ಮುಂಗಾರು: ಕೊಂಕಣ ರೈಲು ಪ್ರಯಾಣ ಪರಿಷ್ಕೃತ ವೇಳಾಪಟ್ಟಿ ಪ್ರಕಟ
Team Udayavani, Jun 11, 2019, 9:23 AM IST
ಮಂಗಳೂರು: ಮುಂಗಾರು ಹಿನ್ನೆಲೆಯಲ್ಲಿ ಕೊಂಕಣ ರೈಲಿನ ಪ್ರಯಾಣದ ವೇಳಾಪಟ್ಟಿ ಜೂ. 10ರಿಂದ ಹೊಸದಾಗಿ ಜಾರಿಗೆ ಬಂದಿದ್ದು, ಅ. 31ರ ವರೆಗೂ ಚಾಲ್ತಿಯಲ್ಲಿರಲಿದೆ.
ಕೊಂಕಣ ರೈಲ್ವೇ ಮೂಲಕ ಸಂಚರಿಸುವ ರೈಲುಗಳಿಗೆ ಇದು ಅನ್ವಯ ವಾಗಲಿದೆ. ಈ ವೇಳಾಪಟ್ಟಿಯ ಪ್ರಕಟನೆೆಗೆ ಮೊದಲೇ ಟಿಕೆಟ್ ಪಡೆದಿರುವ ಪ್ರಯಾಣಿಕರು ತಮ್ಮ ರೈಲುಗಳ ವ್ಯತ್ಯಯವಾದ ವೇಳೆಯನ್ನು ಗಮನಿಸಬೇಕಾಗಿದೆ.
ನಂ.12617 ಎರ್ನಾಕುಳಂ ಜಂಕ್ಷನ್- ನಿಜಾಮುದ್ದೀನ್ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್ ಮಂಗಳೂರು ಜಂಕ್ಷನ್‌ನಿಂದ ರಾತ್ರಿ 9.30ರ ಬದಲು ಸಂಜೆ 7.15ಕ್ಕೆ ಹೊರಡಲಿದೆ. ನಿಜಾಮುದ್ದೀನ್ ನಿಲ್ದಾಣವನ್ನು ನಿಗದಿತ 1.15ಕ್ಕೆ ತಲುಪಲಿದೆ.
ಮಂಗಳೂರು ಸೆಂಟ್ರಲ್-ಲೋಕಮಾನ್ಯ ತಿಲಕ್ ಮತ್ಸ್ಯಗಂಧ ಎಕ್ಸ್‌ಪ್ರೆಸ್ ನಂ. 12620 ಮಂಗಳೂರು ಸೆಂಟ್ರಲ್‌ನಿಂದ ಮಧ್ಯಾಹ್ನ 2.25ರ ಬದಲು 12.50ಕ್ಕೆ ಹೊರಡಲಿದ್ದು, ಎಂದಿನಂತೆ ಬೆಳಗ್ಗೆ 6.35ಕ್ಕೆ ಮುಂಬಯಿ ತಲಪಲಿದೆ.
ನಂ.70106 ಮಂಗಳೂರು ಸೆಂಟ್ರಲ್-ಮಡಗಾಂವ್ ಪ್ಯಾಸೆಂಜರ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2.55ರ ಬದಲು 10 ನಿಮಿಷ ಬೇಗ, 2.45ಕ್ಕೆ ಹೊರಡಲಿದೆ. ಮಡಗಾಂವ್‌ಗೆ ರಾತ್ರಿ 10.30ಕ್ಕೆ ತಲುಪಲಿದೆ.
ನಂ.10215 ಮಡಗಾಂವ್-ಎರ್ನಾಕುಳಂ ಸಾಪ್ತಾಹಿಕ ರೈಲು ಮಡಗಾಂವ್‌ನಿಂದ ರಾತ್ರಿ 9.30ರ ಬದಲು 30 ನಿಮಿಷ ಬೇಗ 9ಕ್ಕೆ ಹೊರಡಲಿದ್ದು ಎಂದಿನಂತೆ ಮರುದಿನ 10.55ಕ್ಕೆ ಎರ್ನಾಕುಳಂ ತಲುಪಲಿದೆ.
