶ ಮಾಡದೇ ಉಳಿಸಿ, ಬೆಳೆಸುವ ಪ್ರಯತ್ನವಾಗಬೇಕು ಎಂದರು.
ಪ.ಪೂ. ಪ್ರಾಂಶುಪಾಲೆ ವಿದ್ಯಾ ಭಟ್ ಉಪಸ್ಥಿತರಿದ್ದರು. ಪಲ್ಲವಿ ಸ್ವಾಗತಿಸಿದರು. ಧನುಷ್ ನಿರೂಪಿಸಿದರು. ಮೋಹಿತ್ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಿಂಚನಾ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.