ರೋಗಗಳ ತಡೆಗೆ ಆಯುಷ್‌ ಚಿಕಿತ್ಸೆ ಉತ್ತಮ

ಭಾರತದ ಪುರಾತನ ಆಯುಷ್‌ ಚಿಕಿತ್ಸಾ ಪದ್ಧತಿ ಜಿಲ್ಲೆಯಲ್ಲಿ ಲಭ್ಯ: ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರಾಜಲಕ್ಷ್ಮೀ

Team Udayavani, Jun 14, 2019, 10:23 AM IST

rn-tdy-1..

ರಾಮನಗರದಲ್ಲಿ ಆಯೋಜಿಸಿದ್ದ ಜನಪರ ಮಾಹಿತಿ -ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರಾಜಲಕ್ಷ್ಮೀ ಮಾತನಾಡಿದರು.

ರಾಮನಗರ: ಮಾನವನನ್ನು ಕಾಡುವ ಎಲ್ಲಾ ರೋಗಗಳಿಗೂ ಆಯುರ್ವೇದ, ಯುನಾನಿ, ಹೋಮಿಯೋಪತಿ ಚಿಕಿತ್ಸಾ ಪದ್ದತಿಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ಸಾಧ್ಯವಿದೆ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರಾಜಲಕ್ಷ್ಮೀ ತಿಳಿಸಿದರು.

ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಜನಪರ ಮಾಹಿತಿ -ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಆಯುಷ್‌ ಇಲಾಖೆ ಸೌಲಭ್ಯಗಳು, ಇಲಾಖೆ ಕಾರ್ಯವೈಖರಿಗಳ ಕುರಿತು ಸುದ್ದಿಗಾರರೊಂದಿಗೆ ಸಂವಾದ ನಡೆಸಿದ ವೇಳೆ ಅವರು ಮಾತನಾಡಿ, ಈ ಮೂರು ಪದ್ಧತಿಯ ಚಿಕಿತ್ಸಾ ಸೌಲಭ್ಯ ಜಿಲ್ಲೆಯಲ್ಲಿ ಲಭ್ಯವಿದೆ ಎಂದರು.

ಅರಿವು ಮೂಡಿಸಲು ಪ್ರಯತ್ನ: ಸಾವಿರಾರು ವರ್ಷಗಳ ಇತಿಹಾಸವಿರುವ, ಯಾವುದೇ ಅಡ್ಡ ಪರಿಣಾಮಗಳಿಲ್ಲದ ಭಾರತದ ಪುರಾತನ ಆಯುಷ್‌ ಚಿಕಿತ್ಸಾ ಪದ್ದತಿ ಜಿಲ್ಲೆಯಲ್ಲಿ ಲಭ್ಯವಿದೆ. ಜಿಲ್ಲಾದ್ಯಂತ 8 ಚಿಕಿತ್ಸಾಲಯ ಗಳಿವೆ. ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚು ಅರಿವು ಮೂಡಬೇಕಿದ್ದು, ಇದಕ್ಕಾಗಿ ಆಯುಷ್‌ ಇಲಾಖೆ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.

5 ವಿಧಾನದಲ್ಲಿ ಆಯುರ್ವೇದ ಚಿಕಿತ್ಸೆ: ಆಯುರ್ವೇದ ಚಿಕಿತ್ಸಾ ಪದ್ಧತಿಯ ಬಗ್ಗೆ ವಿವರಿಸಿದ ಅವರು, ಮಾನವ ದೇಹದಲ್ಲಿ ವಾತ, ಪಿತ್ತ ಮತ್ತು ಕಫ‌ ಈ ಮೂರು ಸಮಸ್ಯೆಗಳಿಂದಾಗಿ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಇವುಗಳನ್ನು ಸ್ನೇಹ, ಸ್ವೇಧ, ವಮನ, ವೇಚ, ನಸ್ಯ (ಶಿರೋಬಸ್ತಿ) ಎಂಬ 5 ವಿಧಾನಗಳ ಮೂಲಕ ಚಿಕಿತ್ಸೆ ನೀಡಿ ಅನಾರೋಗ್ಯವನ್ನು ಗುಣಪಡಿಸಲಾಗುವುದು ಎಂದರು.

