ಕಡತದಲ್ಲೇ ಉಳಿದ ವೀರಮಲಕುನ್ನು ಪ್ರವಾಸಿ ಯೋಜನೆ


Team Udayavani, Jun 13, 2019, 6:08 AM IST

KADATA

ಕಾಸರಗೋಡು: ಘೋಷಿತ ಯೋಜನೆ ಗಳೆಲ್ಲವೂ ಸಾಕಾರಗೊಂಡಿದ್ದಲ್ಲಿ ಕಾಸರಗೋಡು ಜಿಲ್ಲೆಯ ಛಾಯೆಯೇ ಬದಲಾಗುತ್ತಿತ್ತು. ದುರಂತ ವೆಂದರೆ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿ ಸಿದ ಹಾಗೂ ಘೋಷಿತ ಯೋಜನೆಗಳೆಲ್ಲವೂ ಕಡತದಲ್ಲೇ ಉಳಿದುಕೊಳ್ಳುವುದರಿಂದ ಇಂದೂ ಈ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯ ಯಾದಿಯಲ್ಲಿ ಖಾಯಂ ಸ್ಥಾನ ಪಡೆದಿದೆ.

ವೀರಮಲಕುನ್ನು ಪ್ರವಾಸಿ ಯೋಜನೆಯೂ ಈ ಸಾಲಿಗೆ ಸೇರಿದೆ. ಜಿಲ್ಲೆಯ ಕನಸಿನ ಯೋಜನೆಯಾಗಿದ್ದ ವೀರ ಮಲಕುನ್ನು ಪ್ರವಾಸಿ ಯೋಜನೆಗೆ ಅಗತ್ಯದ ಭೂ ಹಸ್ತಾಂತರ ವಿಳಂಬವಾಗುತ್ತಿರುವುದರಿಂದ ಕಡತದಲ್ಲೇ ಉಳಿದುಕೊಳ್ಳುವಂತಾಗಿದೆ. ಸುಮಾರು ಒಂದು ಕೋಟಿ ರೂ. ಯೋಜನೆ ರೂಪುರೇಷೆ ತಯಾರಾಗಿದ್ದರೂ ಯೋಜನೆ ಸಾಕಾರಗೊಳ್ಳಲು ಭೂ ಹಸ್ತಾಂತರ ಅಡ್ಡಿಯಾಗಿ ನಿಂತಿದೆ. ಅಲ್ಲದೆ ಇಚ್ಛಾಶಕ್ತಿಯ ಕೊರತೆಯೂ ಇದೆ.

ಕಂದಾಯ ಮತ್ತು ಅರಣ್ಯ ಇಲಾಖೆಯ ಸ್ವಾಧೀನದಲ್ಲಿರುವ ವೀರಮಲಕುನ್ನು ಪ್ರದೇಶದ 15 ಎಕ್ರೆ ಸ್ಥಳದಲ್ಲಿ ಪ್ರವಾಸಿ ಯೋಜನೆ ಸಾಕಾರಗೊಳಿಸಲು ಯೋಜಿಸಲಾಗಿದೆ. ಯೋಜನೆ ಸ್ಥಾಪಿಸಲು ಉದ್ದೇಶಿಸಿದ ಸ್ಥಳ ಪ್ರವಾಸೋದ್ಯಮ ಇಲಾಖೆಗೆ ಲೀಸ್‌ ಅಥವಾ ಯೋಜನೆಯನ್ನು ಆರಂಭಿಸಲು ಅನುಮತಿ ನೀಡಿದಲ್ಲಿ ಮಾತ್ರವೇ ಈ ಯೋಜನೆ ಸಾಕಾರಗೊಳ್ಳಬಹುದು.

ಅಂತಿಮ ತೀರ್ಮಾನವಿಲ್ಲ

ಈ ಸಂಬಂಧವಾಗಿ ಶಾಸಕ ಎಂ. ರಾಜ ಗೋಪಾಲನ್‌ ನೇತೃತ್ವದಲ್ಲಿ ಸಚಿವ ಮಟ್ಟದ ಚರ್ಚೆಗಳು ನಡೆದಿñದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತು ಯೋಜನೆ ಆರಂಭಿಸಲು ಅಗತ್ಯವಾದ ಕ್ರಮಗಳಿಗೆ ಪ್ರಕ್ರಿಯೆ ಆರಂಭಿಸಲಾಗಿತ್ತು. ಆದರೆ ಭೂ ಹಸ್ತಾಂತರದ ಬಗ್ಗೆ ಅಂತಿಮ ತೀರ್ಮಾನ ಸಾಧ್ಯವಾಗದಿರುವುದರಿಂದ ಯೋಜನೆ ಪ್ರಗತಿಗೆ ಹಿನ್ನಡೆಯುಂಟಾಯಿತು. ಸಂಬಂಧಪಟ್ಟವರು ಇಚ್ಛಾಶಕ್ತಿ ತೋರದಿದ್ದಲ್ಲಿ ಈ ಯೋಜನೆ ಕೂಡ ಕಡತಕ್ಕೆ ಮಾತ್ರವೇ ಸೀಮಿತ ವಾಗಿ ಉಳಿಯಲಿದೆ. ಇದೇ ಸಂದರ್ಭದಲ್ಲಿ ವೀರಮಲಕುನ್ನು ಪ್ರದೇಶದ ತಟದಲ್ಲಿ ಖಾಸಗಿ ವ್ಯಕ್ತಿಗಳು ಮಣ್ಣು ತೆಗೆಯುತ್ತಿರುವುದರಿಂದ ವೀರಮಲಕುನ್ನು ಅಸ್ತಿತ್ವಕ್ಕೆ ಬೆದರಿಕೆಯಾಗಿದೆ.

