ಸಾಹಿತ್ಯದಲ್ಲಿ ಹೊಸ ಪರಂಪರೆ ಆರಂಭ
ವಾಟ್ಸ್‌ಆ್ಯಪ್ ಕವನಗಳು ಗಂಭೀರವಾಗಿರಲಿ: ಕಸಾಪ ಜಿಲ್ಲಾ ಅಧ್ಯಕ್ಷೆ ಬಾ.ಹ. ರಮಾಕುಮಾರಿ
Team Udayavani, Jun 13, 2019, 5:26 PM IST
ತುಮಕೂರು ನಗರದ ಕನ್ನಡ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕವಿ ಹೃದಯಗಳ ಸಂಗಮ - 2019, ಕವಿಗೋಷ್ಠಿಯನ್ನು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಉದ್ಘಾಟಿಸಿದರು.
ತುಮಕೂರು: ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಜಾಗತೀಕರಣ- ಉದಾರೀಕರಣದ ನಂತರದ ಕಾಲಘಟ್ಟದಲ್ಲಿ ಸಾಹಿತ್ಯ ಕ್ಷೇತ್ರ ಹೊಸ ಹೊಸ ಪರಂಪರೆಯನ್ನು ಹುಟ್ಟು ಹಾಕಿದೆ. ಈ ಕ್ಷೇತ್ರವು ಬದಲಾದ ಹೊಸ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಹೇಳಿದರು.
ನಗರದ ಕನ್ನಡ ಭವನದಲ್ಲಿ ಸ್ನೇಹ ಸಂಗಮ ಸಾಹಿತ್ಯ ಬಳಗ ಜಿಲ್ಲಾ ಶಾಖೆಯ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಕವಿ ಹೃದಯಗಳ ಸಂಗಮ- 2019 ಕವಿಗೋಷ್ಠಿ, ಬಳಗದ ವಾರ್ಷಿಕೋತ್ಸವ, ಕವನ ಸಂಕಲನ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾ ರಂಭವನ್ನು ಉದ್ಘಾಟಿಸಿದ ಅವರು ಮಾತನಾಡಿ, ಸಾಹಿತ್ಯದ ಹೊಸ ಸ್ವರೂಪ ಎಂಬಂತೆ ವಾಟ್ಸ್‌ಆ್ಯಪ್ ಕವನಗಳು ಹೆಚ್ಚಾಗುತ್ತಿವೆ. ಇದು ಸುಲಭದ ಮಾರ್ಗವೂ ಆಗಿದೆ. ಅದರೆ, ವಾಟ್ಸ್‌ಆ್ಯಪ್ ಮೂಲಕ ಮೂಡಿಬರುವ ಕವನಗಳು ಗಂಭೀರವಾಗಿರಬೇಕು. ಸಾಮಾಜಿಕ ನೆಲೆಯಲ್ಲಿ ನಿಂತು ನೋಡುವಂತಿರಬೇಕು. ಅದು ಎಲ್ಲರಿಗೂ ಒಪ್ಪುವಂತಹ ಹಾಗೂ ವಿಮರ್ಶೆಗೂ ಒಳಪಡುವಂತಹ ನಿಟ್ಟಿನಲ್ಲಿಯೇ ಇರಬೇಕು ಎಂದು ಹೇಳಿದರು.
ಕವನ ರಚನೆಯಲ್ಲಿ ಶಿಸ್ತು ಇರಲಿ: ತಮ್ಮಲ್ಲಿಯೇ ಒಂದು ಶಿಸ್ತು ರೂಢಿಸಿಕೊಂಡು ಕವನಗಳನ್ನು ರಚಿಸ ಬೇಕು. ಹೀಗಾದಾಗ ವಾಟ್ಸ್‌ಆ್ಯಪ್ ಕವನಗಳು ಸಾಹಿತ್ಯ ಕ್ಷೇತ್ರಕ್ಕೆ ಒಂದು ದೊಡ್ಡ ಕೊಡುಗೆಯಾಗುತ್ತದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಅವುಗಳನ್ನು ಸಂಗ್ರಹಿಸಿ ಸಂಕಲನ ಮಾಡುವ ನಿಟ್ಟಿನಲ್ಲಿಯೂ ಯೋಜನೆಗಳು ಹರಿಯಬೇಕು ಎಂದು ತಿಳಿಸಿದರು.