ರಾಮನಗರ ತಾಲೂಕಿನ ತುಂಬೇನಹಳ್ಳಿ, ಹೊಸೂರು ಗ್ರಾಮ, ಕನಕಪುರ ತಾಲೂಕಿನ ಎಲವಳ್ಳಿ, ಜಿಜ್ಜಹಳ್ಳಿ, ಹೊರಳಗಳ್ಳು, ಕೊಳಗಂಡನಹಳ್ಳಿ ಗ್ರಾಮ, ಮಾಗಡಿಯ ಪಟ್ಟಣ ಮತ್ತು ಮೋಟಗಾನಹಳ್ಳಿ ಮತ್ತು ಚನ್ನಪಟ್ಟಣದ ನಗರದಲ್ಲ ಆಯುರ್ವೇದ ಚಿಕಿತ್ಸೆ ಲಭ್ಯವಿದೆ ಎಂದರು.

ಸಾರ್ವಜನಿಕರನ್ನು ಸೆಳೆಯಲು ಪ್ರಯತ್ನ: ಆಯುರ್ವೇದ ಚಿಕಿತ್ಸಾ ಪದ್ಧತಿಯ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಅರಿವು ಮೂಡಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಉಚಿತ ತಪಾಸಣೆ ಶಿಬಿರ, ಅರಿವು ಕಾರ್ಯಕ್ರಮಗಳ ಮೂಲಕ ಆಯುಷ್‌ ಚಿಕಿತ್ಸೆಯತ್ತ ಸಾರ್ವಜನಿಕರನ್ನು ಸೆಳೆಯುವ ಪ್ರಯತ್ನ ಮುಂದುವರಿದಿದೆ. ಆಯುಷ್‌ ವೈದ್ಯರು ನಿಗದಿತ ಪ್ರಮಾಣದಲ್ಲಿ ಇದ್ದಾರೆ. ಆದರೆ, ಆಡಳಿತಾತ್ಮಕ ಸಿಬ್ಬಂದಿ, ಗ್ರೂಪ್‌ ಸಿ, ಎಸ್‌ಡಿಎ, ಎಫ್ಡಿಎ ಹಾಗೂ ಡಿ ಗ್ರೂಪ್‌ ಹುದ್ದೆಗಳು ಖಾಲಿ ಎಂದು ತಿಳಿಸಿದರು.

ಅರಬ್‌ ಮೂಲದ ಯೂನಾನಿ ಪದ್ಧತಿ: ಯುನಾನಿ ವೈದ್ಯೆ ಡಾ.ಜಮೀಲಾ ಮಾತನಾಡಿ, ಯೂನಾನಿ ಚಿಕಿತ್ಸಾ ಪದ್ಧತಿ ಅರಬ್‌ ದೇಶದ ಮೂಲದ್ದಾಗಿದೆ. ಭಾರತದಲ್ಲಿ ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಈ ಪದ್ಧತಿಯಲ್ಲೂ ಸಸ್ಯ ಮೂಲ ಮತ್ತು ಲವಣಗಳಿಂದ ತಯಾರಾದ ಔಷಧಗಳನ್ನು ನೀಡಲಾಗುತ್ತದೆ. ಈ ಪದ್ಧತಿಯಲ್ಲೂ ವಾತ, ಪಿತ್ತ, ಕಫಾ ಮತ್ತು ಸೌಧ ಸಮಸ್ಯೆಗಳಿಂದ ಕಾಯಿಲೆಗಳು ಕಾಡುತ್ತವೆ. ಆಹಾರ ನಿಯಂತ್ರಣ, ಔಷಧ, ಪಂಚಕರ್ಮ ಚಿಕಿತ್ಸೆಗಳ ಮೂಲಕ ರೋಗವನ್ನು ಗುಣಪಡಿಸಲಾಗುವುದು. ರಾಮನಗರದ ಜಿಲ್ಲಾಸ್ಪತ್ರೆ, ಚನ್ನಪಟ್ಟಣದ ಆಸ್ಪತ್ರೆ, ಕನಕಪುರದಲ್ಲಿ ಯೂನಾನಿ ಚಿಕಿತ್ಸಾಲಯಗಳಿವೆ ಎಂದರು.

