ಸರ್ಕಾರಿ ನೌಕರರ ಚುನಾವಣೆ ತುರುಸು
ನಾಳೆ ಬೆಳಗ್ಗೆ 11ರಿಂದ 4ರವರೆಗೆ ಮತದಾನಮತಪತ್ರ-ಅಭ್ಯರ್ಥಿಗಳಿಗೆ ಚಿಹ್ನೆಗೆ ಬದಲಾಗಿ ಹೆಸರು
Team Udayavani, Jun 12, 2019, 1:38 PM IST
ವಿಜಯಪುರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿ
ಜಿ.ಎಸ್. ಕಮತರ
ವಿಜಯಪುರ: ಸರ್ಕಾರಿ ನೌಕರರ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು ಜಿಲ್ಲೆಯ 5 ತಾಲೂಕಿನ 172 ಸ್ಥಾನಗಳಲ್ಲಿ ಈಗಾಗಲೇ 138 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಸ್ಪರ್ಧೆ ಏರ್ಪಟ್ಟಿರುವ 34 ಸ್ಥಾನಗಳಿಗೆ ಜೂ. 13ರಂದು ಮತದಾನ ನಡೆಯಲಿದೆ. ಚುನಾವಣೆ ತುರುಸು ಪಡೆದಿದ್ದು ಅಭ್ಯರ್ಥಿಗಳು ಮತದಾನದ ಅರ್ಹತೆ ಪಡೆದಿರುವ ಮತದಾರರನ್ನು ಓಲೈಸಲು ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ನೌಕರರ ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ.
ಜಿಲ್ಲೆಯ ಅವಿಭಜಿತ ಎಲ್ಲ 5 ತಾಲೂಕುಗಳಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕಗಳ ರಚನೆಗೆ ಚುನಾವಣೆ ನಡೆಯುತ್ತಿದೆ. ಎಲ್ಲ ತಾಲೂಕು ಘಟಕಗಳ ಚುನಾವಣೆಗೆ ಪ್ರತ್ಯೇಕವಾಗಿ ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಸ್ಪರ್ಧೆ ಏರ್ಪಟ್ಟಿರುವ ಸ್ಥಾನಗಳಿಗೆ ಜೂ. 13ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 4ರವರೆಗೆ ಮತದಾನ ನಡೆಯಲಿದೆ. ಮತಪತ್ರಗಳ ಮತದಾನಕ್ಕೆ ವ್ಯವಸ್ಥೆ ಮಾಡಿದ್ದು, ಸಾರ್ವತ್ರಿಕ ಚುನಾವಣೆಯಂತೆ ಅಭ್ಯರ್ಥಿಗಳಿಗೆ ಚಿಹ್ನೆ ಇರದೇ, ಕ್ರಮ ಸಂಖ್ಯೆ ಹಾಗೂ ಅಭ್ಯರ್ಥಿಗಳ ಹೆಸರು ಮಾತ್ರ ಇರಲಿವೆ.
ಜಿಲ್ಲೆಯ ಅವಿಭಜಿತ 5 ತಾಲೂಕುಗಳಲ್ಲಿ ಬಸವನಬಾಗೇವಾಡಿ ತಾಲೂಕಿನಲ್ಲಿರುವ ಎಲ್ಲ 25 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಈ ರೀತಿ ಅವಿರೋಧ ಆಯ್ಕೆ ನಡೆಯುತ್ತಿರುವುದು ಸತತ ಎರಡನೇ ಬಾರಿಗೆ ಎಂಬುದು ಗಮನೀಯ.
ಇದರ ಹೊರತಾಗಿ ಜಿಲ್ಲೆಯ ಇತರೆ 4 ತಾಲೂಕಗಳಲ್ಲಿ ಅವಿರೋಧ ಆಯ್ಕೆಯ ಸ್ಥಾನಗಳನ್ನು ಹೊರತುಡಪಡಿಸಿ, ಸ್ಪರ್ಧೆ ಏರ್ಪಟ್ಟಿರುವ 34 ಸ್ಥಾನಗಳಿಗೆ ಆಯ್ಕೆ ಬಯಸಿ 71 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಾಡಲು 4,979 ಮತದಾರರು ಮತದಾನ ಅರ್ಹತೆ ಪಡೆದಿದ್ದಾರೆ. ಬಸವನಬಾಗೇವಾಡಿ ಹೊರತುಪಡಿಸಿ ಜಿಲ್ಲೆಯ ಅವಿಭಜಿತ 4 ತಾಲೂಕು ಕೇಂದ್ರಗಳಲ್ಲಿ 21 ಮತಗಟ್ಟೆ ಸ್ಥಾಪಿಸಲಾಗಿದೆ.