ಸಾಹಿತ್ಯ ಕ್ಷೇತ್ರವನ್ನು ಸದೃಢಗೊಳಿಸಿ: ಗೋಕಾಕ್ ಸಿರಿಗನ್ನಡ ಮಹಿಳಾ ವೇದಿಕೆಯ ರಾಜ್ಯ ಉಪಾಧ್ಯಕ್ಷೆ ರಜನಿ ಅಶೋಕ್ ಮಾತನಾಡಿ, ಕಾವ್ಯ ವಚನ ಮಾಡು ವಾಗ ವ್ಯಾಕರಣ ಮತ್ತು ಅಕ್ಷರಗಳನ್ನು ತಪ್ಪಿಲ್ಲದ ರೀತಿಯ ಉಚ್ಚರಿಸಬೇಕು. ಸಾಹಿತ್ಯದ ಮೂಲಕ ನಾವು ಸಮಾಜಕ್ಕೆ ಏನನ್ನಾದರೂ ಕೊಡುವಂತಿರಬೇಕು. ಆತ್ಮ ಮತ್ತು ಶರೀರವನ್ನೂ ಗ್ರಹಿಸಿ ಕವನವನ್ನು ಬರೆಯ ಬೇಕು. ಆ ಮೂಲಕ ಈ ಕ್ಷೇತ್ರವನ್ನು ಮತ್ತಷ್ಟು ಸದೃಢಗೊಳಿಸಬೇಕಿದೆ ಎಂದು ಹೇಳಿದರು.
ಕವಿಯಾದವರು ತಾವು ಬದುಕಿನಲ್ಲಿ ಅನುಭವಿಸಿದ ಅನುಭವಗಳನ್ನು ಸುಂದರವಾದ ಪದಪುಂಜಗಳ ಮೂಲಕ ಕಟ್ಟಿಕೊಡಬೇಕು. ಹಾಗೇ ಕಟ್ಟಿದ ಕಾವ್ಯಕೃತಿ ಗಳನ್ನು ಕವಿಯನ್ನು ಸಾರ್ವಕಾಲಿಕವಾಗಿ ಬಿಂಬಿಸುತ್ತಾ ಹೋಗುತ್ತವೆ. ಕವಿ ಬರೆದ ಕವಿತೆ ಸಾರ್ಥಕತೆ ಪಡೆಯುವುದು ಅದು ಸಹೃದಯರನ್ನು ತಲುಪಿದಾಗ ಮಾತ್ರ. ಆದ್ದರಿಂದ ಕವಿಯಾದವನು ಸಹೃದಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆಯಬೇಕು ಎಂದು ತಿಳಿಸಿದರು.
ಕಲಿಕಾ ಮನಸ್ಸು ಇರಬೇಕು: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಿಟೀಲು ವಾದಕ ಹಾಗೂ ಕವಿ ಜಿ.ಎನ್.ಶ್ಯಾಮಸುಂದರ್ ಮಾತನಾಡಿ, ಕವಿಯ ಮನಸ್ಸು ಹಕ್ಕಿಯ ರೆಕ್ಕಿಯಿದ್ದಂತೆ, ಕಲಿಕೆ ಎಂಬುಂದು ಸಾಗರದಷ್ಟು ಇರುತ್ತದೆ. ಆದರೆ, ಕಲಿಕಾ ಮನಸ್ಸು ಇರಬೇಕು. ಪದ ಬಳಕೆಯ ಬಗ್ಗೆ ಕವಿಗಳು ಅತ್ಯಂತ ಎಚ್ಚರಿಕೆ ವಹಿಸಬೇಕು. ಸಾಮಾಜಿಕ ಪ್ರಜ್ಞೆ ಇರಬೇಕು, ಓದುಗನ ಮನಸ್ಸಿಗೆ ತಟ್ಟುವ ರೀತಿಯಲ್ಲಿ ಕವನಗಳು ಇರಬೇಕು ಹಾಗೂ ಇಂತಹ ಅವಕಾಶಗಳನ್ನು ಕೊಟ್ಟಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ ಎಂದು ತಿಳಿಸಿದರು.
