ಬಿಸಿಲ ಝಳ: ರೈಲಲ್ಲಿ ನಾಲ್ವರು ವೃದ್ಧರ ಸಾವು
Team Udayavani, Jun 12, 2019, 6:10 AM IST
ಝಾನ್ಸಿ: ಉತ್ತರಪ್ರದೇಶದ ಆಗ್ರಾದಿಂದ ಕೊಯಮತ್ತೂರುಗೆ ಕೇರಳ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಹಿರಿಯ ನಾಗರಿಕರು ಬಿಸಿಲ ತಾಪದಿಂದಾಗಿ ಅಸುನೀಗಿದ್ದಾರೆ. ಮತ್ತೂಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇವರೆಲ್ಲರೂ ಕೊಯ ಮತ್ತೂರಿನವರು. ಮೃತದೇಹಗಳನ್ನು ಝಾನ್ಸಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಅನಂತರ ಕೊಯಮತ್ತೂರಿಗೆ ಕಳುಹಿಸಲಾಗಿದೆ.
ಸೋಮವಾರ ಆಗ್ರಾದಿಂದ ಕೊಯಮತ್ತೂರಿಗೆ ಪ್ರಯಾ ಣಿಸು ತ್ತಿದ್ದ ವೇಳೆ ರೈಲಿನಲ್ಲೇ ಪಚ್ಚಯ್ಯ (80), ಬಾಲಕೃಷ್ಣನ್ (67), ಧನಲಕ್ಷ್ಮೀ (74), ಸುಬ್ಬರಾಯಯ್ಯ (71) ಎಂಬವರು ಬಿಸಿಲಿನ ಬೇಗೆಯಿಂದ ತೀವ್ರ ಉಸಿರಾಟದ ತೊಂದರೆ ಅನುಭವಿಸಿದರು. ಬಳಿಕ ಅವರು ಪ್ರಜ್ಞೆ ತಪ್ಪಿ ಬಿದ್ದರು. ಝಾನ್ಸಿ ಆಸ್ಪತ್ರೆಯಲ್ಲಿ ಅವರು ಅಸುನೀಗಿದ್ದಾರೆ ಎಂದು ಪ್ರಕಟಿಸಲಾಯಿತು.
ಅಭಾವ ಇಲ್ಲ!: ಕೇಂದ್ರ ಸರಕಾರವೇ ಕಳೆದ ತಿಂಗಳು ಕರ್ನಾಟಕ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ಸೇರಿದಂತೆ 6 ರಾಜ್ಯಗಳಿಗೆ “ಬರಗಾಲ’ದ ಎಚ್ಚರಿಕೆ ನೀಡಿದ್ದರೂ, ಹೊಸದಾಗಿ ನೇಮಕಗೊಂಡ ಜಲಶಕ್ತಿ ಸಚಿವ ಗಜೇಂದ್ರ ಶೇಖಾವತ್ ಮಾತ್ರ, ಅಂಥ ಪರಿಸ್ಥಿತಿಯೇ ಇಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.