ಸಸಿಹಿತ್ಲು ಬೀಚ್: ನದಿ ಕೊರೆತದಿಂದ ಅಳಿವೆಯಲ್ಲಿ ಹಾನಿ
Team Udayavani, Jun 13, 2019, 6:00 AM IST
ಬೀಚ್ ಅಭಿವೃದ್ಧಿ ಸಮಿತಿಯು ನಿರ್ಮಿಸಿದ ಅಂಗಡಿ ಕೋಣೆಯತ್ತ ನುಗ್ಗುತ್ತಿರುವ ನೀರು.
ಸಸಿಹಿತ್ಲು: ಇಲ್ಲಿನ ಸಸಿಹಿತ್ಲು ಬೀಚ್‌ನಲ್ಲಿ ತೀವ್ರ ಹವಾಮಾನದ ವೈಪರಿತ್ಯದಿಂದ ಮುಂಡ ಬೀಚ್‌ನ ಅಳಿವೆ ಯಲ್ಲಿ ಭಾರೀ ನದಿ ಕೊರೆತ ಉಂಟಾಗಿದೆ. ನದಿ ತೀರದ ಹಲವು ಮರಗಳು ನದಿ ಪಾಲಾಗಿದ್ದು ಪಂಚಾಯತ್ ನಿರ್ಮಿಸಿದ ಅಂಗಡಿಗಳು ಅಪಾಯದ ಸ್ಥಿತಿಯಲ್ಲಿವೆ.
ಶಾಂಭವಿ ಮತ್ತು ನಂದಿನಿ ಸಂಗಮದ ಅಳಿವೆ ಪ್ರದೇಶದಲ್ಲಿ ಈ ನದಿ ಕೊರೆತ ಹೆಚ್ಚಾಗಿದೆ. ಪ್ರವಾಸಿಗರ ವಿಹಾರಕ್ಕಾಗಿರುವ ಮರಗಳು ಭೂಮಿ ಬಲ ಕಳೆದುಕೊಂಡು ನದಿಗೆ ಬೀಳುತ್ತಿದೆ. ಕುಳಿತುಕೊಳ್ಳಲು ಹಾಕಲಾಗಿದ್ದ ಬೆಂಚುಗಳು ಸಹ ನದಿಯ ಪಾಲಾಗಿ ಕಡಲಿಗೆ ಸೇರುತ್ತಿವೆ.
ಮಂಗಳವಾರ ರಾತ್ರಿಯಿಂದ ಬೀಚ್‌ನತ್ತ ನೀರು ನುಗ್ಗುತ್ತಿದ್ದು, 10ಕ್ಕೂ ಹೆಚ್ಚು ಗಾಳಿಯ ಮರಗಳು ನೀರಿನ ಸೆಳತಕ್ಕೊಳಗಾಗಿವೆ. ಪಂಚಾಯತ್ ನಿರ್ಮಿಸಿದ ಮೂರು ಅಂಗಡಿ ಕೋಣೆಗಳಲ್ಲಿ ಈಗಾಗಲೇ ಒಂದು ನದಿಯ ಒಡಲಿಗೆ ಸೇರಿದ್ದರೇ, ಈಗ ಮತ್ತೂಂದು ಅಂಗಡಿ ಕೋಣೆಯ ಬುಡದವರೆಗೆ ನೀರು ಹರಿಯುತ್ತಿದೆ.
ಪ್ರವಾಸಿಗರ ಸಂಖ್ಯೆ ಹೆಚ್ಚಳ
ಈ ಸಮಯದಲ್ಲಿ ಬೀಚ್‌ಗೆ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಾಗಿದ್ದು, ಸುಂದರ ವಿಹಾರದ ತಾಣವಾಗಿದ್ದ ಗಾಳಿ ಮರಗಳಿರುವ ಪ್ರದೇಶದಲ್ಲಿ ಬಹಳ ಎಚ್ಚರಿಕೆಯಿಂದ ಪ್ರವಾಸಿಗರು ಸಂಚರಿಸಬೇಕಾದ ಆವಶ್ಯಕತೆ ಇದೆ.
