ಬ್ಯಾಡ್ಮಿಂಟನ್ಗೆ ಚಾಂಗ್ ವೀ ವಿದಾಯ
Team Udayavani, Jun 14, 2019, 6:19 AM IST
ಕೌಲಾಲಂಪುರ: ಮಾರಕ ಕ್ಯಾನ್ಸರ್ಗೆ ತುತ್ತಾಗಿ ಇದೀಗ ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ವಿಶ್ವದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಮಲೇಶ್ಯದ ಲೀ ಚಾಂಗ್ ವೀ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ಗೆ ವಿದಾಯ ಹೇಳಿದ್ದಾರೆ.
ಪ್ರಮುಖ ಕೂಟಗಳಲ್ಲಿ ಪದಕ ಗೆದ್ದಿರುವ ಚಾಂಗ್ ವೀಗೆ ಇದುವರೆಗೆ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ಶಿಪ್ ಕೂಟಗಳಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಗಿಲ್ಲ. ಈ ಕನಸು ನನಸಾಗುವ ಮೊದಲೇ ಅವರು ಮೂಗಿನ ಕ್ಯಾನ್ಸರ್ಗೆ ತುತ್ತಾದರು. ತಜ್ಞ ವೈದ್ಯರ ಪರಿಣಾಮಕಾರಿ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹಂತದಲ್ಲೇ ಗುರುವಾರ ವೃತ್ತಿ ಜೀವನಕ್ಕೆ ದಿಢೀರ್ ವಿದಾಯ ಘೋಷಿಸಿದ್ದಾರೆ.
348 ವಾರ ನಂಬರ್ ವನ್
ಚಾಂಗ್ ವೀ ಓರ್ವ ಪ್ರಬುದ್ಧ ಆಟಗಾರನಾಗಿ ತಮ್ಮ ಆಧಿಪತ್ಯ ಸ್ಥಾಪಿಸಿದ್ದರು. ಒಟ್ಟು 348 ವಾರಗಳ ಕಾಲ ವಿಶ್ವ ನಂ.1 ರ್ಯಾಂಕಿಂಗ್ ಆಟಗಾರನಾಗಿ ಮೆರೆದಿದ್ದರು. 3 ಬಾರಿ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿರುವ ಚಾಂಗ್ ವೀ, ಮಲೇಶ್ಯಕ್ಕೆ ಒಲಿಂಪಿಕ್ಸ್ ಬ್ಯಾಡ್ಮಿಂಟನ್ನಲ್ಲಿ ಪದಕ ಗೆದ್ದುಕೊಟ್ಟ ಮೊದಲ ಆಟಗಾರನೆಂಬ ಹಿರಿಮೆ ಹೊಂದಿದ್ದಾರೆ.
ಕಷ್ಟದ ನಿರ್ಧಾರ: ಚಾಂಗ್ ವೀ
“ನನ್ನ ಆರೋಗ್ಯದ ದೃಷ್ಟಿಯಿಂದ ನಿವೃತ್ತಿ ತೆಗೆದು ಕೊಂಡಿದ್ದೇನೆ, ಇದಕ್ಕಾಗಿ ನನಗೆ ವಿಷಾದವಿಲ್ಲ.’ ಒಲಿಂಪಿಕ್ಸ್ ಬಳಿಕ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿದ್ದೆ. ಆದರೆ ಹಠಾತ್ ಆಗಿ ನಿರ್ಧಾರ ತೆಗೆದುಕೊಳ್ಳ ಬೇಕಾಯಿತು. ಅನಾರೋಗ್ಯದ ಕಾರಣದಿಂದ ವೃತ್ತಿ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ. ಇಷ್ಟು ವರ್ಷದ ಕ್ರೀಡಾ ಪ್ರಯಾಣ ನನಗೆ ಸಂತೃಪ್ತಿ ತಂದಿದೆ. ‘ ಎಂದರು ಲೀ ಚಾಂಗ್ ವೀ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.