ಸಮಸ್ಯೆ ಬಗೆಹರಿಸಿದರೆ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ಣ
Team Udayavani, Jun 11, 2019, 10:06 AM IST
ಮುದ್ದೇಬಿಹಾಳ: ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ಜೊತೆ ಕೆಆರ್‌ಡಿಸಿಎಲ್, ಅಶೋಕಾ ಬಿಲ್ಡಕಾನ್ ಅಧಿಕಾರಿಗಳು ಹೆದ್ದಾರಿ ಕಾಮಗಾರಿ ಕುರಿತು ಚರ್ಚಿಸಿದರು.
ಮುದ್ದೇಬಿಹಾಳ: ಪಟ್ಟಣದಲ್ಲಿ ಆಮೆಗತಿಯಲ್ಲಿ ಸಾಗಿರುವ ಹುನಗುಂದ-ಮುದ್ದೇಬಿಹಾಳ-ತಾಳಿಕೋಟೆ ರಾಜ್ಯ ಹೆದ್ದಾರಿ ಕಾಮಗಾರಿ ಮುಕ್ತಾಯಗೊಳಿಸಲು ಅಂತಿಮ ಹಂತದ ಕೆಲಸಗಳು ಕೆಲ ಸಮಸ್ಯೆಗಳ ಕಾರಣದಿಂದಾಗಿ ಬಾಕಿ ಉಳಿದಿವೆ. ಪುರಸಭೆ ಈ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟಲ್ಲಿ ಹೆದ್ದಾರಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಿಕೊಡುತ್ತೇವೆ ಎಂದು ಕೆಆರ್‌ಡಿಸಿಎಲ್ ಮತ್ತು ಅಶೋಕಾ ಬಿಲ್ಡಕಾನ್ ಅಧಿಕಾರಿಗಳು ಸೋಮವಾರ ಪುರಸಭೆ ಮುಖ್ಯಾಧಿಕಾರಿ ಎಸ್.ಎಫ್. ಈಳಗೇರಗೆ ಮನವಿ ಮಾಡಿದ್ದಾರೆ.
ಈ ಕುರಿತು ಪುರಸಭೆ ಕಚೇರಿಯಲ್ಲಿ ಸೋಮವಾರ ಮುಖ್ಯಾಧಿಕಾರಿ ಎಸ್.ಎಫ್. ಈಳಗೇರ ಜೊತೆ ಸಭೆ ನಡೆಸಿದ ಕೆಆರ್‌ಡಿಸಿಎಲ್ನ ಸಹಾಯಕ ಎಂಜಿನಿಯರ್ ಮಂಜುನಾಥ, ಅಶೋಕಾ ಬಿಲ್ಡಕಾನ್ ಕಂಪನಿ ಯೋಜನಾ ವ್ಯವಸ್ಥಾಪಕ ಗಿರೀಶ ಅವರು, ಈಗ ರಸ್ತೆ ನಿರ್ಮಾಣ ಮುಗಿದಿದೆ. ರಸ್ತೆಪಕ್ಕದಲ್ಲಿ ಎರಡೂ ಕಡೆ ಪಾದಚಾರಿ ಮಾರ್ಗ, ಚರಂಡಿ, ರಸ್ತೆ ವಿಭಜಕ, ಡೆಕ್, ವಿದ್ಯುತ್ ಕಂಬ ಅಳವಡಿಕೆ ಮುಂತಾದ ಅಂತಿಮ ಹಂತದ ಕೆಲಸಗಳು ಬಾಕಿ ಇವೆ. ಕೆಲವರು ಕಾರಣ ಇಲ್ಲದೆ ಕೆಲಸ ಬಂದ್ ಮಾಡಿಸುತ್ತಿದ್ದಾರೆ. ಇದರಿಂದ ನಮಗೆ ಕೆಲಸ ಮಾಡಲು ತೊಂದರೆ ಆಗುತ್ತಿದೆ ಎಂದು ಗಮನ ಸೆಳೆದರು.
ಇತ್ತೀಚೆಗೆ ಕೆಆರ್‌ಡಿಸಿಎಲ್ನ ಎಂಡಿಯವರು ಹೊಸ ಆದೇಶವೊಂದನ್ನು ಹೊರಡಿಸಿ ರಸ್ತೆ ಅಗಲೀಕರಣಕ್ಕೆ ಎಷ್ಟು ಸರ್ಕಾರಿ ಜಾಗ ಲಭ್ಯವಿದೆಯೋ ಅಷ್ಟನ್ನೂ ಬಳಕೆ ಮಾಡಿಕೊಳ್ಳಲು ತಿಳಿಸಿದ್ದಾರೆ. ಇದನ್ನು ಪಾಲಿಸಬೇಕಾದರೆ ಬಸ್ ನಿಲ್ದಾಣದ ಮುಂದೆ ಇರುವ ಡಬ್ಟಾ ಅಂಗಡಿಗಳು, ಜ್ಞಾನಭಾರತಿ ಶಾಲೆ, ಖಾದಿ ಗ್ರಾಮೋದ್ಯೋಗ ಕೇಂದ್ರ, ಓಸ್ವಾಲ್ ಅವರ ಕಟ್ಟಿಗೆ ಅಡ್ಡೆ, ಕೃಷಿ ಇಲಾಖೆ ಕಾಂಪೌಂಡ್ ಮುಂತಾದವುಗಳನ್ನು ತೆರವುಗೊಳಿಸಿಕೊಡಬೇಕು. ಕೆಲವೆಡೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದು ಇವುಗಳನ್ನು ಸಹಿತ ಬಗೆಹರಿಸಿಕೊಡಬೇಕು. ಕೆಲವೆಡೆ ವಿದ್ಯುತ್ ಕಂಬ ಸ್ಥಳಾಂತರಿಸಿಲ್ಲ, ಇದನ್ನೂ ಸ್ಥಳಾಂತರಿಸಿಕೊಡಬೇಕು ಎಂದು ಮನವಿ ಮಾಡಿದರು.
