ಕಥುವಾ ಬಾಲಕಿಗೆ ನ್ಯಾಯ
Team Udayavani, Jun 11, 2019, 6:03 AM IST
ಪಠಾಣ್‌ಕೋಟ್: ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಕೊಲೆಗೈದ ಪ್ರಕರಣದಲ್ಲಿ 7 ಮಂದಿ ಆರೋಪಿಗಳ ಪೈಕಿ 6 ಮಂದಿ ದೋಷಿ ಗಳೆಂದು ಪಂಜಾಬ್‌ನ ಪಠಾಣ್‌ಕೋಟ್‌ನ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ಒಬ್ಬ ಆರೋಪಿಯನ್ನು ದೋಷ ಮುಕ್ತಗೊಳಿಸಿದೆ.
ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದ ಈ ಪ್ರಕರಣದಲ್ಲಿ ಮೂವರು ಪ್ರಮುಖ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದು, ತಲಾ ಒಂದು ಲಕ್ಷ ರೂ. ದಂಡವನ್ನೂ ನೀಡುವಂತೆ ಸೂಚಿಸ ಲಾಗಿದೆ. ಉಳಿದ ಮೂವರು ಆರೋಪಿಗಳಿಗೆ ತಲಾ 5 ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ದಂಡ ವಿಧಿಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಮಾರು ಒಂದು ವರ್ಷ ಕಾಲ ನಡೆದ ವಿಚಾರಣೆಯ ಬಳಿಕ, ಪ್ರಕರಣದ ಮಾಸ್ಟರ್‌ವೆುçಂಡ್, ದೇಗುಲವೊಂದರ ಅರ್ಚಕ ಸಾಂಜಿ ರಾಮ್‌ನ ಪುತ್ರ ವಿಶಾಲ್‌ನನ್ನು ದೋಷಮುಕ್ತಗೊಳಿಸಲಾಗಿದೆ.
ಯಾರ್ಯಾರು ದೋಷಿಗಳು?: ದೇಗುಲದ ಅರ್ಚಕ ಸಾಂಜಿ ರಾಮ್, ವಿಶೇಷ ಪೊಲೀಸ್ ಅಧಿಕಾರಿ ದೀಪಕ್ ಖಜುರಿಯಾ, ನಾಗರಿಕ ಪರ್ವೇಶ್ ಕುಮಾರ್ ಈ ಪ್ರಕರಣದ ಪ್ರಮುಖ ದೋಷಿಗಳು. ಇವರ ವಿರುದ್ಧ ಕ್ರಿಮಿನಲ್ ಸಂಚು, ಹತ್ಯೆ, ಗ್ಯಾಂಗ್‌ರೇಪ್ ಮತ್ತು ಸಾಕ್ಷ್ಯನಾಶದ ಆರೋಪ ಹೊರಿಸಲಾಗಿತ್ತು. ಇನ್ನುಳಿದಂತೆ, ಸಬ್ ಇನ್‌ಸ್ಪೆಕ್ಟರ್ ಆನಂದ್ ದತ್ತಾ, ಹೆಡ್ ಕಾನ್‌ಸ್ಟೆàಬಲ್ ತಿಲಕ್ ರಾಜ್ ಮತ್ತು ವಿಶೇಷ ಪೊಲೀಸ್ ಅಧಿಕಾರಿ ಸುರೇಂದ್ರ ವರ್ಮಾ ವಿರುದ್ಧ ಸಾಕ್ಷ್ಯನಾಶದ ಆರೋಪ ಹೊರಿಸಲಾಗಿತ್ತು. ಈ ಪೈಕಿ ಪ್ರಮುಖ ಮೂವರು ಅಪರಾಧಿ ಗಳಿಗೆ ಜೀವಾವಧಿ, ಉಳಿದ ಮೂವರಿಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಬಾಲಾರೋಪಿಯ ವಿಚಾರಣೆ ಬಾಕಿ: ಒಬ್ಬ ಬಾಲಾರೋಪಿ ಸೇರಿದಂತೆ ಒಟ್ಟು 8 ಮಂದಿಯ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆಯ ಕ್ರೈಂ ಬ್ರಾಂಚ್ ಆರೋಪಪಟ್ಟಿ ಸಲ್ಲಿಸಿತ್ತು. ಬಾಲಾರೋಪಿಯ ವಯಸ್ಸು ದೃಢೀಕರಣಕ್ಕೆ ಸಂಬಂಧಿಸಿದ ಅರ್ಜಿ ಹೈಕೋರ್ಟ್‌ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಕಾರಣ, ಆತನ ವಿರುದ್ಧದ ವಿಚಾರಣೆ ಇನ್ನಷ್ಟೇ ಆರಂಭವಾಗಬೇಕಿದೆ.
