ಶ್ರೀಕೃಷ್ಣ ಮಠ: ಸುವರ್ಣಗೋಪುರ ಸಮರ್ಪಣ
Team Udayavani, Jun 11, 2019, 11:15 AM IST
ಉಡುಪಿ: ಕಳೆದ ಹತ್ತು ದಿನಗಳಿಂದ ನಡೆಯುತ್ತಿರುವ ಶ್ರೀಕೃಷ್ಣ ಮಠದ ಸುವರ್ಣಗೋಪುರ ಸಮರ್ಪಣ ಸಮಾರಂಭ ಸೋಮವಾರ ಸಂಪೂರ್ಣಗೊಂಡಿತು. ಬೆಳಗ್ಗೆ ಅವಭೃಥ ಉತ್ಸವವೂ ಜರಗಿತು.
ಭಗವದ್ಭಕ್ತರ ಕೊಡುಗೆಗಳಿಂದಾಗಿ ಸುವರ್ಣ ಗೋಪುರ ಸಮರ್ಪಣೆಯಾಗಿದೆ. ಶೇ. 20ರಷ್ಟು ಮಾತ್ರ ಕೆಲಸ ಬಾಕಿ ಇದ್ದು ಇದು ಇನ್ನಾರು ತಿಂಗಳಲ್ಲಿ ಮುಗಿಯಲಿದೆ ಎಂದು ರಾಜಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ನುಡಿದರು.
ಕಾಶ್ಮೀರದ ಸಮಸ್ಯೆ ಬಗೆಹರಿಯಲಿ
ಸುವರ್ಣ ಗೋಪುರ ನಿರ್ಮಾಣ ಸಂದರ್ಭ ದೇಶದ ಶಿರಭಾಗವೆನಿಸಿದ ಕಾಶ್ಮೀರ ಭೂಭಾಗದ ಸಮಸ್ಯೆಯೂ ಬಗೆಹರಿಯಲಿ. ಅಮೃತಸರದ ಸ್ವರ್ಣ ಮಂದಿರದಂತೆ ಜಗತ್ತಿನ ವಿವಿಧೆಡೆ ಇರುವವರಿಗೆ ಉಡುಪಿಯ ಸ್ವರ್ಣಗೋಪುರ ಗುರುತಿಸುವಂತಾಗಲಿ ಎಂದು ಶ್ರೀ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಹಾರೈಸಿದರು.
ದೇವರು ಎಲ್ಲವನ್ನೂ ಒಳ್ಳೆಯದಕ್ಕಾಗಿ ಮಾಡಿಸುತ್ತಾನೆ. ಏಳು ಕಡೆ ಗೋಪುರ ನಿರ್ಮಿಸಿಕೊಂಡ ಭಗವಂತ ಇನ್ನೊಂದು ಕಡೆಯೂ ಮಾಡಿಸಿಕೊಳ್ಳುತ್ತಾನೆಂದು ಶ್ರೀ ಪಲಿಮಾರು ಮಠದ ಕಿರಿಯ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ಹೇಳಿದರು.
ಸುವರ್ಣಗೋಪುರ ದರ್ಶನದ ಜತೆ ತಣ್ತೀದರ್ಶನವಾಗುತ್ತಿದೆ. ಇಂತಹ ಸಾಧನೆಗಳು ಹತ್ತು ಹಲವು ಗೋಜಲುಗಳಿಂದ ಪಾರಾಗಲು ನೆರವಾಗಲಿದೆ ಎಂದು ಹೊರನಾಡು ಕ್ಷೇತ್ರದ ಧರ್ಮದರ್ಶಿ ಭೀಮೇಶ್ವರ ಜೋಷಿ ಅಭಿಪ್ರಾಯಪಟ್ಟರು. ಕಟೀಲಿನ ಅನಂತ ಪದ್ಮನಾಭ ಆಸ್ರಣ್ಣ, ಹರಿನಾರಾಯಣ ಆಸ್ರಣ್ಣ, ಆನೆಗುಡ್ಡೆಯ ಸೂರ್ಯ ನಾರಾಯಣ ಉಪಾಧ್ಯಾಯ ಶುಭಕೋರಿದರು.
ಸಮ್ಮಾನ
ಸರ್ವಜ್ಞ ಪೀಠದ ಸಿಂಹಾಸನದಲ್ಲಿ ದಾರು ಶಿಲ್ಪ ರಚಿಸಿದ ಸಂದೀಪ್, ನಾಗರಾಜ್, ಅಖಂಡ ಭಜನೆಯ ಸಂಯೋಜಕ ಕಂಪ್ಲಿ ಗುರುರಾಜ ಆಚಾರ್ಯ, ಗೀತಾ ಗುರುರಾಜ ಆಚಾರ್ಯ, ಗುಲ್ಬರ್ಗದ ಸರಸ್ವತೀ ತಂತ್ರಿ, ಹೊನ್ನಾವರದ ರಾಘವೇಂದ್ರ ಭಟ್ ಅವರನ್ನು ಸಮ್ಮಾನಿಸಲಾಯಿತು. ಕೊರ್ಲಹಳ್ಳಿ ವೆಂಕಟೇಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
Mohini Dey: ಎಆರ್ ರೆಹಮಾನ್ ಜತೆ ಸಂಬಂಧ.. ಅವರು ನನಗೆ ತಂದೆ ಸಮಾನ ಎಂದ ಮೋಹಿನಿ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.