ಅಧಿಕಾರಿಗಳು, ಮುಖ್ಯಾಧಿಕಾರಿ ನಡುವೆ ಚರ್ಚೆ ನಡೆದಾಗ ಮಧ್ಯಪ್ರವೇಶಿಸಿದ ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ರಾಜ್ಯ ಹೆದ್ದಾರಿ ನಿಯಮದ ಪ್ರಕಾರ ಕೆಲಸ ಮಾಡಬೇಕು. ಯೋಜನಾ ವರದಿಯಲ್ಲಿರುವಷ್ಟು ಅಳತೆಯನ್ನು ಮಾತ್ರ ಬಳಸಿಕೊಳ್ಳಬೇಕು. ಬಸ್ ನಿಲ್ದಾಣ ಎದುರು ಇರುವ ಡಬ್ಟಾ ಅಂಗಡಿಗಳಿಂದ ಪುರಸಭೆಗೆ ಆದಾಯ ಬರುತ್ತದೆ. ಮೇಲಾಗಿ ಇವು ನಿಗದಿಪಡಿಸಿದ ಅಳತೆಯಿಂದ ಹೊರಗೆ ಇವೆ. ಸ್ಥಳೀಯ ಶಾಸಕರು ಈ ಡಬ್ಟಾ ಅಂಗಡಿಗಳನ್ನು ಕಿತ್ತಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ನಾವು ಆಸ್ಪದ ಕೊಡುವುದಿಲ್ಲ ತಕರಾರು ತೆಗೆದರು.
ಇದರಿಂದ ವಿಚಲಿತರಾದ ಅಶೋಕಾ ಬಿಲ್ಡಕಾನ್ ಯೋಜನಾ ವ್ಯವಸ್ಥಾಪಕ ಗಿರೀಶ ಅವರು, ಶಾಸಕರು ಹೆಚ್ಚುವರಿ ಜಾಗೆಯನ್ನೂ ರಸ್ತೆ ಅಗಲೀಕರಣಕ್ಕೆ ಬಳಸಿಕೊಳ್ಳಲು ಸರ್ಕಾರದಿಂದ ಅನುಮತಿ ಪಡೆದುಕೊಂಡಿದ್ದಾರೆ. ನಾವು ಹೊಸ ಆದೇಶದಂತೆ ಕೆಲಸ ಮಾಡಬೇಕಾಗಿದೆ. ಇಷ್ಟಕ್ಕೂ ಡಬ್ಟಾ ಅಂಗಡಿಗಳಿಂದ ಪುರಸಭೆಗೆ ಎಷ್ಟು ಆದಾಯ ಬರುತ್ತದೆ. ಈಗಾಗಲೇ ವಾಣಿಜ್ಯ ಮಳಿಗೆಗಳನ್ನೇ ಕೆಡವಲು ಸಹಕರಿಸಿದ್ದೀರಿ. ಈಗಲೂ ಸಹಕರಿಸಿ. ಶಾಸಕರು ಅತಿಕ್ರಮಣ ತೆರವುಗೊಳಿಸಬೇಕು ಅಂತಾರೆ ಪುರಸಭೆ ಸದಸ್ಯರಾದ ನೀವು ಬೇಡ ಅಂತೀರಿ. ನಾವು ಯಾರ ಮಾತು ಕೇಳಬೇಕು ಎಂದು ಸಿಡಿಮಿಡಿಗೊಂಡರು.
ಈ ವೇಳೆ ಮಾತನಾಡಿದ ಮುಖ್ಯಾಧಿಕಾರಿ, ಹೆದ್ದಾರಿ ಪಟ್ಟಣ ಪ್ರವೇಶಿಸುವ ಕೊನೇ ಹಂತದಿಂದ ಕೆಲಸ ಪ್ರಾರಂಭಿಸಿ. ಎಲ್ಲೆಲ್ಲಿ ಸಮಸ್ಯೆ ಉಂಟಾಗುತ್ತದೆಯೋ ಅವೆಲ್ಲವನ್ನೂ ಬಗೆಹರಿಸಿಕೊಡಲಾಗುತ್ತದೆ. ಪುರಸಭೆಯವರಾದ ನಾವು ನಿಮಗೆ ಸಂಪೂರ್ಣ ಸಹಕಾರ ಕೊಡುತ್ತೇವೆ ಎಂದು ಭರವಸೆ ನೀಡಿದರು.
ಇದರಿಂದ ಸಮಾಧಾನಗೊಂಡ ಕೆಆರ್‌ಡಿಸಿಎಲ್, ಅಶೋಕಾ ಬಿಲ್ಡಕಾನ್ ಪ್ರತಿನಿಧಿಗಳು ಕೆಲಸವನ್ನು ಈವತ್ತಿಂದಲೇ ಪ್ರಾರಂಭಿಸುವುದಾಗಿ ತಿಳಿಸಿ ಏನಾದರೂ ಸಮಸ್ಯೆ ಉಂಟಾದಲ್ಲಿ ಮುಖ್ಯಾಧಿಕಾರಿ ಗಮನಕ್ಕೆ ತಂದೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Earthquake…! ರೋಡ್ ರೋಲರ್ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.