ಆಯುಷ್ಮಾನ್‌ ಚಿಕಿತ್ಸೆಗೆ ಓಡಾಡಿಸುವ ಆರೋಗ್ಯ ಇಲಾಖೆ

ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಜನಪ್ರತಿನಿಧಿಗಳು ಯತ್ನಿಸಬೇಕಿದೆ

Team Udayavani, Jun 12, 2019, 12:05 PM IST

uk-tdy-3..

ಪ್ರಧಾನಿ ಮೋದಿಯವರ ಕನಸಿನ ಈ ಯೋಜನೆ ಜನರಿಗೆ ಮುಟ್ಟಿಸುವಲ್ಲಿ ಜಿಲ್ಲೆಯ ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕಾದ ಅಗತ್ಯವಿದೆ. ಈ ಕುರಿತು ತಿದ್ದುಪಡಿ ಮಾಡಿಸಬೇಕು.

ಹೊನ್ನಾವರ: ಜಗತ್ತಿನ ಅತ್ಯಂತ ದೊಡ್ಡ, ದೇಶದ ಬಹುಪಾಲು ಬಡವರಿಗೆ ವರವಾದ ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಆಯುಷ್ಮಾನ್‌ ಯೋಜನೆಯಡಿ ಚಿಕಿತ್ಸೆ ಪಡೆಯುವುದು ಉತ್ತರಕನ್ನಡ ಜಿಲ್ಲೆಯ ಬಡ, ವಯೋವೃದ್ಧ ಮತ್ತು ಪುಟ್ಟ ಮಕ್ಕಳು, ಬಾಣಂತಿಯರು ಆಯುಷ್ಮಾನ್‌ ಚಿಕಿತ್ಸೆ ಪಡೆಯಲು ಪರದಾಡುವುದು ಕಣ್ಣೀರು ತರಿಸುತ್ತದೆ.

ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರಿದ್ದಾರೆ. ಆರೋಗ್ಯ ಸೂಕ್ಷ್ಮವಾಗಿ ರೋಗಿ ಆಸ್ಪತ್ರೆಗೆ ಬಂದರೆ ಅವರು ಚಿಕಿತ್ಸೆ ನೀಡಬಹುದು, ಸಾಧ್ಯವಿಲ್ಲವಾದರೆ ಯಾವುದೇ ಉನ್ನತ ಆಸ್ಪತ್ರೆಗೆ ಕಳಿಸಬಹುದು. ಭಟ್ಕಳ ಅಥವಾ ಹಳಿಯಾಳ, ಸಿದ್ಧಾಪುರದಂತಹ ಸರ್ಕಾರಿ ಆಸ್ಪತ್ರೆಯಲ್ಲಿ ಸೌಲಭ್ಯವಿಲ್ಲವಾದರೆ ಅವರು 100ಕಿಮೀ ದೂರದ ಕಾರವಾರ ಜಿಲ್ಲಾಸ್ಪತ್ರೆಗೆ ಕಳಿಸುತ್ತಾರೆ. ಇಲ್ಲಿ ತಾಲೂಕು ಆಸ್ಪತ್ರೆಗಿಂತ ಮಿಗಿಲಾದ ವೈದ್ಯರು ಮತ್ತು ಸೌಲಭ್ಯವಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಸಾಧ್ಯವಿಲ್ಲವಾದರೆ ಅವರು 180ಕಿಮೀ ದೂರದ ಮಂಗಳೂರು ವೆನ್‌ಲಾಕ್‌ ಆಸ್ಪತ್ರೆಗೆ ಕಳಿಸುತ್ತಾರೆ. ಅಲ್ಲಿ ಸೌಲಭ್ಯವಿದ್ದರೂ ಎಲ್ಲ ಸರ್ಕಾರಿ ಆಸ್ಪತ್ರೆಗಳಂತೆ ಕಾಳಜಿ ಕಡಿಮೆ. ಅಲ್ಲಿಯ ವೈದ್ಯರು ರಾಜಕಾರಣಿಯೊಬ್ಬರಿಗೆ ಸೇರಿದ ಕೇರಳದ ಖಾಸಗಿ ಆಸ್ಪತ್ರೆಯನ್ನು ಹೆಸರಿಸಿ ಪತ್ರ ಕೊಡುತ್ತಾರೆ ಎಂಬುದಕ್ಕೆ ದಾಖಲೆ ಇದೆ.

