ಬೆಳ್ಳಾರೆ: ರಸ್ತೆಯಲ್ಲೇ ಹರಿಯುತ್ತಿದೆ ಚರಂಡಿ ನೀರು
ಅಸಮರ್ಪಕ ಚರಂಡಿ ವ್ಯವಸ್ಥೆ ಕಾರಣ: ಸ್ಥಳೀಯರಲ್ಲಿ ರೋಗ ಭೀತಿ
Team Udayavani, Jun 14, 2019, 6:00 AM IST
ಬೆಳ್ಳಾರೆ: ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಮಳೆ ಬಂತೆಂದರೆ ಬೆಳ್ಳಾರೆ ಪೇಟೆ ಹೊಳೆಯಂತಾಗಿ ಕೆಸರು ಮಯವಾಗುತ್ತದೆ. ಚರಂಡಿ ನೀರು ಹರಿದು ಪೇಟೆಯ ರಸ್ತೆಯೂ ಹದಗೆಡುತ್ತಿದೆ. ವಾಹನ ಸವಾರರು ಹಾಗೂ ಪಾದಚಾರಿಗಳು ಸಂಕಷ್ಟ ಎದುರಿಸುವಂತಾಗಿದೆ.
ಬೆಳ್ಳಾರೆ ಮೇಲಿನ ಪೇಟೆಯ ಬಸ್ ನಿಲ್ದಾಣದ ಎದುರು ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದ್ದು, ಕೆಸರು ನೀರು ನಿಂತು ಬಸ್ ಬಂದಾಗ ಪ್ರಯಾಣಿಕರಿಗೆ ಕೆಸರಿನ ಅಭಿಷೇಕವಾಗುತ್ತಿದೆ. ಬಸ್ ನಿಲ್ದಾಣದ ಬಳಿ ಮಾತ್ರವಲ್ಲದೆ ಕೇಳಗಿನ ಪೇಟೆಯಿಂದ ಮೇಲಿನ ಪೇಟೆಯ ವರೆಗೂ ಅಸಮರ್ಪಕ ಚರಂಡಿ ವ್ಯವಸ್ಥೆಯಿಂದ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿದೆ. ರಸ್ತೆ ಬದಿಯಲ್ಲಿ ಕೆಸರು ನಿಂತು ಪಾದಾಚಾರಿಗಳಿಗೆ ನಡೆದಾಡಲೂ ಅಸಾಧ್ಯವಾಗಿದೆ.
ಪಾದಾಚಾರಿಗಳಿಗೂ ಸಂಕಷ್ಟ
ಅಸಮರ್ಪಕ ಸ್ಲಾಬ್ ಅಳವಡಿಕೆಯಿಂದ ಪೇಟೆಯ ಹಲವು ಕಡೆ ಚರಂಡಿ ನೀರು ರಸ್ತೆಗೆ ಬಂದು ಕೆಸರಾಗುತ್ತಿದೆ. ಇದರಿಂದ ರಸ್ತೆ ಬದಿ ನಡೆದುಕೊಂಡು ಹೋಗುವ ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ. ಈ ವರ್ಷದ ಮೊದಲ ಮಳೆಗೆ ಬೆಳ್ಳಾರೆ ಪೇಟೆಯಲ್ಲಿ ಹಲವರಿಗೆ ಕೆಸರಿನ ಸಿಂಚನವಾಗಿದೆ. ಬೆಳೆಯುತ್ತಿರುವ ಬೆಳ್ಳಾರೆಯಲ್ಲಿ ಚರಂಡಿ ಅವ್ಯವಸ್ಥೆ ತೀವ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ಬರುವ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪೇಟೆಯಲ್ಲಿ ನಡೆದಾಡುವಾಗ ತೊಂದರೆ ಅನುಭವಿಸುತ್ತಾರೆ. ಮಳೆಗಾಲಕ್ಕೂ ಮೊದಲೇ ಚರಂಡಿ ಸರಿಪಡಿಸಿ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ತಪ್ಪಿಸಬಹುದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ರೋಗ ಭೀತಿ
ಲೋಕೋಪಯೋಗಿ ಇಲಾಖೆ 1 ಕೋಟಿ ರೂ. ಅನುದಾನದಿಂದ ಬೆಳ್ಳಾರೆ ಪೇಟೆಯ ಚರಂಡಿ ದುರಸ್ತಿ ಕಾರ್ಯ ನಡೆಸಿದೆಯಾದರೂ ಕೆಲವೆಡೆ ಅಸಮರ್ಪಕವಾಗಿ ಸ್ಲಾ$Âಬ್ ಅಳವಡಿಸಲಾಗಿದೆ. ಹಲವು ಹೊಟೇಲ್‌ಗಳ ತ್ಯಾಜ್ಯ ಚರಂಡಿ ನೀರು ಸೇರುವುದರಿಂದ ಚರಂಡಿ ಸೊಳ್ಳೆ ಉತ್ಪಾದನೆಯ ಕೇಂದ್ರವಾಗಿ ಬದಲಾಗಿದೆ. ಚರಂಡಿಯಲ್ಲಿ ಎಸೆದ ನೀರಿನ ಬಾಟಲಿ, ಅಂಗಡಿಗಳ ತ್ಯಾಜ್ಯವೂ ಸೇರಿಕೊಂಡು ಅಲ್ಲಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದೆ.
ಮನವಿ ಸಲ್ಲಿಸಿದ್ದೇವೆ
ಚರಂಡಿ ಸರಿಪಡಿಸಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಮನವಿ ಸಲ್ಲಿಸಿದ್ದೇವೆ. ಅವರು ಮಾಡದಿದ್ದಲ್ಲಿ ಪಂಚಾಯತ್‌ನಿಂದಲೇ ಚರಂಡಿ ಶುಚಿಗೊಳಿಸಿ ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಲಾಗುವುದು. ಸ್ವತ್ಛತೆಗೆ ಪಂಚಾಯತ್ ತ್ಯಾಜ್ಯ ಸಂಗ್ರಹಣ ವಾಹನ ಬೆಳ್ಳಾರೆ ಅಂಗಡಿ ಹಾಗೂ ಹೊಟೇಲ್‌ಗಳ ಬಾಗಿಲಿಗೆ ಹೋಗುತ್ತಿದ್ದರೂ ಬಾಟಲಿ ಹಾಗೂ ತ್ಯಾಜ್ಯಗಳನ್ನು ಚರಂಡಿಗೆ ಎಸೆಯುತ್ತಿದ್ದಾರೆ. ಈ ರೀತಿ ಮಾಡದಂತೆ ಸೂಚನೆ ನೀಡಿದ್ದೇವೆ.
– ಶಕುಂತಳಾ ನಾಗರಾಜ್, ಬೆಳ್ಳಾರೆ ಗ್ರಾ.ಪಂ. ಅಧ್ಯಕ್ಷೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharmasthala: ಲಕ್ಷದೀಪಗಳ ಜಗಮಗ; ವಿದ್ಯುತ್ ದೀಪಗಳಿಂದ ಶೃಂಗಾರ
Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ
ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.