ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಅಲ್ಪ ಏರಿಕೆ: ರೇಷನಿಂಗ್ ಕೈ ಬಿಡುವ ಸಾಧ್ಯತೆ
Team Udayavani, Jun 13, 2019, 5:00 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ನೇತ್ರಾವತಿ ಜಲಾನಯನ ವ್ಯಾಪ್ತಿಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರಿಗೆ ನೀರು ಉಣಿಸುವ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಬುಧವಾರ 5 ಸೆಂ.ಮೀ. ನಷ್ಟು ಏರಿಕೆಯಾಗಿದೆ.
ಸೋಮವಾರ ಸಂಜೆ ವೇಳೆಗೆ ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 2.10 ಸೆಂ.ಮೀ. ಇತ್ತು. ಮಂಗಳವಾರ ದಿನಪೂರ್ಣ ಪಂಪಿಂಗ್ ಮಾಡಿದರೂ ಬಳಿಕ ಸಂಜೆಯ ವೇಳೆ ಡ್ಯಾಂನಲ್ಲಿ ನೀರಿನ ಮಟ್ಟ 2.20 ಸೆಂ.ಮೀ. ಆಗಿತ್ತು. ಬುಧವಾರ ಸಂಜೆ ವೇಳೆಗೆ 2.25 ಸೆಂ.ಮೀ.ನಷ್ಟು ನೀರು ಏರಿಕೆಯಾಗಿದೆ.
ರೇಷನಿಂಗ್ ಸ್ಥಗಿತ ಅಥವಾ ಪರಿಷ್ಕರಣೆ ಬಗ್ಗೆ ಗುರುವಾರ ಜಿಲ್ಲಾಡಳಿತದ ಜತೆಗೆ ಪಾಲಿಕೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ನೀರಿನ ಪ್ರಮಾಣ ಏರಿಕೆ ಮತ್ತು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರೇಷನಿಂಗ್ ನಿಯಮ ಕೈಬಿಡುವ ಸಾಧ್ಯತೆ ಇದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.