ತೀರ್ಪಿಗೆ ಸ್ವಾಗತ
ಕಥುವಾ ಪ್ರಕರಣದ ತೀರ್ಪನ್ನು ಜಮ್ಮು- ಕಾಶ್ಮೀರದ ಮಾಜಿ ಸಿಎಂಗಳಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಅವರು ಸ್ವಾಗತಿಸಿದ್ದಾರೆ. ತಪ್ಪಿತಸ್ಥರಿಗೆ ಕಠಿನ ಶಿಕ್ಷೆಯಾಗ ಬೇಕು ಮತ್ತು ಆರೋಪಿಗಳನ್ನು ಸಮರ್ಥಿಸಿ ಕೊಂಡ ರಾಜಕೀಯ ನಾಯಕರು, ಸಂತ್ರಸ್ತೆ ಯನ್ನು ಅವಮಾನಿಸಿದ ಹಾಗೂ ಕಾನೂನು ವ್ಯವಸ್ಥೆಯನ್ನು ಹೀಗಳೆದವರಿಗೆ ಎಷ್ಟು ಖಂಡನೆ ವ್ಯಕ್ತಪಡಿಸಿದರೂ ಸಾಲದು ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ ಅನೇಕರು ತೀರ್ಪನ್ನು ಸ್ವಾಗತಿಸಿದ್ದಾರೆ. ಜತೆಗೆ, ಅಲಿಗಢ ದಲ್ಲಿ ಇತ್ತೀಚೆಗೆ ನಡೆದ 3 ವರ್ಷದ ಬಾಲಕಿಯ ಕೊಲೆ ಪ್ರಕರಣದ ತಪ್ಪಿತಸ್ಥರಿಗೂ ಕಠಿನ ಶಿಕ್ಷೆ ಯಾಗಲಿ ಎಂದು ಆಗ್ರಹಿಸಿದ್ದಾರೆ.
4 ದಿನ ನಿರಂತರ ಅತ್ಯಾಚಾರ
ಕಳೆದ ವರ್ಷದ ಜ.10ರಂದು ಕುದುರೆಗಳನ್ನು ಮೇಯಿಸಲು ಹೋಗಿದ್ದ 8 ವರ್ಷದ ಆಸಿಫಾಳನ್ನು ದುಷ್ಕರ್ಮಿಗಳು ಅಪಹರಣ ಮಾಡಿ, ದೇಗುಲವೊಂದಕ್ಕೆ ಒಯ್ದಿದ್ದರು. ಅಲ್ಲಿ ಆಕೆಗೆ ಅಮಲು ಬರುವ ಔಷಧಗಳನ್ನು ನೀಡಿ, 4 ದಿನಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆಸಲಾಗಿತ್ತು. 4 ದಿನಗಳ ಬಳಿಕ ಬಾಲಕಿಯ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಅನಂತರ, ಕಲ್ಲೊಂದನ್ನು ತಲೆ ಮೇಲೆ ಎತ್ತಿ ಹಾಕಿ, ಸತ್ತಿರುವುದನ್ನು ದೃಢಪಡಿಸಲಾಗಿತ್ತು ಎಂದು ಕಳೆದ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ 15 ಪುಟಗಳ ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ರಸಾನಾ ಗ್ರಾಮದಲ್ಲಿ ನೆಲೆಯೂರಿರುವ ಅಲ್ಪ ಸಂಖ್ಯಾತ ಬಕರ್‌ವಾಲಾ ಸಮುದಾಯ ವನ್ನು ಆ ಪ್ರದೇಶದಿಂದ ಓಡಿಸುವ ಸಲುವಾಗಿ ಈ ಸಂಚು ರೂಪಿಸಲಾಗಿತ್ತು ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿತ್ತು.
2018ರ ಮೇ 7ರಂದು ಸುಪ್ರೀಂ ಈ ಪ್ರಕರಣದ ವಿಚಾರಣೆ ಯನ್ನು ಜಮ್ಮು- ಕಾಶ್ಮೀರದಿಂದ ಹೊರಗೆ ವರ್ಗಾಯಿಸಿ ಆದೇಶ ಹೊರಡಿಸಿತ್ತು. ಅದರಂತೆ, ಪಂಜಾಬ್‌ನ ಪಠಾಣ್‌ಕೋರ್ಟ್ ನ್ಯಾಯಾಲಯದಲ್ಲಿ ದಿನಂಪ್ರತಿ ವಿಚಾರಣೆ ಶುರುವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.