ಮಳೆ ಬಂದು ಹೆದ್ದಾರಿಹೋಕರು ಕಂಗಾಲು!
Team Udayavani, Jun 13, 2019, 6:10 AM IST
ಮಳೆಗಾಲ ಇನ್ನೂ ಆರಂಭವಾಗಿಲ್ಲ. ಬಿದ್ದ ಒಂದೆರಡು ಮಳೆಗೇ ಹೆದ್ದಾರಿ ಅನಾಹುತಗಳ ಸರಮಾಲೆಯಾಗಿದೆ. ಈಗಲೇ ಸೂಕ್ತ ಕ್ರಮಕೈಗೊಂಡಲ್ಲಿ ಮುಂಬರುವ ಅನಾಹುತ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಉದಯವಾಣಿ ನಡೆಸಿದ ರಿಯಾಲಿಟಿ ಚೆಕ್ ಹೀಗಿದೆ.
ಕುಂದಾಪುರ: ಬಂದದ್ದಿಲ್ಲಿ ಇನ್ನೂ ಸಣ್ಣಗಿನ ಎರಡು ಮಳೆ. ಅಷ್ಟಕ್ಕೆ ಹೆದ್ದಾರಿಯಲ್ಲಿ ಸಮಸ್ಯೆಗಳ ಸಾಲು ಕಾಣಿಸತೊಡಗಿದೆ. ನೀರು ಹೋಗುವ ವ್ಯವಸ್ಥೆಗಳಿಲ್ಲದೇ ಹೆದ್ದಾರಿಹೋಕರು ಕಂಗಾಲಾಗಿದ್ದಾರೆ. ಸರಣಿ ಅಪಘಾತಗಳು ದಾಖಲಾಗತೊಡಗಿವೆ.
ನಾವುಂದ
ನಾವುಂದ, ಉಪ್ಪುಂದ, ಕಿರಿಮಂಜೇಶ್ವರ ಮೊದಲಾದೆಡೆ ರಸ್ತೆ ಬದಿಯಲ್ಲಿ ನೀರು ನಿಂತಿದ್ದು ನೀರಿನ ಹರಿವಿಗೆ ಅನುವು ಮಾಡಿಕೊಡದಿದ್ದಲ್ಲಿ ರಸ್ತೆ ಬದಿಯ ಮನೆಗಳ ಅಂಗಳಕ್ಕೆ ನೀರು ಹರಿಯಲಿದೆ. ಕಳೆದ ವರ್ಷ ಇಂತಹುದೇ ದುರ್ಘಟನೆಗಳು ನಡೆದಿದ್ದವು.
ಶಾಸಿŒ ಸರ್ಕಲ್
ಫ್ಲೈಓವರ್ ಕಾಮಗಾರಿಯಂತೂ ಆಗಿಲ್ಲ. ಇತ್ತ ಚರಂಡಿಯೂ ಆಗಿಲ್ಲ. ಸರ್ವಿಸ್ ರಸ್ತೆಯೂ ಗೊಂದಲದಲ್ಲಿದೆ. ಆದ್ದರಿಂದ ಇಲ್ಲಿ ಚರಂಡಿಯಿಲ್ಲದೇ ಮಳೆನೀರು ರಸ್ತೆಯಲ್ಲೇ ಹರಿಯುತ್ತದೆ. ತಾಲೂಕು ಪಂಚಾಯತ್ ಕಚೇರಿ, ಭಂಡಾರ್‌ಕಾರ್ಸ್ ಕಾಲೇಜಿಗೆ ಹೋಗುವ ರಸ್ತೆಗಳೂ ನೀರಿನಿಂದ ಆವೃತವಾಗಿವೆ. ಮಳೆ ನೀರು ಆವಿಯಾಗುವವರೆಗೆ ಕಾಯುವುದೇ ಕೆಲಸವಾಗಿದೆ ವಿನಾ ಸಂಬಂಧಪಟ್ಟ ಇಲಾಖೆಯವರಾಗಲೀ, ಪುರಸಭೆಯಾಗಲೀ ಈ ಕುರಿತು ಗಮನ ಹರಿಸಿದಂತಿಲ್ಲ.
ಸಂಗಂ
ಕೆಎಸ್‌ಆರ್‌ಟಿಸಿ ಬಸ್ ಸ್ಟಾಂಡ್‌ವರೆಗೆ ಫ್ಲೈ ಓವರ್‌ನ ಕಾಮಗಾರಿ ಜಾಗದಲ್ಲಿ ನೀರು ಅಲ್ಲಲ್ಲಿ ನಿಲ್ಲುತ್ತದೆ. ಕೆಎಸ್‌ಆರ್‌ಟಿಸಿ ಸಮೀಪ, ಸಂಗಂವರೆಗೂ ಅಲ್ಲಲ್ಲಿ ನೀರು ರಸ್ತೆ ಬದಿ ನಿಲ್ಲುತ್ತದೆ. ಸಂಗಂನಲ್ಲಿ ಎಪಿಎಂಸಿ ಸಮೀಪ ಹೆದ್ದಾರಿ ಕಾಮಗಾರಿಯ ಗುತ್ತಿಗೆ ವಹಿಸಿಕೊಂಡ ಐಆರ್‌ಬಿ ಸಂಸ್ಥೆ ಚರಂಡಿ ಮಾಡಿದೆ. ಇತರೆಡೆ ಇನ್ನಷ್ಟೇ ಆಗಬೇಕಿದೆ.
– ಲಕ್ಷ್ಮೀ ಮಚ್ಚಿನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Udupi: ಕೊಂಕಣ ರೈಲು ವಿಲೀನಕ್ಕೆ ರೈಲ್ವೆ ಸಚಿವರಿಂದ ಸಹಮತ: ಕೋಟ ಶ್ರೀನಿವಾಸ ಪೂಜಾರಿ
Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು
Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.