ರೈತರ ಬಳಿಗೆ ಕೃಷಿ ಇಲಾಖೆ: ಮೂಡುಬೆಳ್ಳೆ ಸಮಗ್ರ ಕೃಷಿ ಅಭಿಯಾನ
Team Udayavani, Jun 14, 2019, 6:10 AM IST
ಶಿರ್ವ: ಕೃಷಿ ಇಲಾಖೆಯು ಬಹುಪಯೋಗಿ ಕಾರ್ಯಕ್ರಮಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಗದ್ದೆಗೆ ಬಂದು ಜಾರಿಗೊಳಿಸುತ್ತಿದೆ ಎಂದು ಕಾಪು ಸಹಾಯಕ ಕೃಷಿ ಅಧಿಕಾರಿ ವಾದಿರಾಜ್ ಹೇಳಿದರು.
ಅವರು ಗುರುವಾರ ಮೂಡುಬೆಳ್ಳೆಗೆ ಆಗಮಿಸಿದ ಸಮಗ್ರ ಕೃಷಿ ಅಭಿಯಾನ 2019ರ -ಕೃಷಿ ಮಾಹಿತಿ ವಾಹನದ ಮುಂಭಾಗದಲ್ಲಿ ರೈತರಿಗೆ ಮಾಹಿತಿ ನೀಡಿ ಕೃಷಿ ಇಲಾಖೆಯ ಯೋಜನೆಗಳ ಕರಪತ್ರ ವಿತರಿಸಿ ಮಾತನಾಡಿದರು.
ನೇರ ನಗದು ವರ್ಗಾವಣೆ ಯೋಜನೆಯಡಿ ಭತ್ತದಲ್ಲಿ ನೂತನ ತಾಂತ್ರಿಕತೆಗಳ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳುವ ರೈತರ ಖಾತೆಗೆ ಪ್ರೋತ್ಸಾಹಧನ ನೇರ ಜಮೆ, ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ, ಕೃಷಿ ಭಾಗ್ಯ, ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ, ಮಣ್ಣು ಆರೋಗ್ಯ ಅಭಿಯಾನ, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ, ಸಾವಯವ ಕೃಷಿ, ಸಾವಯವ ಸಂತೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಕೃಷಿ ಯಾಂತ್ರೀಕರಣ, ಕೃಷಿ ಯಂತ್ರಧಾರೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಮತ್ತಿತರ ಯೋಜನೆಗಳ ಬಗ್ಗೆ ಅವರು ಮಾಹಿತಿ ನೀಡಿದರು.
ಬೆಳ್ಳೆ ಗ್ರಾ.ಪಂ. ಅಧ್ಯಕ್ಷೆ ರಂಜನಿ ಹೆಗ್ಡೆ, ಸದಸ್ಯ ರಾಜೇಂದ್ರ ಶೆಟ್ಟಿ, ಪಿಡಿಒ ವಸಂತಿ ಬಾಯಿ, ಸಿಬಂದಿ ರೇಷ್ಮಾ, ರಕ್ಷಿತ್, ಕೃಷಿ ಅಧಿಕಾರಿ ಪುಷ್ಪಲತಾ, ಸಹಾಯಕ ಕೃಷಿ ಅಧಿಕಾರಿ ಶೇಖರ್, ತೋಟಗಾರಿಕೆ ಇಲಾಖೆಯ ಶ್ವೇತಾ,ಕೃಷಿ ಅನುವುಗಾರ ರಾಘವೇಂದ್ರ ನಾಯಕ್ ಕಲ್ಲೊಟ್ಟು, ರೈತರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.