ಆರ್ಟ್ ವಾಲ್ ಆಫ್ ರಘುರಾಜಪುರ
ಗೋಡೆಗಳ ಮೇಲೆ ಸುಂದರ ಕಲಾಕೃತಿಗಳು!
Team Udayavani, Jun 13, 2019, 5:00 AM IST
ಈ ಊರಿನ ಮನೆಗಳ ಮೇಲೆ ಬಣ್ಣ ಬಣ್ಣದ ಚಿತ್ತಾರ! ಇಲ್ಲಿನ ಮನೆಗಳೆೆಲ್ಲಾ ಸುಂದರವಾದ ಕಲಾಕೃತಿಗಳಾಗಿ ಕಂಗೊಳಿಸುತ್ತವೆ. ಈ ಗ್ರಾಮದ ತುಂಬೆಲ್ಲಾ ಕಲಾವಿದರ ದಂಡೇ ಕಂಡು ಬರುತ್ತದೆ.
ಪುರಾಣ ಚಿತ್ರಗಳು
ನಾವು ಒರಿಸ್ಸಾ ರಾಜ್ಯದ ಪುರಿಯಿಂದ ಕೇವಲ ಹತ್ತು ಕಿಲೋಮೀಟರ್ ದೂರದಲ್ಲಿರುವ ರಘುರಾಜಪುರದಲ್ಲಿ ನೋಡಬಹುದು. ಇದು ಕುಗ್ರಾಮವಾದರೂ ಸಹ ಕಲಾಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಊರಿನಲ್ಲಿ ಸುಮಾರು 120 ಮನೆಗಳಿವೆ. ಎಲ್ಲಾ ಮನೆಗಳ ಹೊರಗೂ ಒಳಗೂ ಸಹ ಸುಂದರ ಕೈಬರಹದ ಚಿತ್ರಕಲೆಗಳು ಎಲ್ಲರ ಗಮನ ಸೆಳೆಯುತ್ತವೆ. ಎಲ್ಲಾ ಮನೆಗಳಲ್ಲಿಯೂ ಚಿತ್ರಗಳು ರೂಪುಗೊಳ್ಳುತ್ತಿರುತ್ತವೆ. ಪಟಚಿತ್ರ ಇಲ್ಲಿನ ಪ್ರಮುಖಕಲೆಯಾಗಿದೆ. ಪ್ರತಿ ಮನೆಯ ಗೋಡೆಗಳು ಮಹಾಭಾರತ ಮತ್ತು ರಾಮಾಯಣದ ಕಥೆಗಳನ್ನು ಚಿತ್ರಗಳ ಮೂಲಕ ಸಾರಿ ಹೇಳುತ್ತವೆ!
ಪ್ರತಿಯೊಬ್ಬರೂ ಚಿತ್ರಕಲಾವಿದರು!
ಇಲ್ಲಿರುವ ನೂರಕ್ಕೂ ಹೆಚ್ಚು ಕುಟುಂಬದವರು ಹಳ್ಳಿಯ ಎರಡು ಬೀದಿಗಳಲ್ಲಿರುವ ಮನೆಗಳನ್ನೇ ತಮ್ಮ ಚಿತ್ರಕಲೆಯನ್ನು ಪ್ರದರ್ಶಿಸುವ ಅಂಗಡಿಯನ್ನಾಗಿ ಪರಿವರ್ತಿಸಿಕೊಂಡಿರುವುದು ಇಲ್ಲಿನ ವಿಶೇಷ. ಊರಿನ ಗಂಡಸರು, ಮಹಿಳೆಯರು ಮತ್ತು ಮಕ್ಕಳೂ ಸಹ ಚಿತ್ರಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಇವರು ಕಾಗದ, ಮನೆಯ ಗೋಡೆ, ಮರ, ಕೊಬ್ಬರಿ, ಇಸ್ಪಿಟ್ ಎಲೆ, ಖಾಲಿ ಶೀಷೆ, ಮರದ ಎಲೆ, ಬಟ್ಟೆ… ಹೀಗೆ ಸಿಕ್ಕ ಸಿಕ್ಕ ವಸ್ತುಗಳ ಮೇಲೆಲ್ಲಾ ಕಲೆಯನ್ನು ಅರಳಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರತಿಯೊಬ್ಬರೂ ಚಿತ್ರಕಲಾವಿದರು.
“ಪಾರಂಪರಿಕ ಹಳ್ಳಿ’ ಬಿರುದು
ಪ್ರತಿ ಮನೆಗಳೂ ಸಹ ಚಿತ್ರಪಟಗಳ ಗ್ಯಾಲರಿಯಾಗಿ ಕಂಗೊಳಿಸುತ್ತವೆ. 2000ನೇ ಇಸವಿಯಲ್ಲಿ ಈ ಹಳ್ಳಿಯನ್ನು ಗುರುತಿಸಿದ ಸರ್ಕಾರ ಇದನ್ನು ದೇಶದ ಮೊದಲ ಪಾರಂಪರಿಕ ಹಳ್ಳಿ ಎಂದು ಕರೆದು ಇದನ್ನು ಕಲಾಗ್ರಾಮವನ್ನಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿ, ಯಶ ಕಂಡಿದೆ. ಹಲವು ವರ್ಷಗಳ ಹಿಂದೆ ತುಂಬಾ ಸಂಕಷ್ಟದ ಸಮಯದಲ್ಲಿ ಇಲ್ಲಿನ ಜನರೆಲ್ಲಾ ಕಲೆಯನ್ನು ಕೈ ಬಿಟ್ಟು ವ್ಯವಸಾಯ ಮಾಡಲು ನಿರ್ಧರಿಸಿ, ಸ್ವಲ್ಪ ಕಾಲ ಕೃಷಿಗೆ ಮೊರೆ ಹೋಗಿದ್ದರು. ಆದರೆ ಅವರ ಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ ಮತ್ತೆ ಅವರೆಲ್ಲರೂ ಕಲೆಯನ್ನೇ ಕೈ ಹಿಡಿದರು.
– ದಂಡಿನಶಿವರ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.