ಚರಂಡಿ ಹೂಳೆತ್ತುವ ಕಾಮಗಾರಿ ಅಗತ್ಯ
Team Udayavani, Jun 12, 2019, 6:10 AM IST
ಉಪ್ಪುಂದ: ಇಲ್ಲಿನ ಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಆರಂಭಿಸಿರುವ ಚರಂಡಿ ಕಾಮಗಾರಿ ಇನ್ನೂ ಮುಗಿದಿಲ್ಲ. ಸಂಬಂಧಪಟ್ಟ ಇಲಾಖೆ ಮಳೆಗಾಲದ ಮೊದಲೇ ಕಾಮಗಾರಿ ಮುಗಿಸುವ ಗೋಜಿಗೆ ಹೋಗಿಲ್ಲ.
ಪೂರ್ಣಗೊಳ್ಳದ ಕೆಲಸ
ಎರಡು ವರ್ಷಗಳ ಹಿಂದೆಯೇ ಸಂತೆ ಮಾರ್ಕೆಟ್‌ನಿಂದ ಪೇಟ್ರೋಲ್ ಬಂಕ್ ವರೆಗೆ ಚರಂಡಿ ನಿರ್ಮಿಸಲು ಕಾಮಗಾರಿ ಕೈಗೆತ್ತಿಗೊಳ್ಳಲಾಗಿತ್ತು.
ಅರೆಬರೆ ಕೆಲಸ ಮಾಡಿದ್ದು ಅಲ್ಲಲ್ಲಿ ಸಿಮೆಂಟ್ ಸ್ಲಾಬ್ ಮುಚ್ಚದೆ ಹಾಗೆಯೇ ಬಿಡಲಾಗಿದೆ. ಸ್ಲಾéಬ್ ಬದಿಗೆ ಹಾಕಿದ ಮಣ್ಣು ಕುಸಿದಿದೆ. ಇನ್ನು ರಸ್ತೆ ಬದಿಯಲ್ಲಿ ಹೊಂಡಗಳು ಇರುವುದರಿಂದ ವಾಹನ ಸವಾರರಿಗೂ ಅಪಾಯಕಾರಿಯಾಗಿದೆ.
ನಿಂತ ನೀರಿನಿಂದ ವಾಸನೆ
ಐಆರ್‌ಬಿ ಕಂಪೆನಿ ಚರಂಡಿ ಕಾಮಗಾರಿ ಪೂರ್ಣಗೊಳಿಸದ್ದರಿಂದ ಅರ್ಧಂಬರ್ಧ ಕಾಮಗಾರಿ ನಡೆಸಿದ ಜಾಗದಲ್ಲಿ ನೀರು ತುಂಬಿದೆ. ಸಂತೆ ಮಾರ್ಕೆಟ್ ಬಳಿಯ ಚರಂಡಿಯ ಒಳಗೆ ನಿಂತ ನೀರಿನಲ್ಲಿ ಕೊಳೆತ ವಸ್ತುಗಳು ಸೇರಿದ್ದು ಕೆಟ್ಟ ವಾಸನೆ ಬರುತ್ತಿದೆ. ಜೋರು ಮಳೆ ಬಂದರೆ ನೀರು ರಸ್ತೆಗೆ ನುಗ್ಗುವ ಅಪಾಯವೂ ಇದೆ.
ಅಪಾಯ ತಪ್ಪಿಸಿ
ಅರೆಬರೆ ಚರಂಡಿ ಕಾಮಗಾರಿಯಿಂದ ಕೆಲವೆಡೆ ಬಾಯ್ದೆರೆದುಕೊಂಡಿದ್ದು, ವಾಹನಗಳ ಧಾವಂತದ ಸಂದರ್ಭ ಓಡಾಡುವವರು ಚರಂಡಿಗೆ ಬೀಳುವ ಸಾಧ್ಯತೆ ಇದೆ. ಮಳೆನೀರು ಹರಿಯುವ ವೇಳೆ ಗುರುತಿಸುವುದೂ ಕಷ್ಟವಾದ್ದರಿಂದ ಸಂಭವನೀಯ ಅಪಾಯ ತಪ್ಪಿಸಬೇಕಿದೆ.
ಕೆಲಸ ಪೂರ್ಣಗೊಳಿಸುವ ಭರವಸೆ
ಸಮಸ್ಯೆಗಳ ಬಗ್ಗೆ ಐಆರ್‌ಬಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಲ್ಲದೇ ಗ್ರಾ.ಪಂ.ಸದಸ್ಯರು ಅಧಿಕಾರಿಗಳ ಬಳಿ ಹೋಗಿ ಸಮಸ್ಯೆ ಕುರಿತು ತಿಳಿಸಿದ್ದಾರೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.
-ಹರೀಶ ಮೊಗವೀರ, ಪಿಡಿಒ ಉಪ್ಪುಂದ ಗ್ರಾ.ಪಂ.
ರಸ್ತೆ ಕೆಸರುಮಯ
ಎಂಬ್ಯಾಕ್‌ವೆುಂಟ್ ನಿರ್ಮಾಣದಿಂದ ಸರ್ವಿಸ್ ರಸ್ತೆ ತುಂಬ ಕಿರಿದಾಗಿದೆ. ಸ್ಥಳಾವಕಾಶದ ಕೊರತೆ ಜತೆಗೆ ಚರಂಡಿಯಲ್ಲಿ ಕೆಸರಿದ್ದು, ಕೆಲವೆಡೆ ರಸ್ತೆಯ ಮೇಲೆ ಕೆಸರು ನೀರು ಹರಿಯುತ್ತಿದೆ. ಇದರಿಂದ ನಾಗರಿಕರಿಗೆ ಓಡಾಟವೇ ಕಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ
Thekkatte: ಕುಂಭಾಶಿಯಲ್ಲಿ ಸಿದ್ಧವಾಗಿದೆ ನಂದಿ ದೇಗುಲದ ಬ್ರಹ್ಮರಥ
Lupus Nephritis: ಲೂಪಸ್ ನೆಫ್ರೈಟಿಸ್ ರೋಗಿಗಳಿಗೆ ಒಂದು ಮಾರ್ಗದರ್ಶಿ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Bharamasagara: ಅರಣ್ಯ ಇಲಾಖೆ ಕಾರ್ಯಾಚರಣೆ; ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.