ವಸಾಯಿರೋಡ್ ಬಾಲಾಜಿ ಮಂದಿರ: ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ
Team Udayavani, Jun 12, 2019, 4:16 PM IST
ಮುಂಬಯಿ: ವಸಾಯಿ ರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದ ಬಾಲಾಜಿ ಸೇವಾ ಸಮಿತಿಯವರ ಬಾಲಾಜಿ ಮಂದಿರದಲ್ಲಿ ಜಿಎಸ್‌ಬಿ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ ಕಾರ್ಯಕ್ರಮವು ಜೂ. 5ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವೇದಮೂರ್ತಿ ಗಿರಿಧರ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿತು.
ಈ ಸಂದರ್ಭದಲ್ಲಿ ಸಮಿತಿಯ ವರಿಂದ ಭಜನಾ ಕಾರ್ಯಕ್ರಮ ನೆರವೇರಿದವು.
ಮಂಡಳಿಯವರು ಗುರು ವರ್ಯರ ಭಜನೆಗಳನ್ನು ಹಾಡಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡ್ಡೋಡಿ ಪ್ರಕಾಶ್ ಪ್ರಭು, ತಬಲಾದಲ್ಲಿ ವಿನಾಯಕ ಪೈ, ಅಮೇಯ ಪೈ, ಸತೀಶ್ ಕಾಮತ್, ಅವನಿಕಾಂತ್ ಭೋದೆಕರ್, ಪಖ್ವಾಜ್‌ನಲ್ಲಿ ಪ್ರಸಾದ್ ಪ್ರಭು, ಶಶಿಕಾಂತ್ ತಾಬ್ಡೆ ಹಾಗೂ ಅಶೋಕ್ ಶಿಂಧೆ ಮೊದಲಾದವರು ಸಹಕರಿಸಿದರು.
ಅಲಂಕೃತ ಗುರುವರ್ಯರ ಭಾವಚಿತ್ರಕ್ಕೆ ಮತ್ತು ಆರಾಧ್ಯ ದೇವರಾದ ವೆಂಕಟರಮಣ, ಇತರ ಪರಿವಾರ ದೇವರಿಗೆ ಮಹಾಆರತಿ ಬೆಳಗಿಸಲಾಯಿತು.
ಪೂಜಾ ಪ್ರಸಾದವನ್ನು ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಮತ್ತು ಇತರ ಪದಾಧಿಕಾರಿಗಳಿಗೆ ನೀಡಲಾಯಿತು. ಲಕ್ಷ್ಮ¾ಣ್ ರಾವ್ ಅವರು ಪಂಚಕಜ್ಜಾಯ, ಪಾನಕ ಸೇವೆಯಲ್ಲಿ ದೇವೇಂದ್ರ ಭಕ್ತ, ಹಣ್ಣು ಹಂಪಲಿನ ಸೇವೆಯಲ್ಲಿ ಪ್ರಶಾಂತ್ ನಾಯಕ್, ಹಾಲಿನ ಸೇವೆಯಲ್ಲಿ ಗಣೇಶ್ ಪೈ ಪರಿವಾದವರು ಸಹಕರಿಸಿದರು.
ಅನ್ನಸಂತರ್ಪಣೆ
ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಸಮಿತಿಯವರ ವತಿಯಿಂದ ಆಯೋಜಿಸಲಾಗಿತ್ತು.
ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ವಿನಾಯಕ ಎಚ್. ಪೈ ಮತ್ತು ದೇವದಾಸ್ ಭಟ್ ಅವರ ನೇತೃತ್ವದಲ್ಲಿ ಅಲಂಕರಿಸಲ್ಪಟ್ಟ ಗುರುವರ್ಯರ ಭಾವಚಿತ್ರವನ್ನೊಳಗೊಂಡ ಮಂಟಪ ಮತ್ತು ದೇವರ ಮಂಟಪ ನೆರೆದ ಭಕ್ತಾದಿಗಳನ್ನು, ನೂರಾರು ಸಭಿಕರನ್ನು ರಂಜಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.