ಹೊಸ ಬೆಳವಣಿಗೆಗೆ ನಾಂದಿ: ರತ್ಮಬಡವನಹಳ್ಳಿ ಮಾತನಾಡಿ, ಸ್ನೇಹ ಸಂಗಮದಂತೆ ಸಾಹಿತ್ಯದ ಒಲವು ಇರುವವರು ಒಂದು ಕಡೆ ಸೇರುವುದು ಅತ್ಯಂತ ಸಂತಸದ ವಿಚಾರವಾಗಿದೆ. ಮನೆಗಳಲ್ಲಿಯೇ ಇಂದು ವಿಷಯಗಳನ್ನು ಹಂಚಿಕೊಳ್ಳುವ ವಾತಾವರಣ ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ಸಾಹಿತ್ಯಾಸಕ್ತರು ಒಂದು ಕಡೆ ಸೇರಿ ಚರ್ಚೆ ಮಾಡುವುದು ಹೊಸ ಬೆಳವಣಿಗೆಗೆ ನಾಂದಿಯಾಗಲಿದೆ ಎಂದರು.
ಜಿಲ್ಲೆಗೆ ಹೆಮ್ಮೆಯ ವಿಚಾರ: ಸ್ನೇಹ ಸಂಗಮ ಸಂಸ್ಥಾಪಕ ಚಂದ್ರುನಿಟ್ಟೂರು ಮಾತನಾಡಿ, ಸಾಹಿತ್ಯದ ಕಾರ್ಯ ಕ್ರಮಗಳೆಂದರೆ ಇಂದು ದೂರದ ಊರುಗಳಿಂದ ಯಾರನ್ನಾದರೂ ಕರೆಯುವುದೇ ಕಷ್ಟಕರವಾಗಿದೆ. ಅವರನ್ನು ಆಮಂತ್ರಿಸುವುದರಿಂದ ಹಿಡಿದು ಸನ್ಮಾನದ ತನಕ ಕೆಲವರು ನಿರೀಕ್ಷಿಸುತ್ತಾರೆ. ಇತಂಹ ದಿನಗಳಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿರುವುದು ಜಿಲ್ಲೆಗೆ ಒಂದು ಹೆಮ್ಮೆಯ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆ ಸಾಹಿತ್ಯ ಕ್ಷೇತ್ರದ ಕೇಂದ್ರವಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆ ತರಿಸಿದೆ ಎಂದು ಹೇಳಿದರು.
ಪುಸ್ತಕ ಬಿಡುಗಡೆ: ಜಿ.ಎನ್.ಶ್ಯಾಮಸುಂದರ್ ಅವರಿಂದ ಶಾಮಗಾನ, ರತ್ನಬಡವನಹಳ್ಳಿ ಮೌನ ದಿಂಚರ, ವಿಜಯಪದ್ಮಶಾಲಿ ಭಾವೋಲ್ಲಾಸ, ಗೋಪಿ ಹಂದನಕೆರೆ ಜಗವೆಲ್ಲಾ ಕಾವ್ಯಮಯ, ಚಂದ್ರು ನಿಟ್ಟೂರು ಕಚಗುಳಿ ಪುಸ್ತಕ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ದಿವ್ಯಾಆಚಾರ್, ಹೆಚ್.ಎನ್. ಸುಧಾರಾಜು, ಶಶಿವಸಂತ, ಡಾ.ಗಂಧರ್ವ, ರಾಜೇಂದ್ರ ಪಾಟೀಲ್, ಅಣ್ಣಪ್ಪ ಮೇಟಿಗೌಡರು, ನರಸಿಂಹಯ್ಯ, ಎನ್.ವಿ.ವೆಂಟೇಶಯ್ಯ, ನಾಗರಾಜು, ದಯಾನಂದ ಸರಸ್ವತಿ, ಭೈರಪ್ಪ, ಬಿ.ಎನ್.ದಯಾನಂದ್, ರಂಗನಾಥಾಚಾರ್, ಡಾ.ಸುರೇಶ್ ನೆಗಳಗುಳಿ, ಜಬಿಲಾಲ್ ಮುಲ್ಲಾ, ಲಲಿತಾಸಂಪಿಗೆ, ಚಿನ್ನುಪ್ರಿಯ, ಸಿದ್ದುಸ್ವಾಮಿ, ವಿಜಯಾ.ಆರ್, ಹನುಮಂತಚಾರ್, ಪುಟ್ಟಣ್ಣ ಕೋಳಾಲ, ಭಾಗ್ಯ, ಕಲ್ಪತರು ಅಭಿನಯ ಶಾಲೆಯ ಆನಂದ್ ಸೇರಿದಂತೆ ಅನೇಕರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Kottigehara: ಅಪಘಾತದಿಂದ ಗಾಯಗೊಂಡ ನಾಗರಹಾವಿಗೆ ಚಿಕಿತ್ಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.