ಹೋಮಿಯೋಪತಿ ಪರಿಣಾಮಕಾರಿ: ಜರ್ಮನ್‌ ಮೂಲದ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ವಿಶಿಷ್ಠ ಪದ್ಧತಿಯಾಗಿದೆ. ಸಮಾನ್ಯ ಲಕ್ಷಣಗಳು ಕಾಣಿಸಿಕೊಂಡರೂ ಪ್ರತಿಯೊಬ್ಬರಿಗೂ ಒಂದೇ ತರಹದ ಚಿಕಿತ್ಸೆ ಈ ಪದ್ಧತಿಯಲ್ಲಿ ಇಲ್ಲ. ಪ್ರತಿಯೊಬ್ಬ ರೋಗಿಯನ್ನು ವಿಶೇಷವಾಗಿಯೇ ಪರಿಗಣಿಸಿ, ಔಷಧವನ್ನು ನಿರ್ಧರಿಸಲಾಗುತ್ತದೆ. ಮಾಗಡಿ ತಾಲೂಕಿನ ಸೋಲೂರಿನಲ್ಲಿ ಸದ್ಯ ಹೋಮಿಯೋಪತಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಯೋಗಾಭ್ಯಾಸದಿಂದ ರೋಗ ದೂರ: ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ವೈದ್ಯ ಡಾ.ಹರ್ಷಿತ ಮಾತನಾಡಿ, ಪಂಚಭೂತಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಹೈಡ್ರೋ ತೆರಫಿ(ಜಲ ಚಿಕಿತ್ಸೆ), ಮಡ್‌ ತೆರಫಿ (ಮಣ್ಣಿನ ಸ್ನಾನ), ಮಸಾಜ್‌ ಮತ್ತಿತರ ಚಿಕಿತ್ಸಾ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಿರಂತರ ಯೋಗಾಭ್ಯಾಸದಿಂದ ರೋಗಗಳು ಮಾನವ ದೇಹವನ್ನು ಕಾಡುವುದಿಲ್ಲ. ಜೂನ್‌ 21ರಂದು ವಿಶ್ವ ಯೋಗ ದಿನವನ್ನು ಹಮ್ಮಿಕೊಳ್ಳಲಾಗಿದೆ. ಇದೇ ದಿನ ವಿಶ್ವದ 197 ರಾಷ್ಟ್ರಗಳಲ್ಲಿ ವಿಶ್ವ ಯೋಗ ದಿನ ಆಚರಣೆಯಾಗುತ್ತಿದೆ. ರಾಮನಗರ ಜಿಲ್ಲೆಯಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಆಯುಷ್‌ ಇಲಾಖೆಯೊಂದಿಗೆ ಪತಂಜಲಿ ಯೋಗ ಕೇಂದ್ರ ಮತ್ತು ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರಿ ವಿಶ್ವ ವಿದ್ಯಾಲಯದ ಸದಸ್ಯರು ಸಹ ಭಾಗಿಯಾಗಲಿದ್ದಾರೆ ಎಂದರು.

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಎಸ್‌. ಶಂಕರಪ್ಪ ಹಾಜರಿದ್ದರು.

ಟಾಪ್ ನ್ಯೂಸ್

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

am

Recipe: ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ಈ ಚಟ್ನಿ!ಒಂದ್ಸಲ ಈ ವಿಧಾನದಲ್ಲಿ ಟ್ರೈ ಮಾಡಿ…

1-maha-kumbha

Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

Channapatna: ಕೆಲಸದ ಒತ್ತಡ ತಾಳಲಾರದೆ ಮುಖ್ಯ ಶಿಕ್ಷಕ ವಿಷ ಸೇವಿಸಿ ಆತ್ಮಹ*ತ್ಯೆ

10-ramanagara

Ramanagara: ಕಾಡಾನೆ ದಾಳಿಗೆ ರೈತ ಬಲಿ

DOG (2)

Ramanagara:ನಾಯಿ ಜತೆ ಮೂವರ ಅನೈಸರ್ಗಿಕ ಲೈಂಗಿ*ಕ ಚಟುವಟಿಕೆ: ಓರ್ವ ಸೆರೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

Magadi Bus Stand: ಮಾಗಡಿ ಬಸ್‌ ನಿಲ್ದಾಣದಲ್ಲಿ ಸಮಸ್ಯೆಗಳ ಸರಮಾಲೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Government scraps ‘no-detention policy’ for Classes 5 and 8 in central schools

Rule; 5, 8ನೇ ತರಗತಿಯಲ್ಲಿ ಫೈಲ್‌ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!

1-biren

Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು

Team India; A spinner from the Karnataka coast who joined Team India as a replacement for Ashwin

Team India; ಅಶ್ವಿನ್‌ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್‌

1-cris

Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ

Kambli-health

Kambli Health: ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿ ಆರೋಗ್ಯ ಸ್ಥಿತಿ ಗಂಭೀರ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.