ಚಾರಣಿಗರ ಅಚ್ಚು ಮೆಚ್ಚಿನ ಗಿರಿ ಪ್ರದೇಶ

ವೀರಮಲಕುನ್ನು ಕಾಸರಗೋಡು ಜಿಲ್ಲೆಯ ಪ್ರವಾಸಿ ಆಕರ್ಷಣೆ. ನೀಲೇಶ್ವರದ ಚೆರುವತ್ತೂರಿನ ಸಮೀಪವಿರುವ ವೀರಮಲಕುನ್ನು ಬೆಟ್ಟ ಪ್ರದೇಶ ಚಾರಣಿಗರ ಅಚ್ಚು ಮೆಚ್ಚಿನ ಗಿರಿ ಪ್ರದೇಶ. 18ನೇ ಶತಮಾನದ ಡಚ್ಚರ ಕೋಟೆ ಇರುವ ವೀರಮಲ ಇತಿಹಾಸದ ಪುಟಗಳನ್ನು ತೆರೆದಿಡುತ್ತದೆ. ಕಾರ್‍ಯಾಂಗೋಡು ಹೊಳೆ ತೇಜಸ್ವಿನಿ ನದಿಯ ವೀರಮಲ ಬೆಟ್ಟದ ತಟ ಪ್ರದೇಶವನ್ನು ಹಾದು ಹೋಗುತ್ತದೆ. ರಾ.ಹೆ. 66ರ ಸಮೀಪವಿರುವ ವೀರಮಲ ಐತಿಹಾಸಿಕವಾಗಿಯೂ ವಾಣಿಜ್ಯ ವ್ಯಾಪಾರ ವಹಿವಾಟು ಹೊಂದಿದ್ದ ಪ್ರದೇಶವಾಗಿತ್ತು. ಚೆರವತ್ತೂರು ಪೇಟೆಯು ಕಾಂಞಂಗಾಡಿನಿಂದ 16 ಕಿ.ಮಿ. ದೂರವಿದ್ದು, ಬೇಕಲ ಕೋಟೆಯಿಂದ 29 ಕಿ.ಮೀ. ದೂರವಿದೆ. ಪ್ರಸ್ತುತ ರಾಜ್ಯ ಸರಕಾರವು ವೀರಮಲ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಿದೆ. ಜಿಲ್ಲೆಯ ಐತಿಹಾಸಿಕ ಕೋಟೆ ಕೊತ್ತಲಗಳು, ಪುರಾಣ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳು ಸಹಿತ ಜಿಲ್ಲೆಯ ಹಿನ್ನೀರ ನದಿಗಳು ಪ್ರವಾಸಿ ಆಕರ್ಷಣೆಯಾಗಿವೆೆ.

– ಒಂದು ಕೋಟಿ ರೂ.ಯೋಜನೆ

ಭೂ ಹಸ್ತಾಂತರ ಅಡ್ಡಿ

– ಖಾಸಗಿಯವರಿಂದ ಭೂ ನಾಶ

ಟೂರಿಸಂ ಸರ್ಕ್ನೂಟ್

ನೀಲೇಶ್ವರ ನಗರಸಭೆ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್‌, ಪಿಲಿಕೋಡ್‌, ಚೆರುವತ್ತೂರು ಗ್ರಾಮ ಪಂಚಾಯತ್‌ಗಳಲ್ಲಿನ ಪ್ರವಾಸಿ ಸಾಧ್ಯತೆಗಳನ್ನು ಶೋಧಿಸಿ, ಟೂರಿಸಂ ಸರ್ಕ್ನೂಟ್ ಒಳಗೆ ಸೇರ್ಪಡೆ ಗೊಳಿಸಲಾಗುವುದು. ಕೇಂದ್ರ- ರಾಜ್ಯ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಮುನ್ನಡೆಸಲು ಉದ್ದೇಶಿಸಲಾಗಿದೆ.
– ಎಂ. ರಾಜಗೋಪಾಲನ್‌, ತ್ರಿಕ್ಕರಿಪುರ ಶಾಸಕ.
– ಪ್ರದೀಪ್‌ ಬೇಕಲ್

ಟಾಪ್ ನ್ಯೂಸ್

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Chrmadi-Ghat

Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ

1-horoscope

Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

Kukke-Subhramanaya

Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.