ಅನಾರೋಗ್ಯ ಪೀಡಿತ ವ್ಯಕ್ತಿಯೊಬ್ಬ 280ಕಿಮೀ ಪ್ರಯಾಣ ಮಾಡಿ ಮೂರು ಕಡೆ ತಪಾಸಣೆ ಮಾಡಿಸಿಕೊಂಡು, ಅಲ್ಲಿಂದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಪತ್ರ ಪಡೆಯುವಷ್ಟರಲ್ಲಿ ಆತನ ಆಯುಷ್ಯ ಕಡಿಮೆಯಾಗಬಹುದು, ಮುಗಿಯಲೂ ಬಹುದು. ಓಡಾಡಲು ಸಂಗಡ ಇನ್ನೊಬ್ಬರನ್ನು ಕರೆದುಕೊಂಡು ಪರ ಊರಿನಲ್ಲಿ ಆಸ್ಪತ್ರೆ ಹುಡುಕುವುದು ಗ್ರಾಮೀಣ ಜನರಿಗೆ ಕಷ್ಟ. ಅಪಘಾತದಿಂದ ಗಂಭೀರಗಾಯಗೊಂಡ ತುರ್ತು ಸಂದರ್ಭದಲ್ಲಿ ಮಾತ್ರ ನೆರೆ ಜಿಲ್ಲೆಯ ದೊಡ್ಡ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆಯೇ ವಿನಃ ಅರೆಜೀವವಾದವನಿಗೆ ಸಾಧ್ಯವಿಲ್ಲ. ಒಂದು ವರ್ಷದಲ್ಲಿ ಈ ಯೋಜನೆಯಿಂದ ಸಾವಿರಾರು ಜನ ಚಿಕಿತ್ಸೆ ಪಡೆಯದೆ ನಿರಾಸೆಗೊಂಡಿದ್ದಾರೆ. ಸರ್ಕಾರದ ಯಾವ ಯೋಜನೆ ಬಂದರೂ ಎಲ್ಲ ಜಿಲ್ಲೆಯ ಜನರನ್ನು ಅದು ತಲುಪುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸಿಕೊಡುವುದು ಶಾಸಕರ ಜವಾಬ್ದಾರಿ.

ಆರ್ಥಿಕ ಹಿನ್ನೆಲೆ ಇಲ್ಲದೆ ಸಹಕಾರಿ ಸಂಘದ ಸದಸ್ಯನಾದವ ಕೇವಲ 250ರೂ. ತೆತ್ತು ಯಶಸ್ವಿನಿ ಪಡೆದು ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಉತ್ತಮ ಯೋಜನೆ ಕೈಬಿಟ್ಟ ಸರ್ಕಾರ ಬಡವರಿಗೆ ಉಚಿತ, ಉಳಿದವರಿಗೆ ಶೇ. 30ರಿಯಾಯತಿ ಎಂದು ಹೇಳಿ ಓಡಾಡಿಸಿ ಆಯುಷ್ಯ ಕಳೆಯುತ್ತದೆ. ತಾಲೂಕು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಿಲ್ಲವಾದರೆ ಯಾವುದೇ ದೊಡ್ಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಪತ್ರಕೊಟ್ಟರೆ ಬಡವರಿಗೆ ಆಯುಷ್ಮಾನ್‌ ಯೋಜನೆಯಿಂದ ಪ್ರಯೋಜನವಿದೆ. ತನಗೆ ವಿಶ್ವಾಸವಿದ್ದಲ್ಲಿ ದೊಡ್ಡ ಆಸ್ಪತ್ರೆಯಲ್ಲಿ ಸರ್ಕಾರದ ಸೌಲಭ್ಯದೊಂದಿಗೆ ಚಿಕಿತ್ಸೆ ಪಡೆಯುವುದು ಪ್ರಜೆಗಳ ಹಕ್ಕು. ನಾನು ಹೇಳಿದಲ್ಲಿ ಹೋಗಿ ಚಿಕಿತ್ಸೆ ಮಾಡಿಸಿಕೋ ಎಂದು ಹೇಳುವುದು ನ್ಯಾಯ ಸಮ್ಮತವಲ್ಲ. ಅದು ಇಲ್ಲ, ಇನ್ನೊಂದರ ಪ್ರಯೋಜನ ಪಡೆಯುವುದು ಸಾಧ್ಯವಿಲ್ಲ. ಪ್ರಧಾನಿ ಮೋದಿಯವರ ಕನಸಿನ ಈ ಯೋಜನೆಯನ್ನು ಜನರಿಗೆ ಮುಟ್ಟಿಸುವಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡತರಬೇಕಾದ ಅಗತ್ಯವಿದೆ. ಜಿಲ್ಲೆಯ ಶಾಸಕರು, ಮಂತ್ರಿಗಳು ಈ ಕುರಿತು ತಿದ್ದುಪಡಿ ಮಾಡಿಸಬೇಕು. ಇಲ್ಲವಾದರೆ ಹೈಟೆಕ್‌ ಆಸ್ಪತ್ರೆಯ ಹೋರಾಟದ ಜೊತೆ ಈ ಹೋರಾಟವನ್ನು ಯುವಜನತೆ ಆರಂಭಿಸಬಹುದು.

•ಜೀಯು, ಹೊನ್ನಾವರ

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.