ತಡೆಗೋಡೆಯಿಂದ ರಸ್ತೆಗೆ ಹಾನಿಯಿಲ್ಲ
ಕಳೆದ ಎರಡು ವರ್ಷದ ಹಿಂದೆ ಬೀಚ್‌ನ ಸಮುದ್ರ ಕೊರೆತಕ್ಕೆ ಈ ಭಾಗದಲ್ಲಿ ಶಾಶ್ವತ ತಡೆಗೋಡೆಯನ್ನು ನಿರ್ಮಿಸಿರುವುದರಿಂದ ಬೀಚ್‌ಗೆ ತೆರಳುವ ರಸ್ತೆ ಸಹಿತ ಬೀಚ್ ದ್ವಾರದ ಕಚೇರಿ ಮತ್ತಿತರ ಪಶ್ಚಿಮ ದಿಕ್ಕಿನಲ್ಲಿನ ಜಮೀನಿಗೂ ಯಾವುದೇ ಹಾನಿಯಾಗಿಲ್ಲ.
ಇದೇ ರೀತಿ ಮುಂದುವರಿದ ಕಾಮಗಾರಿಯಾಗಿ ಅಳಿವೆಯಲ್ಲಿಯೂ ಶಾಶ್ವತ ಗೋಡೆಯನ್ನು ನಿರ್ಮಿಸಿದಲ್ಲಿ ಮಾತ್ರ ಬೀಚ್ ಉಳಿಯುವ ಸಾಧ್ಯತೆ ಇದೆ.
ಸರಕಾರದ ಗಮನ ಸೆಳೆಯಲಾಗುವುದು
ಮಾಜಿ ಸಚಿವ ಕೆ.ಅಭಯಚಂದ್ರ ಅವರು ಈ ಹಿಂದೆ ಅಳಿವೆ ಪ್ರದೇಶದಲ್ಲಿ 2 ಕೋ.ರೂ. ವೆಚ್ಚದಲ್ಲಿ ಶಾಶ್ವತ ತಡೆಗೋಡೆಗೆ ನೀಲನಕ್ಷೆಯನ್ನು ತಯಾರಿಸಿ ಸರಕಾರದ ಅನುಮೋದನೆಗೆ ಸಲ್ಲಿಸಿದ್ದರು. ಈಗ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ ಮೂಲಕ ಇದರ ಬಗ್ಗೆ ಗಮನ ಸೆಳೆಯಲು ಪ್ರಯತ್ನ ಮುಂದುವರಿಸಲಗುವುದು.
- ಎಚ್. ವಸಂತ ಬೆರ್ನಾಡ್, ಅಧ್ಯಕ್ಷರು , ಬೀಚ್ ಅಭಿವೃದ್ಧಿ ಸಮಿತಿ, ಸಸಿಹಿತ್ಲು, ಹಳೆಯಂಗಡಿ ಗ್ರಾ.ಪಂ.
ಬ್ರೇಕ್ ವಾಟರ್ ಅಗತ್ಯ
ಅಳವೆಯಲ್ಲಿನ ನೀರಿನ ಒತ್ತಡಕ್ಕೆ ಜೆಟ್ಟಿಯ ಬಳಿ ಕನಿಷ್ಠ ಎರಡು ಬ್ರೇಕ್ ವಾಟರ್ ನಿರ್ಮಿಸಿದಲ್ಲಿ ಅಳಿವೆಯ ನ್ನು ಉಳಿಸಬಹುದು. ನಿರ್ಲಕ್ಷ್ಯ ತೋರಿದಲ್ಲಿ ಮುಂದಿನ ವರ್ಷ ಮುಂಡ ಬೀಚ್ ಎಂಬುದೇ ಇರುವುದಿಲ್ಲ. ಸಂಪೂರ್ಣವಾಗಿ ಕಡಲು ಪಾಲಾಗಲಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಧಿಕಾರಿಗಳು ಕೂಡಲೆ ಸ್ಥಳ ಪರಿಶೀಲನೆ ನಡೆಸಬೇಕು.
- ಚಂದ್ರಕುಮಾರ್ ಸದಸ್ಯರು, ಹಳೆಯಂಗಡಿ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
MUST WATCH
ಹೊಸ ಸೇರ್ಪಡೆ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.