ಐಎಎಫ್ ಎಎನ್-32 ರಕ್ಷಣಾ ಅಭಿಯಾನಕ್ಕೆ 15 ಪರ್ವತಾರೋಹಿಗಳ ಸಾಥ್
Team Udayavani, Jun 12, 2019, 5:47 PM IST
ಹೊಸದಿಲ್ಲಿ : ಕಳೆದ ಜೂನ್ 3ರಂದು ಅಸ್ಸಾಂ ನ ಜೋರ್ಹಾಟ್ ವಾಯು ನೆಲೆಯಿಂದ ಟೇಕಾಫ್ ಆದ ಅರ್ಧ ತಾಸೊಳಗೆ ನಾಪತ್ತೆಯಾಗಿ ಅರುಣಾಚಾಲ ಪ್ರದೇಶದ ಲಿಪೋ ಸಮೀಪದ ದುರ್ಗಮ, ಕಡಿದಾದ, ಎತ್ತರದ ಪರ್ವತ ಪ್ರದೇಶದಲ್ಲಿ ಪತನಗೊಂಡ IAF AN-32 ವಿಮಾನದ ಅವಶೇಷಗಳು ಪತ್ತೆಯಾದ ತಾಣವನ್ನು ತಲುಪಿ ಬದುಕುಳಿದಿರಬಹುದಾದವರನ್ನು ಪಾರು ಮಾಡುವ ಕಾರ್ಯಾಚರಣೆಯಲ್ಲಿ ಐಎಎಫ್ ತಂಡಕ್ಕೆ 15 ಮಂದಿ ಪರ್ವತಾರೋಹಿಗಳು ಸಾಥ್ ನೀಡುತ್ತಿದ್ದಾರೆ.
ಒಂದು ದಿನದ ಹಿಂದಷ್ಟೇ ವಾಯು ಪಡೆಯ ಎಎನ್-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಲಾಗಿತ್ತು. ಆದರೆ ವಿಮಾನ ಪತನದ ತಾಣಕ್ಕೆ ಇಳಿಯುವ ಐಎಎಫ್ ಮತ್ತು ಸೇನೆಯ ಲಘು ಹೆಲಿಕಾಪ್ಟರ್‌ಗಳ ಯತ್ನ ನಿನ್ನೆ ಮಂಗಳವಾರ ಪೂರ್ತಿ ಕೈಗೂಡಿರಲಿಲ್ಲ. ಅಂತೆಯೇ ಇಂದು ಬುಧವಾರವೂ ಆ ಯತ್ನವನ್ನು ಮುಂದುವರಿಸಲಾಗಿತ್ತು.
ಇಂದು ಬುಧವಾರ ಐಎಎಫ್ ತನ್ನ 9 ರಕ್ಷಣಾ ಸಿಬಂದಿಗಳನ್ನು ಯಶಸ್ವಿಯಾಗಿ ವಿಮಾನ ಅವಶೇಷ ಪತ್ತೆಯಾದ ದುರ್ಗಮ, ಕಡಿದಾದ ಪರ್ವತ ತಾಣದಲ್ಲಿ ಇಳಿಸುವಲ್ಲಿ ಸಫಲವಾಯಿತು.
ಐಎಎಫ್ ತಂಡಕ್ಕೆ ನೆರವಾಗಲು ಮುಂದೆ ಬಂದಿರುವ 15 ಪರ್ವತಾರೋಹಿಗಳಲ್ಲಿ ಕೆಲವರು ಈಗಾಗಲೇ ವಿಮಾನ-ಪತನ ತಾಣವನ್ನು ತಲುಪಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.