![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 12, 2019, 3:01 AM IST
ಆಲಮೇಲ: ಉತ್ತರಾಖಂಡ ಕೇದಾರ ಪೀಠದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ 5 ಸಾವಿರ ವರ್ಷ ಬಾಳಿಕೆ ಬರುವ ದೇಗುಲ ನಿರ್ಮಿಸಲಾಗುವುದು ಎಂದು ಕೇದಾರ ಜಗದ್ಗುರು ಭೀಮಾಶಂಕರಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಕೇದಾರ ಜಗದ್ಗುರುಗಳ 63ನೇ ಜನ್ಮದಿನ ನಿಮಿತ್ತ ಜಗದ್ಗುರುಗಳ ಜನ್ಮಸ್ಥಳ ಹೂವಿನಹಳ್ಳಿ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಡ್ಡಪಲ್ಲಕ್ಕಿ ಉತ್ಸವ ಹಾಗೂ ಗುರುವಂದನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದೇಗುಲ ನಿರ್ಮಾಣಕ್ಕೆ ಪ್ರಧಾನಿ ಮೋದಿ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದು, ಇನ್ನೂ 100 ಕೋಟಿ ರೂ.ಗಳನ್ನು ದೇಶದ ಭಕ್ತರಿಂದ ಸಂಗ್ರಹಿಸಲಾಗುವುದು. ವೀರಶೈವ ಧರ್ಮ ಪರಂಪರಾಗತವಾಗಿ ಬಂದ ಧರ್ಮ.
ವೀರಶೈವ ಪ್ರತ್ಯೇಕ ಧರ್ಮಕ್ಕಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಕಾನೂನು ಹೋರಾಟ ಮಾಡಿ ಸ್ವತಂತ್ರ ವೀರಶೈವ ಧರ್ಮ ಮಾಡಿಕೊಳ್ಳುತ್ತೇವೆ. ಗ್ರಂಥ ಸಿದ್ಧಾಂತ ಶಿಖಾಮಣಿ ವೀರಶೈವ ಧರ್ಮವಾಗಿದೆ ಎಂದರು.
You seem to have an Ad Blocker on.
To continue reading, please turn it off or whitelist Udayavani.