ವಿಜಯಪುರ ತಾಲೂಕಿನಲ್ಲಿರುವ 62 ಸ್ಥಾನಗಳಲ್ಲಿ
50 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 12
ಸ್ಥಾನಗಳಿಗೆ ಕಣದಲ್ಲಿರುವ 34 ಅಭ್ಯರ್ಥಿಗಳಿಂದ ಸ್ಪರ್ಧೆ ಏರ್ಪಟ್ಟಿದೆ. ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ವಿಜಯಪುರ ತಾಲೂಕಿನಲ್ಲಿ 3,301
ಮತದಾರರಿದ್ದು, ಇವರಿಗೆ ಮತದಾನ ಮಾಡಲು ನಗರ ಸರ್ಕಾರಿ ಉರ್ದು ಶಿಕ್ಷಕರ ತರಬೇತಿ ಕೇಂದ್ರದಲ್ಲಿ 16 ಮತಗಟ್ಟೆ ಸ್ಥಾಪಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನ 24 ಸ್ಥಾನಗಳಲ್ಲಿ 23 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 1 ಸ್ಥಾನಕ್ಕೆ ನಡೆಯುತ್ತಿರುವ ಮತದಾನದ ಸಂದರ್ಭದಲ್ಲಿ ತಮ್ಮ ಹಕ್ಕು ಚಲಾಯಿಸಲು 76 ಮತದಾರರರು ಆರ್ಹತೆ ಪಡೆದಿದ್ದಾರೆ. ಮುದ್ದೇಬಿಹಾಳ ಪಟ್ಟಣದ ವಿ.ಬಿ.ಸಿ. ಪ್ರೌಢ ಶಾಲೆಯಲ್ಲಿ ಮತದಾನಕ್ಕೆ ಮತಗಟ್ಟೆ ಸ್ಥಾಪಿಸಲಾಗಿದೆ.
ಸಿಂದಗಿ ತಾಲೂಕಿನ 25 ಸ್ಥಾನಗಳಲ್ಲಿ 24 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಸ್ಪರ್ಧೆ ಏರ್ಪಟ್ಟಿರುವ ಒಂದು ಸ್ಥಾನಕ್ಕೆ ಇಬ್ಬರು ಆಯ್ಕೆ ಬಯಸಿ ಕಣದಲ್ಲಿದ್ದು 102 ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಸಿಂದಗಿ ಪಟ್ಟಣದಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.
ಇಂಡಿ ತಾಲೂಕಿನಲ್ಲಿರುವ 35 ಸ್ಥಾನಗಳಲ್ಲಿ 19 ಸ್ಥಾನಗಳಿಗೆ ಆವಿರೋಧ ಆಯ್ಕೆ ನಡೆದಿದ್ದು, 16 ಸ್ಥಾನಗಳಿಗೆ ಏರ್ಪಟ್ಟಿರುವ ಸ್ಪರ್ಧೆಯಲ್ಲಿ 33 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 1,500 ಮತದಾರರು ಮತದಾನದ ಅರ್ಹತೆ ಪಡೆದಿದ್ದಾರೆ. ಮತದಾನ ನಡೆಯುವ ಕ್ಷೇತ್ರಗಳಿಗೆ ಮತದಾನಕ್ಕಾಗಿ ಇಂಡಿ ಪಟ್ಟಣದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಮಲ್ಲಯ್ಯನ ಗುಡಿ ಹತ್ತಿರ ಇರುವ ಸರ್ಕಾರಿ ನೌಕರರ ಪತ್ತಿನ ಸಹಕಾರಿ ಸಂಘದಲ್ಲಿ ಒಟ್ಟು 2 ಮತಗಟ್ಟೆ ಸ್ಥಾಪಿಸಲಾಗಿದೆ.
ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ಭರದಿಂದ ಪ್ರಚಾರ ನಡೆಸಿದ್ದು, ರಾಜಕೀಯ ಮಂದಿ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನಡೆಸುವ ಪ್ರಚಾರದ ಮಾದರಿಯಲ್ಲಿ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸಿರುವವರು ಭಾರಿ ಭರವಸೆಗಳನ್ನು ನೀಡತೊಡಗಿದ್ದಾರೆ. ಕೆಲವು ಅಭ್ಯರ್ಥಿಗಳು ಮತದಾರರ ಮನೆಗಳಿಗೆ ತೆರಳಿ ತಮ್ಮನ್ನು ಗೆಲ್ಲಿಸುವಂತೆ ಉಡುಗೊರೆಗಳನ್ನು ಕೊಡುವುದಕ್ಕೂ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಮತ್ತೆ ಕೆಲವು ಅಭ್ಯರ್ಥಿಗಳು ಗೆದ್ದ ನಂತರ ಪ್ರವಾಸ ಕರೆದೊಯ್ಯುವುದು ಸೇರಿದಂತೆ ಇತರೆ ಭರವಸೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಸರ್ಕಾರಿ ನೌಕರರ ಚುನಾವಣೆ ಕೂಡ ರಾಜಕೀಯ ಸಾರ್ವತ್ರಿಕ ಚುನಾವಣೆಗಳನ್ನು ಮೀರಿಸುವಂತೆ ತುರುಸು ಪಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.