ಸಲಗ ನಡೆದಿದ್ದೇ ದಾರಿ
ಅಂಡರ್‌ವರ್ಲ್ಡ್ನಲ್ಲಿ ಮತ್ತೆ ವಿಜಯ್
Team Udayavani, Jun 14, 2019, 5:00 AM IST
“ಪ್ರತಿಯೊಬ್ಬ ಕಲಾವಿದನೊಳಗೆ ಒಬ್ಬ ನಿರ್ದೇಶಕನಿರುತ್ತಾನೆ, ಪ್ರತಿಯೊಬ್ಬ ನಿರ್ದೇಶಕನೊಳಗೂ ಒಬ್ಬ ಕಲಾವಿದನಿರುತ್ತಾನೆ …’
-ಹೀಗೆ ಹೇಳಿ ಪಕ್ಕದಲ್ಲಿ ಕುಳಿತಿದ್ದ “ದುನಿಯಾ’ ವಿಜಯ್ ಅವರ ಮುಖ ನೋಡಿದರು ಸುದೀಪ್. ಸುದೀಪ್ ಮಾತಿಗೆ ವಿಜಯ್ ಮುಗುಳ್ನಕ್ಕರು. ಹೀಗೆ ಇಬ್ಬರು ಹೀರೋಗಳು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿದ್ದು “ಸಲಗ’ ಚಿತ್ರ. ಈ ಚಿತ್ರದ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು. ಇದು ದುನಿಯಾ ವಿಜಯ್ ಹೊಸ ಕನಸು. ಚಿತ್ರರಂಗಕ್ಕೆ ಫೈಟರ್ ಆಗಿ ಬಂದು ನಟರಾಗಿ, ಆ್ಯಕ್ಷನ್ ಹೀರೋ ಆಗಿ ಚಿತ್ರರಂಗದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡ ವಿಜಯ್, ಈಗ ಸಿನಿಮಾದ ಮತ್ತೂಂದು ಮಗ್ಗುಲಿಗೆ ತೆರೆದುಕೊಂಡಿದ್ದಾರೆ. ಅದು ನಿರ್ದೇಶನ. “ಸಲಗ’ ಚಿತ್ರದ ಮೂಲಕ ವಿಜಯ್ ನಿರ್ದೇಶಕರಾಗುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಬೆಂಗಳೂರಿನ ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆಯಿತು. ನಟ ಸುದೀಪ್ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಕೋರಿದರು. ಜೊತೆಗೆ ಚಿತ್ರರಂಗಕ್ಕೆ ಫೈಟರ್ ಆಗಿ ಬಂದು ಇವತ್ತು ನಿರ್ದೇಶಕನಾಗುತ್ತಿರುವ ವಿಜಯ್ ಅವರ ಕನಸು, ಜಿಮ್‌ನಲ್ಲಿ ಬೆವರಿಳಿಸಿ ದೇಹವನ್ನು ಫಿಟ್ ಆಗಿ ಇಡುವಲ್ಲಿನ ಶ್ರಮದ ಬಗ್ಗೆಯೂ ಮಾತನಾಡಿದರು. ಜೊತೆಗೆ ಎರಡು ಸಾವಿರ ರೂಪಾಯಿಯನ್ನು ವಿಜಯ್ ಕೈಗಿಟ್ಟು, ಒಳ್ಳೆಯದಾಗಲಿ ಎಂದು ಹಾರೈಸಿದರು. ಮುಹೂರ್ತ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ಸುರೇಶ್, ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ಸೇರಿದಂತೆ ಅನೇಕರು ಬಂದು ಹಾರೈಸಿದರು.
“ಸಲಗ’ ಚಿತ್ರದ ಬಗ್ಗೆ ಮಾತನಾಡುವ ವಿಜಯ್, “ಇದು ನನ್ನ ಕನಸಿನ ಸಿನಿಮಾ. ಇದು ಔಟ್ ಅಂಡ್ ಔಟ್ ಆ್ಯಕ್ಷನ್ ಸಿನಿಮಾ. ಇದು ಕಾಡಿನೊಳಗಿರುವ ಸಲಗವಲ್ಲ, ನಾಡಿನೊಳಗಿರುವ ಸಲಗ. ಒಬ್ಬ ಅಮಾಯಕ ವ್ಯಕ್ತಿ ಭೂಗತಲೋಕದಲ್ಲಿ ಸಿಲುಕಿದಾಗ ನಡೆಯುವ ಕಥೆ. ಸಿನಿಮಾ ತುಂಬಾ ಅದ್ಧೂರಿಯಾಗಿ ಮೂಡಿಬರಲಿದೆ. ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಕೂಡಾ ಮಾಡಿಕೊಂಡಿದ್ದೇನೆ’ ಎಂದರು ವಿಜಯ್. ಜೊತೆಗೆ ಚಿತ್ರರಂಗದಲ್ಲಿ ತನಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಸುದೀಪ್ ಅವರಿಗೂ ಥ್ಯಾಂಕ್ಸ್ ಹೇಳಿದರು.
“ಟಗರು’ ಚಿತ್ರದ ಡಾಲಿ ಪಾತ್ರದ ಮೂಲಕ ವಿಲನ್ ಆಗಿ ಅಬ್ಬರಿಸಿದ್ದ ಧನಂಜಯ್ ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಮಿಂಚಲಿದ್ದಾರೆ. ಅವರು ಕೂಡಾ ತಮ್ಮ ಪಾತ್ರದ ಬಗ್ಗೆ ಖುಷಿಯಿಂದ ಮಾತನಾಡಿದರು. ಚಿತ್ರದಲ್ಲಿ ಸಂಜನಾ ಆನಂದ್ ನಾಯಕಿ. ಉಳಿದಂತೆ “ಟಗರು’ ಸರೋಜ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಟಗರು’ ಚಿತ್ರ ನಿರ್ಮಿಸಿದ್ದ ಶ್ರೀಕಾಂತ್ ಈಗ “ಸಲಗ’ ಮೂಲಕ ಮತ್ತೂಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Madikeri: ಲಾರಿ ಡಿಕ್ಕಿಯಾಗಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಸಾವು
Mumbai Cricket: ಸಚಿನ್ ತೆಂಡೂಲ್ಕರ್ ಸಲಹೆಯನ್ನೂ ನಿರ್ಲಕ್ಷಿಸಿದರಾ ಪೃಥ್ವಿ ಶಾ..
Teacher: ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
Marriages: ನಗರದಲ್ಲಿ 1 ತಿಂಗಳಲ್ಲಿ 13,000 ಮದುವೆ!
High Court: ಗುರು ರಾಘವೇಂದ್ರ ಬ್ಯಾಂಕ್ ಅಧ್ಯಕಗೆ ಜಾಮೀನು ನಿರಾಕರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.