ನಂ.22635 ಮಡಗಾಂವ್-ಮಂಗಳೂರು ಸೆಂಟ್ರಲ್ ಇಂಟರ್‌ಸಿಟಿ ರೈಲು ಮಡಗಾಂವ್‌ನಿಂದ ಸಂಜೆ 4.15ರ ಬದಲು 4ಕ್ಕೆ ಹೊರಟು ಮಂಗಳೂರಿಗೆ ರಾತ್ರಿ 11ಕ್ಕೆ ತಲುಪಲಿದೆ.
12134 ಮಂಗಳೂರು ಜಂಕ್ಷನ್-ಮುಂಬಯಿ ಸಿಎಸ್‌ಟಿ ರೈಲು ಮಂಗಳೂರು ಜಂಕ್ಷನ್‌ನಿಂದ ಮಧ್ಯಾಹ್ನ 1.55ರ ಬದಲು ಸಂಜೆ 4.45ಕ್ಕೆ ಹೊರಡಲಿದೆ. ಮುಂಬಯಿಗೆ ಮರುದಿನ ಬೆಳಗ್ಗೆ 10.33ಕ್ಕೆ ತಲುಪಲಿದೆ.
ನಂ.16524 ಕಾರವಾರ ಮಂಗಳೂರು ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು (ವಯಾ ಮೈಸೂರು)ವಾರಕ್ಕೆ 3 ಬಾರಿ ಸಂಚರಿಸುವ ರೈಲು ಕಾರವಾರದಿಂದ 2.40ರ ಬದಲು 2.55ಕ್ಕೆ ಹೊರಟು ಬೆಂಗಳೂರು ಕೆಎಸ್‌ಆರ್‌ಗೆ ಯಾವುದೇ ಬದಲಾಗದ ಸಮಯ 8ಕ್ಕೆ ತಲುಪಲಿದೆ.
ನಂ.16514 ಕಾರವಾರ-ಮಂಗಳೂರು ಸೆಂಟ್ರಲ್ ಕೆಎಸ್‌ಆರ್ ರೈಲು (ವಯಾ ನೆಲಮಂಗಲ) ಕಾರವಾರದಿಂದ 2.40ರ ಬದಲು 2.55ಕ್ಕೆ ಹೊರಟು ಮರುದಿನ ಯಾವುದೇ ಬದಲಾಗದ ಸಮಯ 8ಕ್ಕೆ ಬೆಂಗಳೂರು ತಲಪಲಿದೆ. ನಂ. 56641 ಮಡಗಾಂವ್ ಮಂಗಳೂರು ಸೆಂಟ್ರಲ್ ಪ್ಯಾಸಂಜರ್ ರೈಲು ಮಡಗಾಂವ್‌ನಿಂದ ಮಧ್ಯಾಹ್ನ 1 ಗಂಟೆ ಬದಲು 2 ಗಂಟೆಗೆ ಹೊರಟು ರಾತ್ರಿ 10ಕ್ಕೆ ತಲುಪಲಿದೆ.
16346 ತಿರುವನಂತಪುರ ಕುರ್ಲಾ ನೇತ್ರಾವತಿ ರೈಲು ರಾತ್ರಿ 11.20ಕ್ಕೆ ಮಂಗಳೂರು ಜಂಕ್ಷನ್‌ನಿಂದ ಹೊರಡಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಚೋರಾಡಿ; ಕರೆ ಬಂದರೆ ಬೆಟ್ಟ ಹತ್ತಬೇಕು!
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
Delhi Election 2025: ದೆಹಲಿ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ; ಬಿಜೆಪಿ V/s AAP
Mangaluru: ನೇತ್ರಾವತಿ ಸೇತುವೆ ಮೇಲಿನ ಸಿಸಿ ಕೆಮರಾಗಳಿಗಿಲ್ಲ ನಿರ್ವಹಣೆ ಭಾಗ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.